Home Uncategorized Breaking; ಟ್ರೈನಿಂಗ್‌ಗೆ ಹೆದರಿ ನೇಣಿಗೆ ಶರಣಾದ ಪೊಲೀಸ್ ಪೇದೆ

Breaking; ಟ್ರೈನಿಂಗ್‌ಗೆ ಹೆದರಿ ನೇಣಿಗೆ ಶರಣಾದ ಪೊಲೀಸ್ ಪೇದೆ

49
0

ಬಳ್ಳಾರಿ: ಗಣಿನಾಡು ಬಳ್ಳಾರಿ ನಗರದ ಡಿಎಆರ್ ಪೊಲೀಸ್ ಪೇದೆಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳವಾರ ನಡೆದಿದೆ. ನೆರೆಯ ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕು ಆನೇಕಲ್ ತಾಂಡಾದ ಪ್ರಕಾಶ್ ನಾಯ್ಕ್ (25) ಮೃತ ದುರ್ದೈವಿ‌.

2021 ನೇ ಬ್ಯಾಂಚ್‍‌ನಲ್ಲಿ ಡಿಎಆರ್ ಪೊಲೀಸ್ ಆಗಿ ನೇಮಕವಾಗಿದ್ದ ಪ್ರಕಾಶ್ ನಾಯ್ಕ್ ಬಳ್ಳಾರಿ ನಗರದ ಡಿಎಆರ್ ಹೆಡ್ ಕ್ವಾಟ್ರಸ್ ರೂಮ್ ನಲ್ಲಿ ನೇಣಿಗೆ ಶರಣಾಗಿದ್ದಾರೆ.
ಟ್ರೈನಿಂಗ್‌ಗೆ ಹೆದರಿ ಕಾನ್‌ಸ್ಟೇಬಲ್ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ಮೂಡಿದೆ. ಪ್ರಕಾಶ್ ನಾಯ್ಕ್‌ಗೆ ಆಂತರಿಕ ಭದ್ರತೆ (D- SWAT) ಟ್ರೈನಿಂಗ್‌ಗಾಗಿ ಬೆಂಗಳೂರಿಗೆ ತೆರಳುವಂತೆ ಅಧಿಕಾರಿಗಳು ತಿಳಿಸಿದ್ದಾರೆ.

ಇದಾದ ಬಳಿಕ ಪ್ರಕಾಶ್ ನಾಯ್ಕ್ ಕ್ವಾಟ್ರಸ್ ರೂಂನಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಪ್ರಕಾಶ್ ಟ್ರೈನಿಂಗ್‌ಗೆ ಹೆದರಿ ನೇಣಿಗೆ ಶರಣಾಗಿರುವ ಶಂಕೆ ಸದ್ಯ ವ್ಯಕ್ತವಾಗಿದೆ. ಬೆಂಗಳೂರಿನಲ್ಲಿ ಎರಡು ತಿಂಗಳು ಕಾಲ ನಡೆಯುವ ಡಿ.ಶಾಟ್ ತರಬೇತಿಗೆ (ಭಯೋತ್ಪಾದಕ ನಿಗ್ರಹ ) ತೆರಳುವಂತೆ ಡಿಎಆರ್ ನ ಹಿರಿಯ ಅಧಿಕಾರಿಗಳು ಸೂಚಿಸಿದ್ದರು.

ಇದಕ್ಕೆ ಪ್ರಕಾಶ್ ನಾಯ್ಕ ವಿರೋಧ ವ್ಯಕ್ತಪಡಿಸಿದ್ದರು. ಸೋಮವಾರ ರಾತ್ರಿ ಕ್ವಾಟ್ರಸ್ ರೂಮ್ ನಲ್ಲೇ ನೇಣಿಗೆ ಶರಣಾಗಿದ್ದಾರೆ ಎಂದು ಮೂಲಗಳು ತಿಳಿಸಿದ್ದಾರೆ. 2021ನೇ ಸಾಲಿನಲ್ಲಿ ಡಿಎಆರ್ ಪೊಲೀಸ್ ಪೇದೆಯಾಗಿ ಪ್ರಕಾಶ್ ನಾಯ್ಕ್ ನೇಮಕವಾಗಿದ್ದನು. ಈ ಕುರಿತು ಗಾಂಧಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

The post Breaking; ಟ್ರೈನಿಂಗ್‌ಗೆ ಹೆದರಿ ನೇಣಿಗೆ ಶರಣಾದ ಪೊಲೀಸ್ ಪೇದೆ appeared first on Ain Live News.

LEAVE A REPLY

Please enter your comment!
Please enter your name here