Purnima Srinivas; ನಾನು ಕಾಂಗ್ರೆಸ್ ಸೇರ್ಪಡೆ ಆಗುವುದು ಖಚಿತ – ಪೂರ್ಣಿಮಾ ಶ್ರೀನಿವಾಸ್
ಚಿತ್ರದುರ್ಗ;- ನಾನು ಕಾಂಗ್ರೆಸ್ ಸೇರ್ಪಡೆ ಆಗುವುದು ಖಚಿತ ಎಂದು ಚಿತ್ರದುರ್ಗ ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಹೇಳಿಕೆ ನೀಡಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು, ಇದೇ ದಿನಾಂಕ 20 ರಂದು ಕಾಂಗ್ರೆಸ್ ಸೇರಲು ನಿರ್ಧಾರ ಮಾಡಿದ್ದೇನೆ. ಇಂದು ಮುಖಂಡರ ಸಭೆ ಕರೆದಿರುವೆ. ಅವರ ಬಳಿ ಮಾತನಾಡಿ ತೀರ್ಮಾನ ಮಾಡುವೆ. ನಮ್ಮ ಸಮಾಜದ & ಹಿತ ಬಯಸುವವರು ಕಾಂಗ್ರೆಸ್ ಗೆ ಆಹ್ವಾನಿಸಿದ್ದರು. ಡಿಕೆಶಿ ಸಾಹೇಬ್ರು ಕೂಡಾ ಆಹ್ವಾನ ಮಾಡಿದ್ದರು. ಹೀಗಾಗಿ ಕಾಂಗ್ರೆಸ್ ಸೇರ್ಪಡೆ ಖಚಿತ ಎಂದರು.
ಯಾವುದೇ ಬೇಡಿಕೆ ನಾನು ಇಟ್ಟಿಲ್ಲ. ಹಿಂದುಳಿದ ವರ್ಗಗಳಿಗೆ ನ್ಯಾಯ ಸಿಗಬೇಕು ಎಂಬುದು ನಮ್ಮ ಉದ್ದೇಶ. ಅಭಿವೃದ್ಧಿ ಪರ ಚಿಂತನೆ ಮಾಡುವ ಮನಸ್ಥಿತಿ ಇದೆ. ನಮ್ಮ ವೈಯಕ್ತಿಕ ಯಾವುದೇ ಬೇಡಿಕೆ ಇಲ್ಲ. ಬಿಜೆಪಿಯಲ್ಲಿ ಯಾವುದೇ ಅನ್ಯಾಯವಾಗಿಲ್ಲ. ಇಬ್ಬರು ಸಿಎಂ ಗಳು ಕ್ಷೇತ್ರದ ಅಭಿವೃದ್ಧಿಗೆ ಸಹಾಕರ ನೀಡಿದ್ದರು. ಕೋಟ್ಯಾಂತರ ಅನುದಾನ ನೀಡಿದ್ದರು, ಕೆಲಸ ಕೂಡಾ ಮಾಡಿರುವೆ. ಸಮುದಾಯದ ವಿಷಯದಲ್ಲಿ ಕೊಟ್ಟ ಮಾತು ಉಳಿಸಿಕೊಂಡಿಲ್ಲ. ಸಮುದಾಯ 25 ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ಇದೆ. ರಾಜಕೀಯ ಪ್ರಾತಿನಿಧ್ಯ& ಬೇರೆ ಸ್ಥಾನಮಾನ ವಿಷಯದಲ್ಲಿ ಗೊಂದಲ ಆಯ್ತು. ಯಾವುದೇ ಡಿಮ್ಯಾಂಡ್ ನಾನು ಕಾಂಗ್ರೆಸ್ ನಾಯಕರ ಮುಂದೆ ಇಟ್ಟಿಲ್ಲ. ಜನಪರ ಹಿತಕ್ಕೆ ಮಾತ್ರ ನಮ್ಮ ಸಹಮತ. ಪತಿಗೆ MLC ಟಿಕೆಟ್ ನೀಡುತ್ತಾರೆ ಎಂದು ನಾನು ಹೋಗಲ್ಲ. ಕೇಳುವುದು ಶ್ರೀನಿವಾಸ್ ಅವರ ಹಕ್ಕು. ರಾಜ್ಯದ ಅಧ್ಯಕ್ಷರಾಗಿ, ಜನಾಂಗ ಪ್ರತಿನಿಧಿಸುವವರು. MLC ಟಿಕೆಟ್ ನೀಡಿದರೆ ನಮಗೆ ಸಂತೋಷ ಎಂದರು.
ಇನ್ನೂ ಈ ಬಗ್ಗೆ ಸಿಎಂ & ಡಿಸಿಎಂ ಜೊತೆ ಚರ್ಚೆ ಮಾಡಿದ್ದೇನೆ. ಬೆಂಬಲುಗರ ಸಭೆ ನಡೆಸಿದ್ದು, ನಮ್ಮ ನಿರ್ಧಾರಕ್ಕೆ ಬೆಂಬಲವಿದೆ ಎಂದು ಹೇಳಿದ್ದಾರೆ ಎಂದರು.
The post Purnima Srinivas; ನಾನು ಕಾಂಗ್ರೆಸ್ ಸೇರ್ಪಡೆ ಆಗುವುದು ಖಚಿತ – ಪೂರ್ಣಿಮಾ ಶ್ರೀನಿವಾಸ್ appeared first on Ain Live News.
