Category: ನಗರ

  • ಆಜ್ ತಕ್ ಕನ್ಸಲ್ಟಿಂಗ್ ಎಡಿಟರ್ ಸುಧೀರ್ ಚೌಧರಿ ಬಂಧಿಸುವಂತಿಲ್ಲ, ಆದರೆ ತನಿಖೆ ಅಗತ್ಯವಿದೆ: ಹೈಕೋರ್ಟ್

    ಆಜ್ ತಕ್ ಕನ್ಸಲ್ಟಿಂಗ್ ಎಡಿಟರ್ ಸುಧೀರ್ ಚೌಧರಿ ಬಂಧಿಸುವಂತಿಲ್ಲ, ಆದರೆ ತನಿಖೆ ಅಗತ್ಯವಿದೆ: ಹೈಕೋರ್ಟ್

    ಬೆಂಗಳೂರು:

    ರಾಜ್ಯ ಸರ್ಕಾರದ ಯೋಜನೆ ಕುರಿತು ತಪ್ಪು ಮಾಹಿತಿ ಹರಡಿದ ಆರೋಪ ಎದುರಿಸುತ್ತಿರುವ ಆಜ್ ತಕ್ ಸುದ್ದಿ ವಾಹಿನಿಯ ಕನ್ಸಲ್ಟಿಂಗ್ ಎಡಿಟರ್ ಸುಧೀರ್ ಚೌಧರಿ ಅವರನ್ನು ಬಂಧಿಸದಂತೆ ಕರ್ನಾಟಕ ಹೈಕೋರ್ಟ್‌ ಪೊಲೀಸರಿಗೆ ನಿರ್ದೇಶನ ನೀಡಿದೆ. ಆದರೆ ಅವರ ವಿರುದ್ಧ ತನಿಖೆಯ ಅಗತ್ಯ ಇದೆ ಎಂದು ಹೇಳಿದೆ.

    ಅಲ್ಪಸಂಖ್ಯಾತರಿಗೆ ವಾಣಿಜ್ಯ ವಾಹನ ಖರೀದಿಗೆ ಸಬ್ಸಿಡಿ ನೀಡುವ ರಾಜ್ಯ ಸರ್ಕಾರದ ಯೋಜನೆ ಕುರಿತು ತಪ್ಪು ಮಾಹಿತಿ ಹರಡಿದ ಆರೋಪದ ಮೇಲೆ ಸುಧೀರ್ ಚೌಧರಿ ವಿರುದ್ಧ ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

    ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್ ಅನ್ನು ಪ್ರಶ್ನಿಸಿ ಚೌಧರಿ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ಆರೋಪಿಯ ವಿರುದ್ಧ ತನಿಖೆ ನಡೆಸುವ ಅಗತ್ಯ ಇದೆ. ಆದರೆ ಕಸ್ಟಡಿ ವಿಚಾರಣೆಯ ಅಗತ್ಯವಿಲ್ಲ ಎಂದು ಹೇಳಿ, ವಿಚಾರಣೆಯನ್ನು ಸೆಪ್ಟೆಂಬರ್ 20ಕ್ಕೆ ಮುಂದೂಡಿದೆ.

    ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ನಿಯಮಿತದ ಸಹಾಯಕ ಆಡಳಿತಾಧಿಕಾರಿ ಶಿವಕುಮಾರ್ ಎಸ್ ನೀಡಿದ ದೂರಿನ ಮೇರೆಗೆ ಬೆಂಗಳೂರಿನ ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ಚೌಧರಿ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.

    ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೇಮಂತ್ ಚಂದನಗೌಡರ ಅವರಿದ್ದ ಏಕಸದಸ್ಯ ಪೀಠ, ವಿಚಾರಣೆ ವೇಳೆ ಪ್ರಾಥಮಿಕ ಹಂತದ ತನಿಖೆ ನಡೆಯಬೇಕಿದೆ ಎಂದು ಹೇಳಿದ್ದಾರೆ.

    ಚೌಧರಿ ವಿರುದ್ಧ ಐಪಿಸಿ ಸೆಕ್ಷನ್‌ 505 ಮತ್ತು 153ಎ ಅನ್ವಯ ಪ್ರಕರಣ ದಾಖಲಿಸಲಾಗಿದೆ. ಸುದ್ದಿ ವಾಹಿನಿ ತನ್ನ ಕಾರ್ಯಕ್ರಮದಲ್ಲಿ ತಪ್ಪು ಮಾಹಿತಿ ನೀಡಿದೆ ಎಂದು ರಾಜ್ಯ ಸರ್ಕಾರ ಹೇಳಿರುವ ಹೊರತಾಗಿಯೂ ಅದು ತನ್ನ ಹೇಳಿಕೆಗಳನ್ನು ವಾಪಸ್‌ ಪಡೆದಿಲ್ಲ ಎಂದು ನ್ಯಾಯಮೂರ್ತಿ ಹೇಮಂತ್‌ ಚಂದನ್‌ಗೌಡರ್‌ ಅವರು ಹೇಳಿದ್ದಾರೆ.

  • Cauvery Water to Tamil Nadu: ಪ್ರಧಾನಿ ಎದಿರು ಮಾತಾಡುವ ಧೈರ್ಯವಿಲ್ಲದ ಬಿಜೆಪಿ ಅವರಿಂದಲೇ ರಾಜ್ಯದ ಹಿತಕ್ಕೆ ಧಕ್ಕೆ: ಡಿಸಿಎಂ ಡಿ.ಕೆ.ಶಿವಕುಮಾರ್

    Cauvery Water to Tamil Nadu: ಪ್ರಧಾನಿ ಎದಿರು ಮಾತಾಡುವ ಧೈರ್ಯವಿಲ್ಲದ ಬಿಜೆಪಿ ಅವರಿಂದಲೇ ರಾಜ್ಯದ ಹಿತಕ್ಕೆ ಧಕ್ಕೆ: ಡಿಸಿಎಂ ಡಿ.ಕೆ.ಶಿವಕುಮಾರ್

    ಬೆಂಗಳೂರು:

    “ಕಾವೇರಿ ವಿಚಾರ, ರಾಜ್ಯದ ಹಿತಾಸಕ್ತಿಯ ವಿಚಾರಗಳಿಗೆ ಪ್ರಧಾನಿ ಮೋದಿಯವರ ಎದುರು ನಿಂತು ಮಾತನಾಡುವ ಧೈರ್ಯ ರಾಜ್ಯ ಬಿಜೆಪಿ ನಾಯಕರಿಗಿಲ್ಲ. ಕರ್ನಾಟಕಕ್ಕೆ ತೊಂದರೆ ಆಗಿರುವುದೇ ಇಂತಹ ನಾಯಕರಿಂದ” ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ತಿರುಗೇಟು ನೀಡಿದ್ದಾರೆ.

    ಕುಮಾರಕೃಪಾ ಅತಿಥಿಗೃಹದ ಬಳಿ ಮಾಧ್ಯಮಗಳಿಗೆ ಶುಕ್ರವಾರ ಅವರು ಪ್ರತಿಕ್ರಿಯೆ ನೀಡಿದರು.

    ಕಾವೇರಿ ನೀರಿನ ವಿಚಾರದಲ್ಲಿ ಕಾಂಗ್ರೆಸ್ ರಾಜಕೀಯ ಮಾಡುತ್ತಿದೆ ಎಂಬ ಬಿಜೆಪಿ ಆರೋಪದ ಬಗ್ಗೆ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿದ ಅವರು: “ಕೇಂದ್ರ ಪರಿಸರ ಇಲಾಖೆಯಿಂದ ಅನೇಕ ಕಾಮಗಾರಿಗೆ ನಿರಪೇಕ್ಷಣಾ ಪತ್ರ ತರಲು ಬಿಜೆಪಿ ಕೈಯಲ್ಲಿ ಆಗಿಲ್ಲ. ರಾಜ್ಯದ ಅಭಿವೃದ್ದಿಗೆ ಅವರಿಂದಲೇ ತೊಂದರೆ ಆಗುತ್ತಿದೆ. ನೀರಿನ ವಿಚಾರದಲ್ಲಿ ರಾಜಕಾರಣ ನಮಗೆ ಬೇಕಿಲ್ಲ. ಎಲ್ಲರೂ ಒಟ್ಟಿಗೆ ಸೇರಿ ಕೆಲಸ ಮಾಡೋಣ ಎನ್ನುವುದು ನನ್ನ ಧೋರಣೆ. ಬಿಜೆಪಿಯವರು ನನಗೆ ಬೈಯಲಿ, ಉಗಿಯಲಿ, ಏನು ಬೇಕಾದರೂ ಹೇಳಲಿ, ನಾನು ರಾಜ್ಯದ ಹಿತಾಸಕ್ತಿಗೆ ಕೆಲಸ ಮಾಡುತ್ತೇನೆ.”

    ಎಲ್ಲಾ ನದಿ ವ್ಯಾಜ್ಯಗಳು ಮೂರು ವರ್ಷಗಳಲ್ಲಿ ಇಥ್ಯರ್ತವಾಗಬೇಕು ಎಂದು ಕೇಂದ್ರ ಸರ್ಕಾರವೇ ಕಾನೂನು ಮಾಡಿದೆ. ಅವರೇ ಎರಡೂ ರಾಜ್ಯಗಳನ್ನು ಕೂರಿಸಿಕೊಂಡು ಸಮಸ್ಯೆ ಬಗೆಹರಿಸಬಹುದಲ್ಲವೇ? ಎಂಥೆಂಥ ಸಮಸ್ಯೆಗಳನ್ನು ಬಗೆಹರಿಸಲಾಗುತ್ತದೆ, ಇದು ಆಗುವುದಿಲ್ಲವೇ? ಮೇಕೆದಾಟು ಯೋಜನೆ ಆಗಿದ್ದರೆ ಈ ಸಮಸ್ಯೆ ಬರುತ್ತಿರಲಿಲ್ಲ.

    ಇಂಡಿಯಾ ಸಭೆ ಮಾಡುತ್ತಾರೆ, ನೀರಿನ ವಿಚಾರಕ್ಕೆ ಸಭೆ ನಡೆಸಲು ಆಗುವುದಿಲ್ಲವೇ ಎನ್ನುವ ಪ್ರತಿಪಕ್ಷಗಳ ಪೃಶ್ನೆಗೆ, “ನಾವು ಎಲ್ಲಾ ಸಭೆ ಮಾದಿದ್ದೇವೆ. ಆಯಾಯಾ ನಾಯಕರಿಗೆ ಅವರ ರಾಜ್ಯಗಳ ಹಿತಾಸಕ್ತಿ ಮುಖ್ಯ. ಮೇಲೆ ಕುಳಿತಿರುವ ಕೇಂದ್ರ ಸರ್ಕಾರಕ್ಕೆ ವಾಸ್ತಾವಾಂಶ ಗೊತ್ತಿದೆ. ಇಬ್ಬರನ್ನು ಕರೆಸಿ ಮಾತುಕತೆ ನಡೆಸಲಿ.”

    ಕಾನೂನು ತಜ್ಞರ ಸಲಹೆಯಂತೆ ನಡೆಯುತ್ತೇವೆ

    “ಕಾವೇರಿ ನೀರು ಹರಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರಕ್ಕೆ ಹಾಗೂ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ಮನವಿ ಸಲ್ಲಿಸುವ ಮೊದಲು ಎರಡು ದಿನ ನೀರು ಹರಿಸಿ ಎಂದು ಕಾನೂನು ತಜ್ಞರು ಸಲಹೆ ನೀಡಿದ್ದಾರೆ.

    ನಾವು ನೀರು ಬಿಡುವುದಿಲ್ಲ ಎಂದು ಹೇಳಿದ್ದೆವು. ಆದರೆ ಸುಪ್ರೀಂ ಕೋರ್ಟಿನ ಮುಂದೆ ಹೋದಾಗ ಆದೇಶ ಪಾಲನೆ ಮಾಡಲಾಗಿದೆಯೇ ಎಂದು ಪರಿಶೀಲಿಸಲಾಗುತ್ತದೆ. ಪಾಲನೆ ಮಾಡದೆ ಇದ್ದ ಸಂದರ್ಭದಲ್ಲಿ ತೊಂದರೆಯಾಗುತ್ತದೆ ಎನ್ನುವ ಅಭಿಪ್ರಾಯ ಬಂದಿದೆ.

    ಕೇಂದ್ರ ಜಲಶಕ್ತಿ ಸಚಿವರಾದ ಗಜೇಂದ್ರ ಸಿಂಗ್ ಶೆಖಾವತ್ ಅವರಿಗೆ ವಸ್ತುಸ್ಥಿತಿ ವಿವರಿಸಿದ್ದೇನೆ. ಮುಂದೆ ನಾವು ಯಾವ ನಿರ್ಧಾರ ತೆಗೆದುಕೊಳ್ಳುತ್ತೇವೆ ಎನ್ನುವುದನ್ನೂ ಸಹ ತಿಳಿಸಿದ್ದೇವೆ. ದೆಹಲಿಯಲ್ಲಿ ಸಚಿವರ ಬಳಿ ಚರ್ಚೆ ಏನಾಯಿತು ಎಂದು ಸಂದರ್ಭ ಬಂದಾಗ ವಿವರಿಸುತ್ತೇನೆ.”

  • Bengaluru: ಪದ್ಮನಾಭನಗರ ಕ್ಷೇತ್ರದಲ್ಲಿ ಕೈ ಹಿಡಿದ ಬಿಜೆಪಿ, ಜೆಡಿಎಸ್ ಮುಖಂಡರು, ಮಾಜಿ ಕಾರ್ಪೋರೇಟರ್ ಗಳು

    Bengaluru: ಪದ್ಮನಾಭನಗರ ಕ್ಷೇತ್ರದಲ್ಲಿ ಕೈ ಹಿಡಿದ ಬಿಜೆಪಿ, ಜೆಡಿಎಸ್ ಮುಖಂಡರು, ಮಾಜಿ ಕಾರ್ಪೋರೇಟರ್ ಗಳು

    ಬೆಂಗಳೂರು:

    ಮಹತ್ವದ ಬೆಳವಣಿಗೆಯಲ್ಲಿ ಬೆಂಗಳೂರಿನ ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ 15 ಕ್ಕೂ ಹೆಚ್ಚು ನಾಯಕರುಗಳು ಹಾಗೂ ಮಾಜಿ ಕಾರ್ಪೋರೇಟರ್ ಗಳು ಕಾಂಗ್ರೆಸ್ ಪಕ್ಷ ಸೇರಿದರು.

    ಕೆಪಿಸಿಸಿ ಕಚೇರಿಯ ಭಾರತ ಜೋಡೋ ಸಭಾಂಗಣದಲ್ಲಿ ನಡೆದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾಜಿ ಉಪ ಮೇಯರ್ ಎಲ್ ಶ್ರೀನಿವಾಸ್, ಪ್ರಸಾದ್ ಬಾಬು, ಮಾಜಿ ತಾಲೂಕು ಪಂಚಾಯ್ತಿ ಸದಸ್ಯರಾದ ಆಂಜಿನಪ್ಪ, ಮಾಜಿ ಕಾರ್ಪೊರೇಟರ್ ಗಳಾದ ಶೋಭಾ ಆಂಜಿನಪ್ಪ, ಹೆಚ್. ನಾರಾಯಣ್, ಹೆಚ್. ಸುರೇಶ್, ವೆಂಕಟಸ್ವಾಮಿ ನಾಯ್ಡು, ಎಲ್.ಗೋವಿಂದ ರಾಜು, ಸುಪ್ರಿಯ ಶೇಖರ್, ಬಾಲಕೃಷ್ಣ, ಸುಗುಣ ಬಾಲಕೃಷ್ಣ, ಯು.ಕೃಷ್ಣಮೂರ್ತಿ, ನರಸಿಂಹ ನಾಯಕ್, ಮಾಜಿ ಜಿಲ್ಲಾ ಪಂಚಾಯ್ತಿ ಸದಸ್ಯರಾದ ಲಕ್ಷ್ಮಿ ಸುರೇಶ್, ಪವನ್, ರಂಗರಾಮೇಗೌಡ್ರು ಕಾಂಗ್ರೆಸ್ ಪಕ್ಷ ಸೇರಿದ್ದು, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಶುಕ್ರವಾರ ಪಕ್ಷದ ಭಾವುಟ ನೀಡಿ ಈ ನಾಯಕರನ್ನು ಪಕ್ಷಕ್ಕೆ ಸ್ವಾಗತಿಸಿದರು.

    ಈ ಸಂದರ್ಭದಲ್ಲಿ ಮಾತನಾಡಿದ ಎಲ್ ಶ್ರೀನಿವಾಸ್ ಅವರು, “ನಾನು ಕಳೆದ 33 ವರ್ಷಗಳಿಂದ ಬಿಜೆಪಿಯಲ್ಲಿ ಸೇವೆ ಮಾಡಿದ್ದೇನೆ. ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರು ಇಂದು ಕಾಂಗ್ರೆಸ್ ಪಕ್ಷ ಸೇರುತ್ತಿದ್ದೇವೆ. ಮಹಾನಗರ ಪಾಲಿಕೆಯಲ್ಲಿ ಬಿಜೆಪಿಗೆ ದೊಡ್ಡ ಶಕ್ತಿಯಾಗಿ ಕೆಲಸ ಮಾಡುತ್ತಿದ್ದವರು ಇಂದು ಕಾಂಗ್ರೆಸ್ ಪಕ್ಷ ಸೇರಿದ್ದೇವೆ. ನಾವು ಕಾಂಗ್ರೆಸ್ ಪಕ್ಷ ಸೇರುವ ಸುದ್ದಿ ಬರುತ್ತಿದ್ದಂತೆ ಕ್ಷೇತ್ರದ ನಾಯಕರು ನಮ್ಮೆಲ್ಲರ ಮನೆ ಬಾಗಿಲು ತಟ್ಟಿದ್ದಾರೆ. ಇಷ್ಟು ವರ್ಷಗಳ ಕಾಲ ನಾವು ಸೇವೆ ಮಾಡಿದ್ದು, ಅವರು ನಮ್ಮನ್ನು ಸರಿಯಾದ ರೀತಿ ನಡೆಸಿಕೊಂಡಿಲ್ಲ. ಮಾಜಿ ಪಾಲಿಕೆ ಸದಸ್ಯರಿಗೆ ಶಾಸಕರ ಕಚೇರಿಯಲ್ಲಿ ಕನಿಷ್ಠ ಗೌರವವನ್ನೂ ನೀಡುತ್ತಿರಲಿಲ್ಲ. ನಮ್ಮನ್ನು ಬಹಳ ಕೆಟ್ಟದಾಗಿ, ಹೀನಾ ಯಾವಾಗಿ ನಡೆಸಿಕೊಂಡರು. ನಮ್ಮನ್ನು ಬಳಸಿಕೊಂಡು ಬೆಳೆದವರು ನಮ್ಮನ್ನು ಕಾಲಕಾಸಕ್ಕಿಂತ ಕಡೆಯಾಗಿ ಕಂಡರು.

    WhatsApp Image 2023 09 15 at 7.01.17 PM

    ಮೇಯರ್ ಆಯ್ಕೆ ಸಂದರ್ಭದಲ್ಲಿ ನನಗೆ ಅರ್ಹತೆ ಇದ್ದರೂ ಅದನ್ನು ತಪ್ಪಿಸಿದರು. ಒಕ್ಕಲಿಗರ ಸಂಘದ ಚುನಾವಣೆ ಸಮಯದಲ್ಲೂ ನನ್ನ ವಿರುದ್ಧ ಪಿತೂರಿ ಮಾಡಿದರು. ಆದರೆ ನನಗೆ ಶಿವಕುಮಾರ್, ಸುರೇಶ್ ಹಾಗೂ ರಾಮಲಿಂಗಾರೆಡ್ಡಿ ಅವರು ಬೆಂಬಲ ನೀಡಿದರು. ಅವರಿಗೆ ನಾನು ಸದಾ ಚಿರಋಣಿ. ನಮಗೆ ಗೌರವವಿಲ್ಲದ ಜಾಗದಲ್ಲಿ ಇರಬಾರದು ಎಂದು ತೀರ್ಮಾನಿಸಿ ಈ ನಿರ್ಧಾರ ಕೈಗೊಂಡಿದ್ದೇವೆ. ಬಹಳ ವರ್ಷಗಳಿಂದ ಶಿವಕುಮಾರ್ ನನ್ನನ್ನು ಪಕ್ಷಕ್ಕೆ ಕರೆಯುತ್ತಿದ್ದರು. ಆಗ ನಾನು ಪದ್ಮನಾಭನಗರ ಕ್ಷೇತ್ರದ ನಾಯಕರನ್ನು ಕರೆದುಕೊಂಡು ಬಂದು ಪಕ್ಷ ಸೇರುತ್ತೇನೆ ಎಂದು ಹೇಳಿದ್ದೆ. ಅದರಂತೆ ನಾವು ಇಂದು ಕಾಂಗ್ರೆಸ್ ಪಕ್ಷ ಸೇರಿದ್ದೇವೆ. ಅ.15ರಂದು ಪದ್ಮನಾಭನಗರ ಕ್ಷೇತ್ರದಲ್ಲಿ 15-20 ಸಾವಿರ ಜನರನ್ನು ಸೇರಿಸಿ ದೊಡ್ಡ ಕಾರ್ಯಕ್ರಮ ಮಾಡಲಾಗುವುದು. ಎಲ್ಲರೂ ಒಟ್ಟಾಗಿ ಕೆಲಸ ಮಾಡಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ಕಟ್ಟೋಣ” ಎಂದು ತಿಳಿಸಿದರು.

    ನಂತರ ಜೆಡಿಎಸ್ ಪಕ್ಷದಿಂದ ಕಾಂಗ್ರೆಸ್ ಸೇರ್ಪಡೆಯಾದ ಪ್ರಸಾದ್ ಬಾಬು (ಕಬಡ್ಡಿ ಬಾಬು) ಅವರು ಮಾತನಾಡಿ, “ಶಿವಕುಮಾರ್ ಅವರು 2003ರಲ್ಲೇ ನನಗೆ ಕಾಂಗ್ರೆಸ್ ಪಕ್ಷ ಸೇರುವಂತೆ ಆಹ್ವಾನ ನೀಡಿದ್ದರು. ಯಾವುದೋ ಕೆಲಸ ಮೇರೆಗೆ ಶಿವಕುಮಾರ್ ಅವರ ಮನೆಗೆ ಹೋಗಿದ್ದೆ. ಈಗ ನಾವೇ ಪಕ್ಷ ಸೇರುತ್ತಿದ್ದೇವೆ. ನನ್ನ ಮಗ ಪವನ್, ರವಿಕಿರಣ್, ಅಕ್ಬರ್ ಅಲಿ ಕೂಡ ಇಂದು ನಮ್ಮ ಜೊತೆ ಕಾಂಗ್ರೆಸ್ ಪಕ್ಷ ಸೇರುತ್ತಿದ್ದಾರೆ. ಈ ಪಕ್ಷ ಸೇರ್ಪಡೆ ಇನ್ನು ಆರಂಭ. ಮುಂದೆ ಇನ್ನು ದೊಡ್ಡ ಸಂಖ್ಯೆಯಲ್ಲಿ ಪಕ್ಷ ಸೇರ್ಪಡೆ ಆಗಲಿದೆ. ಶಿವಕುಮಾರ್ ಅವರ ನೇತೃತ್ವದಲ್ಲಿ ನಾನು ಪಕ್ಷವನ್ನು ಬಲಪಡಿಸಲು ಶ್ರಮಿಸುತ್ತೇನೆ. ನನ್ನ ಜೀವನದಲ್ಲಿ ರಾಜಕೀಯದ ಕೊನೆ ದಿನಗಳನ್ನು ಶಿವಕುಮಾರ್ ಅವರ ಜತೆ ಕಳೆಯಲು ಬಯಸಿ ಪಕ್ಷ ಸೇರುತ್ತಿದ್ದೇನೆ. ಕಾಂಗ್ರೆಸ್ ಪಕ್ಷ ಕೊಟ್ಟ ಮಾತಿನಂತೆ ಗ್ಯಾರಂಟಿ ಯೋಜನೆ ಜಾರಿ ಮಾಡುತ್ತಿದ್ದಾರೆ. ಆಮೂಲಕ ದೇಶದಲ್ಲಿ ಕಾಂಗ್ರೆಸ್ ಚಿತ್ರಣ ಬದಲಿಸುತ್ತಿದ್ದಾರೆ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಸುರೇಶ್ ಅವರನ್ನು ಹೆಚ್ಚಿನ ಬಹುಮತದಿಂದ ಗೆಲ್ಲಿಸಲು ಶ್ರಮಿಸುತ್ತೇವೆ” ಎಂದು ತಿಳಿಸಿದರು.

    ನಂತರ ಆಂಜನಪ್ಪ ಅವರು ಮಾತನಾಡಿ, “ನಾವು 30 ವರ್ಷಗಳಿಂದ ಬಿಜೆಪಿಯಲ್ಲಿ ಸಕ್ರಿಯವಾಗಿ ಕೆಲಸ ಮಾಡಿಕೊಂಡು ಪ್ರತಿ ಚುನಾವಣೆಯಲ್ಲಿ ಅತಿ ಹೆಚ್ಚು ಮತ ಕೊಡಿಸಿಕೊಂಡು ಬಂದಿದ್ದೆವು. ಉತ್ತಮ ಫಲ ಪಡೆಯಲು ನಾವು ಗಿಡ ನೆಟ್ಟು ಬೆಳೆಸಿದೆವು. ಆದರೆ ಆ ಗಿಡ ಫಲ ಬಿಟ್ಟ ನಂತರವಷ್ಟೇ ಅದು ಮುಳ್ಳಿನ ಗಿಡ ಎಂದು ಗೊತ್ತಾಯಿತು. ಶಿವಕುಮಾರ್ ಅವರು ಸಿಕ್ಕಾಗೆಲ್ಲಾ ನೀನು ಅಲ್ಲಿ ಬೆಳೆಯಲು ಆಗುವುದಿಲ್ಲ, ಕಾಂಗ್ರೆಸ್ ಪಕ್ಷ ಸೇರು ಎಂದು ಹೇಳುತ್ತಿದ್ದರು. ನಾನು ಕಾಲ ಕೂಡಿಬರಲಿ ಎನ್ನುತ್ತಿದ್ದೆ. ಪದ್ಮನಾಭನಗರ ಕ್ಷೇತ್ರದಲ್ಲಿ ಎಲ್ಲಾ ಪಾಲಿಕೆ ಸದಸ್ಯರು ಅಶೋಕ್ ಅವರನ್ನು ಗೆಲ್ಲಿಸಿದ್ದೆವು. ಆದರೆ ಅವರು ನಮ್ಮನ್ನು ಕೀಳಾಗಿ ನಡೆಸಿಕೊಂಡರು. ಮುಂದಿನ ದಿನಗಳಲ್ಲಿ ಶಿವಕುಮಾರ್ ಅವರು ನಮಗೆ ಯಾವುದೇ ಕಾರ್ಯಕ್ರಮ ಅಥವಾ ಕೆಸ ಕೊಟ್ಟರೂ ಅವುಗಳನ್ನು ಪ್ರಾಮಾಣಿಕವಾಗಿ ಶ್ರಮಿಸಿ ಯಶಸ್ವಿಯಾಗಿ ನಡೆಸಿಕೊಂಡು ಹೋಗುತ್ತೇವೆ” ಎಂದು ತಿಳಿಸಿದರು.

    WhatsApp Image 2023 09 15 at 6.59.46 PM

    ಬಾಲಕೃಷ್ಣ ಅವರು ಮಾತನಾಡಿ, “ನಾನು ಹಾಗೂ ಇಲ್ಲಿರುವ ಕಾರ್ಯಕರ್ತರು ಬಹಳ ನೊಂದು ಈ ತೀರ್ಮಾನಕ್ಕೆ ಬಂದಿದ್ದೇವೆ. ನಾವು ಬೇರೆ ಪಕ್ಷದಲ್ಲಿ ಇದ್ದರೂ ಅವರು ನಮ್ಮನ್ನು ಬಹಳ ಗೌರವಪೂರ್ವಕವಾಗಿ, ಆತ್ಮೀಯವಾಗಿ ನಡೆಸಿಕೊಂಡಿದ್ದಾರೆ. ಅವರ ಪ್ರೀತಿ ವಿಶ್ವಾಸಕ್ಕೆ ನಾವು ಶರಣಾಗಿದ್ದೇವೆ. ಆದರೆ ಬಿಜೆಪಿಯಲ್ಲಿ ಒಬ್ಬರ ಬಗ್ಗೆ ಇನ್ನೊಬ್ಬರನ್ನು ಎತ್ತಿಕಟ್ಟುತ್ತಿದ್ದರು. ನಮಗೆ ಬೆನ್ನಿಗೆ ಚೂರಿ ಹಾಕಿತ್ತಿದ್ದರು. ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ನಾನು ಹೇಗೆ ಬಿಜೆಪಿ ಪಕ್ಷವನ್ನು ಕಟ್ಟಿದೆನೋ ಅದೇ ರೀತಿ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಕಟ್ಟುತ್ತೇನೆ ಎಂದು ಇಂದು ವಾಗ್ದಾನ ನೀಡುತ್ತೇನೆ” ಎಂದು ತಿಳಿಸಿದರು.

    ಮೇಯರ್ ಆಯ್ಕೆ ಸಂದರ್ಭದಲ್ಲಿ ನನಗೆ ಅರ್ಹತೆ ಇದ್ದರೂ ಅದನ್ನು ತಪ್ಪಿಸಿದರು. ಒಕ್ಕಲಿಗರ ಸಂಘದ ಚುನಾವಣೆ ಸಮಯದಲ್ಲೂ ನನ್ನ ವಿರುದ್ಧ ಪಿತೂರಿ ಮಾಡಿದರು. ಆದರೆ ನನಗೆ ಶಿವಕುಮಾರ್, ಸುರೇಶ್ ಹಾಗೂ ರಾಮಲಿಂಗಾರೆಡ್ಡಿ ಅವರು ಬೆಂಬಲ ನೀಡಿದರು. ಅವರಿಗೆ ನಾನು ಸದಾ ಚಿರಋಣಿ. ನಮಗೆ ಗೌರವವಿಲ್ಲದ ಜಾಗದಲ್ಲಿ ಇರಬಾರದು ಎಂದು ತೀರ್ಮಾನಿಸಿ ಈ ನಿರ್ಧಾರ ಕೈಗೊಂಡಿದ್ದೇವೆ. ಬಹಳ ವರ್ಷಗಳಿಂದ ಶಿವಕುಮಾರ್ ನನ್ನನ್ನು ಪಕ್ಷಕ್ಕೆ ಕರೆಯುತ್ತಿದ್ದರು. ಆಗ ನಾನು ಪದ್ಮನಾಭನಗರ ಕ್ಷೇತ್ರದ ನಾಯಕರನ್ನು ಕರೆದುಕೊಂಡು ಬಂದು ಪಕ್ಷ ಸೇರುತ್ತೇನೆ ಎಂದು ಹೇಳಿದ್ದೆ. ಅದರಂತೆ ನಾವು ಇಂದು ಕಾಂಗ್ರೆಸ್ ಪಕ್ಷ ಸೇರಿದ್ದೇವೆ. ಅ.15ರಂದು ಪದ್ಮನಾಭನಗರ ಕ್ಷೇತ್ರದಲ್ಲಿ 15-20 ಸಾವಿರ ಜನರನ್ನು ಸೇರಿಸಿ ದೊಡ್ಡ ಕಾರ್ಯಕ್ರಮ ಮಾಡಲಾಗುವುದು. ಎಲ್ಲರೂ ಒಟ್ಟಾಗಿ ಕೆಲಸ ಮಾಡಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ಕಟ್ಟೋಣ” ಎಂದು ತಿಳಿಸಿದರು.

    ನಂತರ ಜೆಡಿಎಸ್ ಪಕ್ಷದಿಂದ ಕಾಂಗ್ರೆಸ್ ಸೇರ್ಪಡೆಯಾದ ಪ್ರಸಾದ್ ಬಾಬು ಅವರು ಮಾತನಾಡಿ, “ಶಿವಕುಮಾರ್ ಅವರು 2003ರಲ್ಲೇ ನನಗೆ ಕಾಂಗ್ರೆಸ್ ಪಕ್ಷ ಸೇರುವಂತೆ ಆಹ್ವಾನ ನೀಡಿದ್ದರು. ಯಾವುದೋ ಕೆಲಸ ಮೇರೆಗೆ ಶಿವಕುಮಾರ್ ಅವರ ಮನೆಗೆ ಹೋಗಿದ್ದೆ. ಈಗ ನಾವೇ ಪಕ್ಷ ಸೇರುತ್ತಿದ್ದೇವೆ. ನನ್ನ ಮಗ ಪವನ್, ರವಿಕಿರಣ್, ಅಕ್ಬರ್ ಅಲಿ ಕೂಡ ಇಂದು ನಮ್ಮ ಜೊತೆ ಕಾಂಗ್ರೆಸ್ ಪಕ್ಷ ಸೇರುತ್ತಿದ್ದಾರೆ. ಈ ಪಕ್ಷ ಸೇರ್ಪಡೆ ಇನ್ನು ಆರಂಭ, ಮುಂದೆ ಇನ್ನು ದೊಡ್ಡ ಪಕ್ಷ ಸೇರ್ಪಡೆ ಆಗಲಿದೆ. ಶಿವಕುಮಾರ್ ಅವರ ನೇತೃತ್ವದಲ್ಲಿ ನಾನು ಪಕ್ಷವನ್ನು ಬಲಪಡಿಸಲು ಶ್ರಮಿಸುತ್ತೇನೆ. ನನ್ನ ಜೀವನದಲ್ಲಿ ರಾಜಕೀಯದ ಕೊನೆ ದಿನಗಳನ್ನು ಶಿವಕುಮಾರ್ ಅವರ ಜತೆ ಕಳೆಯಲು ಬಯಸಿ ಪಕ್ಷ ಸೇರುತ್ತಿದ್ದೇನೆ. ಕಾಂಗ್ರೆಸ್ ಪಕ್ಷ ಕೊಟ್ಟ ಮಾತಿನಂತೆ ಗ್ಯಾರಂಟಿ ಯೋಜನೆ ಜಾರಿ ಮಾಡುತ್ತಿದ್ದಾರೆ. ಆಮೂಲಕ ದೇಶದಲ್ಲಿ ಕಾಂಗ್ರೆಸ್ ಚಿತ್ರಣ ಬದಲಿಸುತ್ತಿದ್ದಾರೆ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಸುರೇಶ್ ಅವರನ್ನು ಹೆಚ್ಚಿನ ಬಹುಮತದಿಂದ ಗೆಲ್ಲಿಸಲು ಶ್ರಮಿಸುತ್ತೇವೆ” ಎಂದು ತಿಳಿಸಿದರು.

    ನಂತರ ಆಂಜನಪ್ಪ ಅವರು ಮಾತನಾಡಿ, “ನಾವು 30 ವರ್ಷಗಳಿಂದ ಬಿಜೆಪಿಯಲ್ಲಿ ಸಕ್ರಿಯವಾಗಿ ಕೆಲಸ ಮಾಡಿಕೊಂಡು ಪ್ರತಿ ಚುನಾವಣೆಯಲ್ಲಿ ಅಥಿ ಹೆಚ್ಚು ಮತ ಕೊಸಿಸಿಕೊಂಡು ಬಂದಿದ್ದೆವು. ಉತ್ತಮ ಫಲ ಪಡೆಯಲು ನಾವು ಗಿಡ ನೆಟ್ಟು ಅದನ್ನು ಬೆಳೆಸಿದೆವು. ಆದರೆ ಆ ಗಿಡ ಫಲ ಬಿಟ್ಟ ನಂತರವಷ್ಟೇ ಅದು ಮುಳ್ಳಿನ ಗಿಡ ಎಂದು ಗೊತ್ತಾಯಿತು. ಶಿವಕುಮಾರ್ ಅವರು ಸಿಕ್ಕಾಗೆಲ್ಲಾ ನೀನು ಅಲ್ಲಿ ಬೆಳೆಯಲು ಆಗುವುದಿಲ್ಲ ಕಾಂಗ್ರೆಸ್ ಪಕ್ಷ ಸೇರು ಎಂದು ಹೇಳುತ್ತಿದ್ದರು. ನಾನು ಕಾಲ ಕೂಡಿಬರಲಿ ಎನ್ನುತ್ತಿದ್ದೆ. ಪದ್ಮನಾಭನಗರ ಕ್ಷೇತ್ರದಲ್ಲಿ ಎಲ್ಲಾ ಪಾಲಿಕೆ ಸದಸ್ಯರು ಅಶೋಕ್ ಅವರನ್ನು ಗೆಲ್ಲಿಸಿದ್ದೆವು. ಆದರೆ ಅವರು ನಮ್ಮನ್ನು ಕೀಳಾಗಿ ನಡೆಸಿಕೊಂಡರು. ಮುಂದಿನ ದಿನಗಳಲ್ಲಿ ಶಿವಕುಮಾರ್ ಅವರು ನಮಗೆ ಯಾವುದೇ ಕಾರ್ಯಕ್ರಮ ಅಥವಾ ಕೆಸ ಕೊಟ್ಟರೂ ಅವುಗಳನ್ನು ಪ್ರಾಮಾಣಿಕವಾಗಿ ಶ್ರಮಿಸಿ ಯಶಸ್ವಿಯಾಗಿ ನಡೆಸಿಕೊಂಡು ಹೋಗುತ್ತೇವೆ” ಎಂದು ತಿಳಿಸಿದರು.

    ಬಾಲಕೃಷ್ಣ ಅವರು ಮಾತನಾಡಿ, “ನಾನು ಹಾಗೂ ಇಲ್ಲಿರುವ ಕಾರ್ಯಕರ್ತರು ಬಹಳ ನೊಂದು ಈ ತೀರ್ಮಾನಕ್ಕೆ ಬಂದಿದ್ದೇವೆ. ನಾವು ಬೇರೆ ಪಕ್ಷದಲ್ಲಿ ಇದ್ದರೂ ಅವರು ನಮ್ಮನ್ನು ಬಹಳ ಗೌರವಪೂರ್ವಕವಾಗಿ, ಆತ್ಮೀಯವಾಗಿ ನಡೆಸಿಕೊಂಡಿದ್ದಾರೆ. ಅವರ ಪ್ರೀತಿ ವಿಶ್ವಾಸಕ್ಕೆ ನಾವು ಶರಣಾಗಿದ್ದೇವೆ. ಆದರೆ ಬಿಜೆಪಿಯಲ್ಲಿ ಒಬ್ಬರ ಬಗ್ಗೆ ಇನ್ನೊಬ್ಬರನ್ನು ಎತ್ತಿಕಟ್ಟುತ್ತಿದ್ದರು. ನಮಗೆ ಬೆನ್ನಿಗೆ ಚೂರಿ ಹಾಕಿತ್ತಿದ್ದರು. ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ನಾನು ಹೇಗೆ ಬಿಜೆಪಿ ಪಕ್ಷವನ್ನು ಕಟ್ಟಿದೆನೋ ಅದೇ ರೀತಿ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಕಟ್ಟುತ್ತೇನೆ ಎಂದು ಇಂದು ವಾಗ್ದಾನ ನೀಡುತ್ತೇನೆ” ಎಂದು ತಿಳಿಸಿದರು.

  • ಕರ್ನಾಟಕ ಬಿಜೆಪಿಯಿಂದ ಕಾವೇರಿ ನದಿ ನೀರು ಜನಜಾಗೃತಿ ಯಾತ್ರೆ: ಬಸವರಾಜ ಬೊಮ್ಮಾಯಿ

    ಕರ್ನಾಟಕ ಬಿಜೆಪಿಯಿಂದ ಕಾವೇರಿ ನದಿ ನೀರು ಜನಜಾಗೃತಿ ಯಾತ್ರೆ: ಬಸವರಾಜ ಬೊಮ್ಮಾಯಿ

    ಬೆಂಗಳೂರು:

    ಕಾವೇರಿ ಜಲಾನಯನ ಪ್ರದೇಶದ ರಾಮನಗರ, ಮಂಡ್ಯ, ಮೈಸೂರು, ಚಾಮರಾಜನಗರ, ಕೊಡಗು ಮತ್ತು ಹಾಸನ ಜಿಲ್ಲೆಗಳ ಎಲ್ಲ ತಾಲ್ಲೂಕುಗಳಲ್ಲಿ ಕಾವೇರಿ ಜನಜಾಗೃತಿ ಯಾತ್ರೆಯನ್ನು ಕೈಗೊಳ್ಳಲಿದ್ದೇವೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರಕಟಿಸಿದರು.

    ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, 21ರ ಸುಪ್ರೀಂ ಕೋರ್ಟ್ ತೀರ್ಪಿನ ಸಂಬಂಧ ಸರಕಾರದ ನಡೆಯನ್ನು ಕಾದು ನೋಡುತ್ತೇವೆ. ಬೆಂಗಳೂರಿನ 28 ಕ್ಷೇತ್ರಗಳಲ್ಲೂ ಜನಜಾಗೃತಿ ಯಾತ್ರೆಯನ್ನು ಮಾಡುತ್ತೇವೆ. ಪಾದಯಾತ್ರೆ, ಧರಣಿ, ಸತ್ಯಾಗ್ರಹದ ರೂಪದಲ್ಲಿ ಹೋರಾಟ ಇರಲಿದೆ ಎಂದರು. ಈ ಕುರಿತು ಇಂದಿನ ಬಿಜೆಪಿ ಮುಖಂಡರ ಸಭೆಯಲ್ಲಿ ನಿರ್ಧರಿಸಿದ್ದಾಗಿ ತಿಳಿಸಿದರು.

    ಹೋರಾಟದ ಮುಂದಿನ ರೂಪುರೇಷೆಯನ್ನು 21ರಂದು ನಿರ್ಧರಿಸಲಾಗುವುದು ಎಂದು ತಿಳಿಸಿದರು. ಕಾವೇರಿ ವಿಚಾರದಲ್ಲಿ ರಾಜಕಾರಣ ಮಾಡದೆ ಇರಲು ನಾವು ನಿರ್ಧರಿಸಿದ್ದೆವು. ಆದರೆ, ಸುಪ್ರೀಂ ಕೋರ್ಟಿನಲ್ಲಿ ಪ್ರಕರಣ ಇರುವಾಗ ಮುಖ್ಯಮಂತ್ರಿಗಳು ಕೇಂದ್ರಕ್ಕೆ ಪತ್ರ ಬರೆದಿದ್ದಾರೆ. ಮಾತುಕತೆಗೆ ಕೋರಿದ್ದಾರೆ. ಮಾತುಕತೆಗೆ ತಮಿಳುನಾಡು, ಕೇರಳ, ಪಾಂಡಿಚೇರಿ ಬರುವುದೇ? ಇದೆಲ್ಲ ಅವರಿಗೆ ಗೊತ್ತಿದ್ದರೂ ಕೂಡ ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಕೇಂದ್ರದತ್ತ ಬೊಟ್ಟು ಮಾಡಿ ತೋರಿಸುತ್ತಿದ್ದಾರೆ ಎಂದು ಟೀಕಿಸಿದರು. ರಾಜ್ಯದ ನೀರಿನ ಹಕ್ಕನ್ನು ರಕ್ಷಿಸಲು ಈ ರಾಜ್ಯ ಸರಕಾರಕ್ಕೆ ಬದ್ಧತೆ, ದಕ್ಷತೆ ಮತ್ತು ಯೋಗ್ಯತೆ ಇಲ್ಲ ಎಂದು ಆಕ್ಷೇಪಿಸಿದರು.

    ಬರಗಾಲ ವಿಚಾರ ಬಂದಾಗ ಕೇಂದ್ರಕ್ಕೆ ಕಾನೂನು ಬದಲಿಸಲು ಕೋರಿದರು. ಯಡಿಯೂರಪ್ಪ ಅವರ ಕಾಲದಲ್ಲಿ ಬರಗಾಲ, ಪ್ರವಾಹ ಬಂದಿತ್ತು. ನಾವು ಕೇಂದ್ರಕ್ಕೆ ಕಾಯುತ್ತ ಕೂತಿದ್ದೇವಾ? ಬರಗಾಲ ಘೋಷಿಸಿ ಪರಿಹಾರ ಕೊಟ್ಟಿದ್ದೇವೆ. ಪ್ರವಾಹ ಬಂದಾಗಲೂ ಪರಿಹಾರ ಕೊಟ್ಟಿದ್ದೇವೆ. ಹಲವು ಪಟ್ಟು ಪರಿಹಾರವನ್ನು ಕೊಟ್ಟಿದ್ದೇವೆ. ಕೇಂದ್ರವನ್ನು ಕಾಯಲಿಲ್ಲ; ಎಲ್ಲ ಇಲಾಖೆಗಳಿಗೆ ರಾಜ್ಯದ ಬೊಕ್ಕಸದಿಂದ ಹಣ ಬಿಡುಗಡೆ ಮಾಡಿ ಬರಗಾಲ ಕಾಮಗಾರಿಗಳನ್ನು ಮಾಡಿದ್ದೇವೆ. ಈ ಕೆಲಸ ಇವರಿಗೆ ಯಾಕೆ ಮಾಡಲಾಗುತ್ತಿಲ್ಲ? ಮಾತೆತ್ತಿದರೆ ಪತ್ರ ಬರೆಯುತ್ತಾರೆ. ಪತ್ರ ಬರೆದರೆ ಜವಾಬ್ದಾರಿ ಮುಗಿಯಿತೇ ಎಂದು ಕೇಳಿದರು.

    ಹೊಣೆಯಿಂದ ನುಣುಚಿಕೊಳ್ಳಲು ಪತ್ರ ಬರೆಯುವ ಪ್ರವೃತ್ತಿ ಅತ್ಯಂತ ಖಂಡನೀಯ. ಮಾತುಕತೆ ಮಾಡುವುದಿದ್ದರೆ ಸ್ಟಾಲಿನ್ ಜೊತೆ ಮಾತನಾಡಬೇಕಿತ್ತು. ಇಂಡಿಯದ ಮಿತ್ರ ಪಕ್ಷದ ಸ್ಟಾಲಿನ್ ಅವರು ಮಾತುಕತೆಗೆ ಬರುತ್ತಾರಾ? ಪತ್ರ ಬರೆದು ನೋಡಲಿ ಎಂದು ಆಗ್ರಹಿಸಿದರು.

    ಈಗಾಗಲೇ ಮಂಡ್ಯ, ಮೈಸೂರು, ಚಾಮರಾಜನಗರ, ರಾಮನಗರ, ಹಾಸನದಲ್ಲಿ 1 ಲಕ್ಷ ಹೆಕ್ಟೇರಿಗಿಂತ ಹೆಚ್ಚು ಬೆಳೆ ನಾಶವಾಗಿದೆ. ಕೃಷಿ ಇಲಾಖೆಯವರು ಖುಷ್ಕಿ, ಅರೆ ಖುಷ್ಕಿ ಬೆಳೆ ಬೆಳೆಯಲು ಸೂಚಿಸಿದ್ದಾರೆ. ಬೆಳೆದು ನಿಂತ ಕಬ್ಬು, ಭತ್ತ, ಮೆಕ್ಕೆಜೋಳ, ತೋಟಗಾರಿಕಾ ಬೆಳೆಗಳ ಪರಿಸ್ಥಿತಿ ಏನು? ಕಾವೇರಿ ಜಲಾನಯನ ಪ್ರದೇಶದಲ್ಲಿ ನೀರು ಕೊಡದೆ ನಷ್ಟ ಅನುಭವಿಸಿದ ರೈತರಿಗೆ ಪ್ರತಿ ಎಕರೆಗೆ 25 ಸಾವಿರ ಪರಿಹಾರವನ್ನು ರಾಜ್ಯ ಸರಕಾರ ಕೊಡಬೇಕು ಎಂದು ಆಗ್ರಹಿಸಿದರು.

    ಪರಿಹಾರ ನೀಡದಿದ್ದರೆ ಶಾಶ್ವತವಾಗಿ ಸಾಲಬಾಧೆಯಿಂದ ಅವರು ಬಳಲುತ್ತಾರೆ. ಕೂಡಲೇ ಆ ಪ್ರದೇಶದಲ್ಲಿ ಸಾಲ ಮನ್ನಾ ಮಾಡುವಂತೆ ಅವರು ಒತ್ತಾಯಿಸಿದರು. 21ರಂದು ಸುಪ್ರೀಂ ಕೋರ್ಟಿನಲ್ಲಿ ಮತ್ತೆ ವಿಚಾರಣೆ ನಡೆಯಲಿದ್ದು, ಕಾನೂನು ಸಮರವನ್ನು ಗಂಭೀರವಾಗಿ ಪರಿಗಣಿಸಬೇಕಿದೆ ಎಂದು ಸಲಹೆ ನೀಡಿದರು.

    ಇಲ್ಲಿನ ಪರಿಸ್ಥಿತಿ ಕುರಿತು ಸುಪ್ರೀಂ ಕೋರ್ಟಿನ ಮುಂದೆ ವಾಸ್ತವ ಚಿತ್ರಣ ನೀಡಬೇಕಿದೆ. ಅಲ್ಲಿ ಸರಿಯಾಗಿ ವಾದವನ್ನೇ ಮಾಡಿಲ್ಲ. ಸಿಡಬ್ಲ್ಯುಎಂಎ ಮುಂದೆ ಕೂಡ ಸರಿಯಾಗಿ ವಾದ ಮಂಡನೆ ಆಗಬೇಕಿದೆ ಎಂದ ಅವರು, ಜನಸಂಪನ್ಮೂಲ ಮತ್ತು ಉಪ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಅವರಿಗೆ ಬಹಳ ಹಿರಿಯ ವಕೀಲರು ಚಿರಪರಿಚಿತರು; ಅವರು ಶಿವಕುಮಾರರ ಕೇಸಿನಲ್ಲಿ ವಾದಿಸಿ ಯಶಸ್ವಿಯೂ ಆಗುತ್ತಾರೆ. ಅದೇ ಹಿರಿಯ ವಕೀಲರು ಅಥವಾ ಬೇರೆ ಹಿರಿಯರನ್ನು ನೇಮಿಸಿ ರಾಜ್ಯದ ಹಿತಾಸಕ್ತಿ ಯಾಕೆ ಕಾಪಾಡಬಾರದು ಎಂದು ಪ್ರಶ್ನಿಸಿದರು.

    ಕಾವೇರಿ ದಕ್ಷಿಣ ಕರ್ನಾಟಕದ ಜೀವನದಿ. ನೀರಿನ ಬರ ಬಂದರೆ ಜನಜೀವನ ಸ್ತಬ್ಧವಾಗಲಿದೆ. ಯಾವುದೇ ಕಾರಣಕ್ಕೂ ನೀರನ್ನು ಬಿಡದೇ ಇರಲು ಆಗ್ರಹಿಸಿ ಹೋರಾಟ ಮಾಡಲಿದ್ದೇವೆ ಎಂದು ಬಸವರಾಜ ಬೊಮ್ಮಾಯಿ ಪ್ರಕಟಿಸಿದರು. ಕುಂಟುನೆಪ ಹೇಳಿ ನೀರು ಬಿಟ್ಟಲ್ಲಿ ಉಗ್ರವಾದ ಹೋರಾಟ ಮಾಡುವುದಾಗಿ ತಿಳಿಸಿದರು.

    ತಮಿಳುನಾಡು ರಾಜ್ಯವು ನಿಗದಿತ ಮಿತಿಗಿಂತ ಅತ್ಯಂತ ಹೆಚ್ಚು ಕುರುವೈ ಬೆಳೆಯನ್ನು ಅಕ್ರಮವಾಗಿ ಬೆಳೆಯುತ್ತಿದೆ. ಟ್ರ್ರಿಬ್ಯೂನಲ್ ಪ್ರಕಾರ 32 ಟಿಎಂಸಿ ಬಳಸಬೇಕಿದ್ದು, 67 ಟಿಎಂಸಿ ಬಳಕೆಯಾಗಿದೆ ಎಂದರು. ಕಾವೇರಿ ವಿಚಾರದಲ್ಲಿ ಸರಕಾರ ಸಂಪೂರ್ಣ ವಿಫಲವಾಗಿದೆ. ಜೂನ್ ತಿಂಗಳಿನಲ್ಲೇ ಸಮರ್ಪಕ ನಿರ್ವಹಣೆ ಮಾಡಬೇಕಿದ್ದರೂ ಅದನ್ನು ಮಾಡಿಲ್ಲ. ಎರಡು ಬೆಳೆ ಬದಲಾಗಿ 3 ಬೆಳೆ ಬೆಳೆಯುವ ಹುನ್ನಾರ ತಮಿಳುನಾಡಿನದು ಎಂದು ಆಕ್ಷೇಪಿಸಿದರು.

    ರಾಜ್ಯದಲ್ಲಿ ವ್ಯತಿರಿಕ್ತ ಪರಿಸ್ಥಿತಿ ಇದೆ. ರಾಜ್ಯದ ಶೇ 30ರಷ್ಟು ಬೇಡಿಕೆಯನ್ನೂ ಈಡೇರಿಸಿಲ್ಲ. ಮಂಡ್ಯ ಜಿಲ್ಲೆಯಲ್ಲಿ 33 ಟಿಎಂಸಿ ಬದಲು 7.5 ಟಿಎಂಸಿ ಕೊಡಲಾಗಿದೆ. ಕುಡಿಯುವ ನೀರಿನ ಪರಿಸ್ಥಿತಿಯೂ ಗಂಭೀರವಾಗುತ್ತಿದೆ. ಬೆಂಗಳೂರು, ಹಾಸನ, ಮಂಡ್ಯ ಮತ್ತಿತರ ಜಿಲ್ಲೆಗಳಿಗೆ 18 ಟಿಎಂಸಿ ಬೇಕಿದೆ. ಆದರೆ, ಲೈವ್ ಸ್ಟೋರೇಜ್ 13 ಟಿಎಂಸಿ ಮಾತ್ರ ಇದೆ. ಇಂಥ ಗಂಭೀರ ಪರಿಸ್ಥಿತಿ ಇದ್ದರೂ ಸಿಡಬ್ಲ್ಯುಆರ್‍ಸಿಯಲ್ಲಿ ಸರಿಯಾಗಿ ವಾದ ಮಂಡಿಸಿಲ್ಲ ಎಂದು ವಿವರಿಸಿದರು.

    ಸಿಡಬ್ಲ್ಯುಎಂಎಯಲ್ಲಿ ಸಮರ್ಪಕವಾಗಿ ಪ್ರತಿಪಾದಿಸಿಲ್ಲ. 15 ದಿನ 10 ಸಾವಿರ ಕ್ಯೂಸೆಕ್ಸ್, 15 ದಿನ 5 ಸಾವಿರ ಕ್ಯೂಸೆಕ್ಸ್ ನೀರು ಬಿಡಲಾಗಿದೆ. ಈಗ ಮತ್ತೆ 5 ಸಾವಿರ ಕ್ಯೂಸೆಕ್ಸ್ ಬಿಡುತ್ತಿದ್ದಾರೆ. ಹೀಗೆ ರಾಜ್ಯದ ಹಿತಾಸಕ್ತಿಯ ಬಲಿ ಕೊಡಲಾಗುತ್ತಿದೆ. ಮಧ್ಯಂತರ ಅರ್ಜಿ ಹಾಕಲು ಸರ್ವಪಕ್ಷ ಸಭೆಯಲ್ಲಿ ಒತ್ತಾಯಿಸಿದ್ದರೂ ಆ ಕಡೆ ಗಮನಿಸಿಲ್ಲ ಎಂದು ಟೀಕಿಸಿದರು.

  • ‘ಇಂಡಿಯ ಒಕ್ಕೂಟ’ವನ್ನು ಬಲಪಡಿಸಲು ಕಾವೇರಿ ನದಿ ನೀರು ಬಿಡುಗಡೆ: ಬಿ.ಎಸ್.ಯಡಿಯೂರಪ್ಪ

    ‘ಇಂಡಿಯ ಒಕ್ಕೂಟ’ವನ್ನು ಬಲಪಡಿಸಲು ಕಾವೇರಿ ನದಿ ನೀರು ಬಿಡುಗಡೆ: ಬಿ.ಎಸ್.ಯಡಿಯೂರಪ್ಪ

    ಬೆಂಗಳೂರು:

    ತಮಿಳುನಾಡಿನಲ್ಲಿ ಡಿಎಂಕೆ ಸರಕಾರ ಇರುವುದರಿಂದ ‘ಇಂಡಿಯ ಒಕ್ಕೂಟ’ವನ್ನು ಬಲಪಡಿಸಲು ನಿತ್ಯ 5 ಸಾವಿರ ಕ್ಯೂಸೆಕ್ಸ್ ಕಾವೇರಿ ನೀರನ್ನು ಕರ್ನಾಟಕದಿಂದ ಬಿಡಲಾಗುತ್ತಿದೆ. ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರು ಮುಂಚೆಯೇ ಸುಪ್ರೀಂ ಕೋರ್ಟಿನಲ್ಲಿ ದಾವೆ ಹೂಡಬೇಕಿತ್ತು ಎಂದು ಬಿಜೆಪಿ ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತಿಳಿಸಿದರು.

    ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಸುಪ್ರೀಂ ಕೋರ್ಟನ್ನು ಅಪ್ರೋಚ್ ಮಾಡದೆ ತಮಿಳುನಾಡನ್ನು ತೃಪ್ತಿಪಡಿಸಲು ನೀರು ಹರಿಸಿರುವುದು ಅಕ್ಷಮ್ಯ ಅಪರಾಧ. ಸುಪ್ರೀಂ ಕೋರ್ಟಿಗೆ ಈ ವಿಚಾರವನ್ನು ಮನವರಿಕೆ ಮಾಡುವಲ್ಲಿ ಈ ಸರಕಾರ ಸಂಪೂರ್ಣ ವಿಫಲವಾಗಿದೆ ಎಂದು ಆಕ್ಷೇಪಿಸಿದರು.

    ಕಾವೇರಿ ಸಂಕಷ್ಟವನ್ನು ಸುಪ್ರೀಂ ಕೋರ್ಟಿಗೆ ಮನವರಿಕೆ ಮಾಡಬೇಕಾದುದು ಅತ್ಯಂತ ಅವಶ್ಯಕ. ಇದನ್ನು ಸರಕಾರ ಮಾಡುತ್ತಿಲ್ಲ. ತಮಿಳುನಾಡಿನಲ್ಲಿ ಕಾವೇರಿ ನೀರನ್ನು ನಂಬಿ ಹೆಚ್ಚು ಪ್ರದೇಶದಲ್ಲಿ ಬೆಳೆ ಬೆಳೆಯಲಾಗುತ್ತಿದೆ. ಕಾಯ್ದೆ ಪ್ರಕಾರ 1.08 ಲಕ್ಷ ಹೆಕ್ಟೇರ್ ಬೆಳೆ ಬೆಳೆಯಬಹುದು. ಆದರೆ, 3.50 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಬೆಳೆಯುತ್ತಿದ್ದಾರೆ. ಇಷ್ಟು ಪ್ರದೇಶಕ್ಕೆ ನೀರು ಕೊಡಲು ಅಸಾಧ್ಯ ಎಂದು ರಾಜ್ಯ ಸರಕಾರವು ಸುಪ್ರೀಂ ಕೋರ್ಟಿಗೆ ಅರ್ಥ ಮಾಡಿಸಬೇಕಿದೆ. ಆದರೆ, ಅದರಲ್ಲಿ ವಿಫಲವಾಗಿದೆ ಎಂದು ನುಡಿದರು.

    ತಮಿಳುನಾಡಿನಲ್ಲಿ ಕುರುವೈ ಬೆಳೆಯನ್ನು ಹಿಂದೆಂದಿಗಿಂತ ಹೆಚ್ಚು ಬೆಳೆಯಲಾಗುತ್ತಿದೆ. ರಾಜ್ಯದ ರೈತರ ಪರಿಸ್ಥಿತಿ ದಿನೇದಿನೇ ಹದಗೆಡುತ್ತಿದೆ ಎಂದರಲ್ಲದೆ, ಸುಪ್ರೀಂ ಕೋರ್ಟಿನ ಮುಂದೆ ಸಮರ್ಪಕ ವಾದ ಮಂಡಿಸಿ ರಾಜ್ಯದ ಹಿತವನ್ನು ಕಾಪಾಡಲು ಆಗ್ರಹಿಸಿದರು. ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರ ವೈಫಲ್ಯವನ್ನು ಖಂಡಿಸುವುದಾಗಿ ತಿಳಿಸಿದರು.

  • We the people of India ಎನ್ನುವ ಮೂಲಕವೇ ನಮ್ಮ ಸಂವಿಧಾನ ತೆರೆದುಕೊಳ್ಳುತ್ತದೆ: ಮುಖ್ಯಮಂತ್ರಿ ಸಿದ್ದರಾಮಯ್ಯ

    We the people of India ಎನ್ನುವ ಮೂಲಕವೇ ನಮ್ಮ ಸಂವಿಧಾನ ತೆರೆದುಕೊಳ್ಳುತ್ತದೆ: ಮುಖ್ಯಮಂತ್ರಿ ಸಿದ್ದರಾಮಯ್ಯ

    ಸಂವಿಧಾನದ ಆಶಯಗಳನ್ನು ಪರಿಣಾಮಕಾರಿಯಾಗಿ ಅರ್ಥೈಸಿಕೊಂಡು ಪಾಲಿಸದಿದ್ದರೆ ಸಮ ಸಮಾಜ ನಿರ್ಮಾಣ ಸಾಧ್ಯವಿಲ್ಲ

    ಸಂವಿಧಾನದ ಸಮ ಸಮಾಜ ಮತ್ತು ಜಾತ್ಯತೀತ ತತ್ವದ ಆಶಯಗಳಂತೆಯೇ ನಮ್ಮ ಸರ್ಕಾರ ಸರ್ವರ ಏಳಿಗೆಯ ಕಾರ್ಯಕ್ರಮಗಳನ್ನು ಜಾರಿ ಮಾಡಿದೆ: ಮುಖ್ಯಮಂತ್ರಿ

    ಸಂವಿಧಾನ ವಿರೋಧಿ ಶಕ್ತಿಗಳು ಮತ್ತೆ ಮನುಸ್ಮೃತಿ ಜಾರಿಗೆ ಹುನ್ನಾರ ನಡೆಸುತ್ತಿವೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಕೆ

    ಬೆಂಗಳೂರು:

    ಸಂವಿಧಾನ ವಿರೋಧಿ ಶಕ್ತಿಗಳು ಸಂವಿಧಾನವನ್ನು ನಾಶಗೊಳಿಸಿ ಮತ್ತೆ ಮನುಸ್ಮೃತಿ ಜಾರಿಗೆ ಹುನ್ನಾರ ನಡೆಸುತ್ತಿವೆ. ಈ ಬಗ್ಗೆ ಎಚ್ಚರ ಮತ್ತು ಜಾಗೃತಿ ಇರಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನಾಡಿಗೆ ಕರೆ ನೀಡಿದರು.

    ಸಮಾಜ ಕಲ್ಯಾಣ ಇಲಾಖೆ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಅಂಗವಾಗಿ ವಿಧಾನಸೌಧದಲ್ಲಿ ಆಯೋಜಿಸಿದ್ದ ಭಾರತದ ಸಂವಿಧಾನ ಪೀಠಿಕೆಯ ಜಾಗತಿಕ ವಾಚನದ ಅಭೂತಪೂರ್ವ ಕಾರ್ಯಕ್ರಮವನ್ನು ಸಂವಿಧಾನ ಪೀಠಿಕೆ ಓದುವ ಮೂಲಕ ಉದ್ಘಾಟಿಸಿ ಮಾತನಾಡಿದರು.

    ಸಂವಿಧಾನದ ನಾಶ ಮತ್ತು ಮನುಸ್ಮೃತಿಯ ಜಾರಿ ಎಂದರೆ ಶೇ90 ರಷ್ಟು ಭಾರತೀಯರನ್ನು ಮತ್ತೆ ಗುಲಾಮಗಿರಿಗೆ ತಳ್ಳುವುದಾಗಿದೆ. ಇದಕ್ಕಾಗಿ ಬಹಳ ಕುತಂತ್ರಗಳು ನಡೆಯುತ್ತಿವೆ ಎಂದು ಎಚ್ಚರಿಸಿದರು.

    We the people of India ಎನ್ನುವ ಮೂಲಕವೇ ನಮ್ಮ ಸಂವಿಧಾನ ತೆರೆದುಕೊಳ್ಳುತ್ತದೆ. ಸಂವಿಧಾನದ ಆಶಯಗಳನ್ನು ಪರಿಣಾಮಕಾರಿಯಾಗಿ ಅರ್ಥೈಸಿಕೊಂಡು ಪಾಲಿಸದಿದ್ದರೆ ಸಮ ಸಮಾಜ ನಿರ್ಮಾಣ ಸಾಧ್ಯವಿಲ್ಲ.

    ಸಂವಿಧಾನದ ಸಮ ಸಮಾಜ ಮತ್ತು ಜಾತ್ಯತೀತ ತತ್ವದ ಆಶಯಗಳಂತೆಯೇ ನಮ್ಮ ಸರ್ಕಾರ ಸರ್ವರ ಏಳಿಗೆಯ ಕಾರ್ಯಕ್ರಮಗಳನ್ನು ಜಾರಿ ಮಾಡಿದೆ. ಜನರ ಹಣವನ್ನು ಮತ್ತೆ ಜನರ ಬದುಕಿಗೇ ಮರಳಿಸುವುದು ನಮ್ಮ ಕಾರ್ಯಕ್ರಮಗಳ ಉದ್ದೇಶವಾಗಿದೆ ಎಂದರು.

    ಡಿಸಿಎಂ ಡಿ.ಕೆ.ಶಿವಕುಮಾರ್, ಸಮಾಜ ಕಲ್ಯಾಣ ಸಚಿವ ಹೆಚ್.ಸಿ.ಮಹದೇವಪ್ಪ, ಗೃಹ ಸಚಿವ ಜಿ.ಪರಮೇಶ್ವರ್, ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ, ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಮುನಿಯಪ್ಪ, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಹಾಗೂ ಸಚಿವರುಗಳಾದ ಮಂಕಾಳ ವೈದ್ಯ, ಸತೀಶ್ ಜಾರಕಿಹೊಳಿ, ಕೆ.ಜೆ.ಜಾರ್ಜ್, ಈಶ್ವರ್ ಖಂಡ್ರೆ, ವಿಧಾನಪರಿಷತ್ ಸಭಾಪತಿ ಹೊರಟ್ಟಿ,ಮುಖ್ಯಮಂತ್ರಿಗಳ ರಾಜಕೀಯ ಸಲಹೆಗಾರರಾದ ಗೋವಿಂದರಾಜು, ವಿಧಾನ ಪರಿಷತ್ ಸದಸ್ಯರಾದ ಸುದಾಮ್ ದಾಸ್ ಸೇರಿ 10 ಕ್ಕೂ ಹೆಚ್ಚು ಶಾಸಕರು, ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ, ಅಪರ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್ ಸೇರಿ ಪೊಲೀಸ್ ಅಧಿಕಾರಿಗಳು ಹಾಗೂ ಮುಖಂಡರು ಉಪಸ್ಥಿತರಿದ್ದರು.

    ಭಾಷಣದ ಇತರೆ ಹೈಲೈಟ್ಸ್

    ಸಂವಿಧಾನ ಜಾರಿಯಾದ ಬಳಿಕ ಭಾರತದಲ್ಲಿ ಅಧಿಕೃತವಾಗಿ ಪ್ರಜಾಪ್ರಭುತ್ವ ವ್ಯವಸ್ಥೆ ಜಾರಿಯಾಯಿತು

    ಬುದ್ದ, ಬಸವ ಕಾಲದಿಂದಲೂ ಪ್ರಜಾಪ್ರಭುತ್ವ ವ್ಯವಸ್ಥೆ ನಮ್ಮ ನೆಲದಲ್ಲಿ ರೂಪುಗೊಂಡಿದೆ

    ಸಂವಿಧಾನ ಜಾರಿ ಆಗುವ ಸಂದರ್ಭದಲ್ಲಿ ಪಾರ್ಲಿಮೆಂಟಿನಲ್ಲಿ ನಡೆದ ಚರ್ಚೆಗಳು ನಮ್ಮ ಸಂವಿಧಾನದ ಮಹತ್ವಕ್ಕೆ ಮತ್ತು ಸಂವಿಧಾನ ವಿರೋಧಿಗಳ ಮನಸ್ಥಿತಿಗೆ ಕನ್ನಡಿ ಹಿಡಿದಂತಿವೆ

  • Ganesh Chaturthi festival: ಇಂದಿನಿಂದ ಯಶವಂತಪುರ-ಬೆಳಗಾವಿ ನಡುವೆ ವಿಶೇಷ ರೈಲುಗಳ ಆರಂಭ

    Ganesh Chaturthi festival: ಇಂದಿನಿಂದ ಯಶವಂತಪುರ-ಬೆಳಗಾವಿ ನಡುವೆ ವಿಶೇಷ ರೈಲುಗಳ ಆರಂಭ

    ಬೆಂಗಳೂರು:

    ಗಣೇಶ ಚತುರ್ಥಿ ಹಬ್ಬದ ಸಂದರ್ಭದಲ್ಲಿ ಸಾರ್ವಜನಿಕರ ಬೇಡಿಕೆ ಮೇರೆಗೆ ಮತ್ತು ಪ್ರಯಾಣಿಕರ ಅನುಕೂಲಕ್ಕಾಗಿ ಯಶವಂತಪುರ ಮತ್ತು ಬೆಳಗಾವಿ ನಿಲ್ದಾಣಗಳ ನಡುವೆ ವಿಶೇಷ ರೈಲುಗಳನ್ನು ಓಡಿಸಲು ನೈರುತ್ಯ ರೈಲ್ವೆ ವಲಯವು ನಿರ್ಧರಿಸಿದೆ. ಅವುಗಳ ಮಾಹಿತಿ.

    ರೈಲುಗಳ ವಿವರ

    1. ರೈಲುಗಳ ಸಂಖ್ಯೆ 07389/07390 ಯಶವಂತಪುರ-ಬೆಳಗಾವಿ-ಯಶವಂತಪುರ ವಿಶೇಷ ಎಕ್ಸ್‌ಪ್ರೆಸ್ ಈ ವಿಶೇಷ ರೈಲು (07389) ಯಶವಂತಪುರ ಮತ್ತು ಬೆಳಗಾವಿ ಎಕ್ಸ್‌ಪ್ರೆಸ್ ರೈಲು ಸೆಪ್ಟೆಂಬರ್ 15 ರಂದು ಸಂಜೆ 06:15 ಗಂಟೆಗೆ ಯಶವಂತಪುರ ನಿಲ್ದಾಣದಿಂದ ಹೊರಟು, ಮರುದಿನ ಬೆಳಿಗ್ಗೆ 6 ಗಂಟೆಗೆ ಬೆಳಗಾವಿ ನಿಲ್ದಾಣವನ್ನು ತಲುಪಲಿದೆ. ಈ ರೈಲು ಮಾರ್ಗ ಮಧ್ಯದಲ್ಲಿ ತುಮಕೂರು-07:03/07:05pm, ಅರಸೀಕೆರೆ-08:15/08:20pm, ಬೀರೂರು-08:58/09:00pm, ದಾವಣಗೆರೆ-10:20/10:22pm, ಹರಿಹರ–10:36/10:38pm, ಹಾವೇರಿ-12:03/12:05am, ಹುಬ್ಬಳ್ಳಿ-02:00/02:10am ಮತ್ತು ಧಾರವಾಡ -02:38/02:40 am ನಿಲ್ದಾಣಗಳಿಗೆ ಆಗಮಿಸಿ/ನಿರ್ಗಮಿಸಲಿದೆ. ಹಿಂದಿರುಗುವ ದಿಕ್ಕಿನಲ್ಲಿ ರೈಲು ಸಂಖ್ಯೆ 07390 ಬೆಳಗಾವಿ ಮತ್ತು ಯಶವಂತಪುರ ಎಕ್ಸ್‌ಪ್ರೆಸ್ ರೈಲು ಸೆಪ್ಟೆಂಬರ್ 16 ರಂದು ಸಂಜೆ 05:30 ಗಂಟೆಗೆ ಬೆಳಗಾವಿ ನಿಲ್ದಾಣದಿಂದ ಹೊರಟು, ಮರುದಿನ ಬೆಳಿಗ್ಗೆ 04:30 ಗಂಟೆಗೆ ಯಶವಂತಪುರ ನಿಲ್ದಾಣವನ್ನು ತಲುಪಲಿದೆ. ಈ ರೈಲು ಮಾರ್ಗದಲ್ಲಿ ಧಾರವಾಡ-07:48/07:50pm, ಹುಬ್ಬಳ್ಳಿ-08:35/08:45pm, ಹಾವೇರಿ-09:58/10:00pm, ಹರಿಹರ-10:43/10:45pm, ದಾವಣಗೆರೆ-11:13/11:15pm, ಬೀರೂರು-12:38/12:40am, ಅರಸೀಕೆರೆ-01:15/01:20am ಮತ್ತು ತುಮಕೂರು -02:28/02:30am ನಿಲ್ದಾಣಗಳಿಗೆ ಆಗಮಿಸಿ/ನಿರ್ಗಮಿಸಲಿದೆ.
    2. ರೈಲುಗಳ ಸಂಖ್ಯೆ 07391/07392 ಯಶವಂತಪುರ-ಬೆಳಗಾವಿ-ಯಶವಂತಪುರ ವಿಶೇಷ ಎಕ್ಸ್‌ಪ್ರೆಸ್ ಈ ವಿಶೇಷ ರೈಲು (07391) ಯಶವಂತಪುರ ಮತ್ತು ಬೆಳಗಾವಿ ಎಕ್ಸ್‌ಪ್ರೆಸ್ ರೈಲು ಸೆಪ್ಟೆಂಬರ್ 17 ರಂದು ಸಂಜೆ 06:15 ಗಂಟೆಗೆ ಯಶವಂತಪುರ ನಿಲ್ದಾಣದಿಂದ ಹೊರಟು, ಮರುದಿನ ಬೆಳಿಗ್ಗೆ 6 ಗಂಟೆಗೆ ಬೆಳಗಾವಿ ನಿಲ್ದಾಣಕ್ಕೆ ಆಗಮಿಸದೆ. ಈ ವಿಶೇಷ ರೈಲು ಮಾರ್ಗ ಮಧ್ಯದಲ್ಲಿ (07391) ತುಮಕೂರು-07:03/07:05pm, ಅರಸೀಕೆರೆ-08:15/08:20pm, ಬೀರೂರು-08:58/09:00pm, ದಾವಣಗೆರೆ-10:20/10:22pm, ಹರಿಹರ–10:36/10:38 pm, ಹಾವೇರಿ-12:03/12:05am, ಹುಬ್ಬಳ್ಳಿ-02:00/02:10am ಮತ್ತು ಧಾರವಾಡ -02:38/02:40am ನಿಲ್ದಾಣಗಳಿಗೆ ಆಗಮಿಸಿ/ನಿರ್ಗಮಿಸಲಿದೆ. ಹಿಂದಿರುಗುವ ದಿಕ್ಕಿನಲ್ಲಿ ರೈಲು ಸಂಖ್ಯೆ 07392 ಬೆಳಗಾವಿ ಮತ್ತು ಯಶವಂತಪುರ ವಿಶೇಷ ಎಕ್ಸ್‌ಪ್ರೆಸ್ ರೈಲು ಸೆಪ್ಟೆಂಬರ್ 18 ರಂದು ಸಂಜೆ 06:30 ಗಂಟೆಗೆ ಬೆಳಗಾವಿ ನಿಲ್ದಾಣದಿಂದ ಹೊರಟು, ಮರುದಿನ ಬೆಳಿಗ್ಗೆ 05:25 ಗಂಟೆಗೆ ಯಶವಂತಪುರ ನಿಲ್ದಾಣಕ್ಕೆ ಆಗಮಿಸಲಿದೆ. ಈ ರೈಲು ಮಾರ್ಗ ಮಧ್ಯದಲ್ಲಿ (07392) ಧಾರವಾಡಕ್ಕ-09:18/09:20pm, ಹುಬ್ಬಳ್ಳಿ 09:50/10:10pm, ಹಾವೇರಿ-11:08/11:10pm, ಹರಿಹರ-11:56/11:58pm, ದಾವಣಗೆರೆ-12:18/12:20am, ಬೀರೂರು-01:40/01:42am, ಅರಸೀಕೆರೆ-02:27/02:30am ಮತ್ತು ತುಮಕೂರು-03:50/03:52am ನಿಲ್ದಾಣಗಳಿಗೆ ಆಗಮಿಸಿ/ನಿರ್ಗಮಿಸಲಿದೆ. ಈ ವಿಶೇಷ ರೈಲುಗಳಲ್ಲಿ ಎಸಿ ಟು ಟೈಯರ್ ಬೋಗಿ (1), ಎಸಿ ತ್ರಿ ಟೈಯರ್ ಬೋಗಿಗಳು (7), ಸ್ಲೀಪರ್ ಕ್ಲಾಸ್ ಬೋಗಿಗಳು (8) ಮತ್ತು ಸೆಕೆಂಡ್ ಕ್ಲಾಸ್ ಕಮ್ ಲಗೇಜ್ ಮತ್ತು ಬ್ರೇಕ್ ವ್ಯಾನ್‌ ಹಾಗೂ ಅಂಗವಿಕಲ ಸ್ನೇಹಿ ಕಂಪಾರ್ಟ್‌ಮೆಂಟ್‌ ಬೋಗಿಗಳು (2) ಸೇರಿದಂತೆ ಒಟ್ಟು 18 ಬೋಗಿಗಳನ್ನು ಒಳಗೊಂಡಿರುತ್ತದೆ.

    (Disclaimer: The above press release comes to you under an arrangement with South Western Railway. kindly verify the train schedule timings at the railway station. TheBengaluruLive takes no editorial responsibility for the same.)

  • Aditya L1 Mission: ಆದಿತ್ಯ L1 ಯಶಸ್ವಿಯಾಗಿ ನಾಲ್ಕನೇ ಭೂಮಿ-ಬೌಂಡ್ ಕ್ಕೆ ಒಳಗಾಗಿದೆ: ISRO

    Aditya L1 Mission: ಆದಿತ್ಯ L1 ಯಶಸ್ವಿಯಾಗಿ ನಾಲ್ಕನೇ ಭೂಮಿ-ಬೌಂಡ್ ಕ್ಕೆ ಒಳಗಾಗಿದೆ: ISRO

    ಬೆಂಗಳೂರು:

    ಶುಕ್ರವಾರ ಮುಂಜಾನೆ ಸೂರ್ಯನನ್ನು ಅಧ್ಯಯನ ಮಾಡುವ ಭಾರತದ ಮೊದಲ ಬಾಹ್ಯಾಕಾಶ ಆಧಾರಿತ ಮಿಷನ್ ಆದಿತ್ಯ ಎಲ್ 1 ಬಾಹ್ಯಾಕಾಶ ನೌಕೆಯು ನಾಲ್ಕನೇ ಭೂಕುಸಿತವನ್ನು ಯಶಸ್ವಿಯಾಗಿ ನಡೆಸಿದೆ ಎಂದು ಇಸ್ರೋ ತಿಳಿಸಿದೆ.

    “ನಾಲ್ಕನೇ ಭೂಮಿ-ಬೌಂಡ್ ಕುಶಲತೆಯನ್ನು (EBN#4) ಯಶಸ್ವಿಯಾಗಿ ನಿರ್ವಹಿಸಲಾಗಿದೆ. ಮಾರಿಷಸ್, ಬೆಂಗಳೂರು, ಎಸ್‌ಡಿಎಸ್‌ಸಿ-ಶಾರ್ ಮತ್ತು ಪೋರ್ಟ್ ಬ್ಲೇರ್‌ನಲ್ಲಿರುವ ಇಸ್ರೋದ ಗ್ರೌಂಡ್ ಸ್ಟೇಷನ್‌ಗಳು ಈ ಕಾರ್ಯಾಚರಣೆಯ ಸಮಯದಲ್ಲಿ ಉಪಗ್ರಹವನ್ನು ಟ್ರ್ಯಾಕ್ ಮಾಡಿದ್ದು, ಆದಿತ್ಯ-ಎಲ್ 1 ಗಾಗಿ ಪ್ರಸ್ತುತ ಫಿಜಿ ದ್ವೀಪಗಳಲ್ಲಿ ಇರಿಸಲಾಗಿರುವ ಸಾಗಿಸಬಹುದಾದ ಟರ್ಮಿನಲ್ ನಂತರದ ಸುಟ್ಟ ಕಾರ್ಯಾಚರಣೆಗಳನ್ನು ಬೆಂಬಲಿಸುತ್ತದೆ ಎಂದು ಬಾಹ್ಯಾಕಾಶ ಸಂಸ್ಥೆ ಪೋಸ್ಟ್‌ನಲ್ಲಿ ತಿಳಿಸಿದೆ. X ನಲ್ಲಿ, ಹಿಂದೆ ಟ್ವಿಟರ್ ಎಂದು ಕರೆಯಲ್ಪಡುವ ವೇದಿಕೆ.

    ಹೊಸ ಕಕ್ಷೆಯು 256 ಕಿಮೀ x 121973 ಕಿಮೀ ತಲುಪಿದೆ, ಅದು ಹೇಳಿದೆ: ”ಮುಂದಿನ ಕುಶಲ ಟ್ರಾನ್ಸ್-ಲಗ್ರೇಜಿಯನ್ ಪಾಯಿಂಟ್ 1 ಅಳವಡಿಕೆ (TL1I) – ಭೂಮಿಯಿಂದ ಕಳುಹಿಸುವಿಕೆ – ಸೆಪ್ಟೆಂಬರ್ 19 ರಂದು, ಸುಮಾರು 02:00 ಗಂಟೆಗಳವರೆಗೆ ನಿಗದಿಪಡಿಸಲಾಗಿದೆ. IST.” ಆದಿತ್ಯ-L1 ಭೂಮಿಯಿಂದ ಸರಿಸುಮಾರು 1.5 ಮಿಲಿಯನ್ ಕಿಮೀ ದೂರದಲ್ಲಿರುವ ಮೊದಲ ಸೂರ್ಯ-ಭೂಮಿಯ ಲಗ್ರಾಂಜಿಯನ್ ಪಾಯಿಂಟ್ (L1) ಸುತ್ತ ಹಾಲೋ ಕಕ್ಷೆಯಿಂದ ಸೂರ್ಯನನ್ನು ಅಧ್ಯಯನ ಮಾಡಿದ ಮೊದಲ ಭಾರತೀಯ ಬಾಹ್ಯಾಕಾಶ-ಆಧಾರಿತ ವೀಕ್ಷಣಾಲಯವಾಗಿದೆ.

    ಸೆಪ್ಟೆಂಬರ್ 3, 5 ಮತ್ತು 10 ರಂದು ಕ್ರಮವಾಗಿ ಮೊದಲ, ಎರಡನೇ ಮತ್ತು ಮೂರನೇ ಭೂಕುಸಿತ ಕುಶಲತೆಯನ್ನು ಯಶಸ್ವಿಯಾಗಿ ನಡೆಸಲಾಯಿತು.

    ಭೂಮಿಯ ಸುತ್ತ ಬಾಹ್ಯಾಕಾಶ ನೌಕೆಯ 16 ದಿನಗಳ ಪ್ರಯಾಣದ ಸಮಯದಲ್ಲಿ ಕುಶಲತೆಯನ್ನು ನಡೆಸಲಾಗುತ್ತಿದೆ, ಈ ಸಮಯದಲ್ಲಿ ಬಾಹ್ಯಾಕಾಶ ನೌಕೆಯು L1 ಗೆ ತನ್ನ ಮುಂದಿನ ಪ್ರಯಾಣಕ್ಕೆ ಅಗತ್ಯವಾದ ವೇಗವನ್ನು ಪಡೆಯುತ್ತದೆ.

    ನಾಲ್ಕು ಭೂಮಿಗೆ ಸುತ್ತುವರಿದ ಕಕ್ಷೆಯ ಕುಶಲತೆಯನ್ನು ಪೂರ್ಣಗೊಳಿಸುವುದರೊಂದಿಗೆ, ಆದಿತ್ಯ-L1 ಮುಂದಿನ ಟ್ರಾನ್ಸ್-ಲಗ್ರಾಂಜಿಯನ್1 ಅಳವಡಿಕೆಯ ಕುಶಲತೆಗೆ ಒಳಗಾಗುತ್ತದೆ, ಇದು L1 ಲ್ಯಾಗ್ರೇಂಜ್ ಪಾಯಿಂಟ್‌ನ ಸುತ್ತಲಿನ ಗಮ್ಯಸ್ಥಾನಕ್ಕೆ ಅದರ ಸುಮಾರು 110-ದಿನಗಳ ಪಥವನ್ನು ಪ್ರಾರಂಭಿಸುತ್ತದೆ.

    L1 ಪಾಯಿಂಟ್‌ಗೆ ಆಗಮಿಸಿದ ನಂತರ, ಮತ್ತೊಂದು ಕುಶಲತೆಯು ಆದಿತ್ಯ L1 ಅನ್ನು L1 ಸುತ್ತ ಕಕ್ಷೆಗೆ ಬಂಧಿಸುತ್ತದೆ, ಇದು ಭೂಮಿ ಮತ್ತು ಸೂರ್ಯನ ನಡುವಿನ ಸಮತೋಲಿತ ಗುರುತ್ವಾಕರ್ಷಣೆಯ ಸ್ಥಳವಾಗಿದೆ.

    ಉಪಗ್ರಹವು ಭೂಮಿ ಮತ್ತು ಸೂರ್ಯನನ್ನು ಸೇರುವ ರೇಖೆಗೆ ಸರಿಸುಮಾರು ಲಂಬವಾಗಿರುವ ಸಮತಲದಲ್ಲಿ ಅನಿಯಮಿತ ಆಕಾರದ ಕಕ್ಷೆಯಲ್ಲಿ L1 ಸುತ್ತ ಸುತ್ತುವ ತನ್ನ ಸಂಪೂರ್ಣ ಕಾರ್ಯಾಚರಣೆಯ ಜೀವನವನ್ನು ಕಳೆಯುತ್ತದೆ.

    ಇಸ್ರೋದ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (PSLV-C57) ಸೆಪ್ಟೆಂಬರ್ 2 ರಂದು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ (SDSC) ಎರಡನೇ ಉಡಾವಣಾ ಪ್ಯಾಡ್‌ನಿಂದ ಆದಿತ್ಯ-L1 ಬಾಹ್ಯಾಕಾಶ ನೌಕೆಯನ್ನು ಯಶಸ್ವಿಯಾಗಿ ಉಡಾವಣೆ ಮಾಡಿತು.

    ಅಂದು 63 ನಿಮಿಷ ಮತ್ತು 20 ಸೆಕೆಂಡುಗಳ ಹಾರಾಟದ ಅವಧಿಯ ನಂತರ, ಆದಿತ್ಯ-ಎಲ್1 ಬಾಹ್ಯಾಕಾಶ ನೌಕೆಯನ್ನು ಭೂಮಿಯ ಸುತ್ತ 235×19500 ಕಿಮೀ ಉದ್ದದ ಅಂಡಾಕಾರದ ಕಕ್ಷೆಗೆ ಯಶಸ್ವಿಯಾಗಿ ಸೇರಿಸಲಾಯಿತು.

    ISRO ಪ್ರಕಾರ, L1 ಬಿಂದುವಿನ ಸುತ್ತ ಹಾಲೋ ಕಕ್ಷೆಯಲ್ಲಿ ಇರಿಸಲಾದ ಬಾಹ್ಯಾಕಾಶ ನೌಕೆಯು ಯಾವುದೇ ರಹಸ್ಯ / ಗ್ರಹಣಗಳಿಲ್ಲದೆ ಸೂರ್ಯನನ್ನು ನಿರಂತರವಾಗಿ ವೀಕ್ಷಿಸುವ ಪ್ರಮುಖ ಪ್ರಯೋಜನವನ್ನು ಹೊಂದಿದೆ.

    ಇದು ಸೌರ ಚಟುವಟಿಕೆಗಳನ್ನು ವೀಕ್ಷಿಸುವಲ್ಲಿ ಹೆಚ್ಚಿನ ಪ್ರಯೋಜನವನ್ನು ಒದಗಿಸುತ್ತದೆ ಮತ್ತು ನೈಜ ಸಮಯದಲ್ಲಿ ಬಾಹ್ಯಾಕಾಶ ಹವಾಮಾನದ ಮೇಲೆ ಅವುಗಳ ಪರಿಣಾಮವನ್ನು ನೀಡುತ್ತದೆ.

    ಬೆಂಗಳೂರಿನಲ್ಲಿರುವ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್ (IIA) ಮತ್ತು ಪುಣೆಯಲ್ಲಿರುವ ಇಂಟರ್-ಯೂನಿವರ್ಸಿಟಿ ಸೆಂಟರ್ ಫಾರ್ ಆಸ್ಟ್ರೋನಮಿ ಮತ್ತು ಆಸ್ಟ್ರೋಫಿಸಿಕ್ಸ್ (IUCAA) ಸೇರಿದಂತೆ ISRO ಮತ್ತು ರಾಷ್ಟ್ರೀಯ ಸಂಶೋಧನಾ ಪ್ರಯೋಗಾಲಯಗಳು ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಏಳು ವೈಜ್ಞಾನಿಕ ಪೇಲೋಡ್‌ಗಳನ್ನು ಆದಿತ್ಯ-L1 ಒಯ್ಯುತ್ತದೆ.

    ಪೇಲೋಡ್‌ಗಳು ದ್ಯುತಿಗೋಳ, ವರ್ಣಗೋಳ ಮತ್ತು ಸೂರ್ಯನ ಹೊರಗಿನ ಪದರಗಳನ್ನು (ಕರೋನಾ) ವಿದ್ಯುತ್ಕಾಂತೀಯ ಕಣ ಮತ್ತು ಕಾಂತೀಯ ಕ್ಷೇತ್ರ ಶೋಧಕಗಳನ್ನು ಬಳಸಿಕೊಂಡು ವೀಕ್ಷಿಸುವುದು.

    ವಿಶೇಷ ವಾಂಟೇಜ್ ಪಾಯಿಂಟ್ L1 ಅನ್ನು ಬಳಸಿಕೊಂಡು, ನಾಲ್ಕು ಪೇಲೋಡ್‌ಗಳು ನೇರವಾಗಿ ಸೂರ್ಯನನ್ನು ವೀಕ್ಷಿಸುತ್ತವೆ ಮತ್ತು ಉಳಿದ ಮೂರು ಪೇಲೋಡ್‌ಗಳು ಲ್ಯಾಗ್ರೇಂಜ್ ಪಾಯಿಂಟ್ L1 ನಲ್ಲಿ ಕಣಗಳು ಮತ್ತು ಕ್ಷೇತ್ರಗಳ ಸ್ಥಳದ ಅಧ್ಯಯನಗಳನ್ನು ನಡೆಸುತ್ತವೆ, ಹೀಗಾಗಿ ಅಂತರಗ್ರಹ ಮಾಧ್ಯಮದಲ್ಲಿ ಸೌರ ಡೈನಾಮಿಕ್ಸ್‌ನ ಪ್ರಸರಣ ಪರಿಣಾಮದ ಪ್ರಮುಖ ವೈಜ್ಞಾನಿಕ ಅಧ್ಯಯನಗಳನ್ನು ಒದಗಿಸುತ್ತದೆ. .

    ಆದಿತ್ಯ L1 ಪೇಲೋಡ್‌ಗಳ ಸೂಟ್‌ಗಳು ಕರೋನಲ್ ಹೀಟಿಂಗ್, ಕರೋನಲ್ ಮಾಸ್ ಎಜೆಕ್ಷನ್, ಪ್ರೀ-ಫ್ಲೇರ್ ಮತ್ತು ಫ್ಲೇರ್ ಚಟುವಟಿಕೆಗಳು ಮತ್ತು ಅವುಗಳ ಗುಣಲಕ್ಷಣಗಳು, ಬಾಹ್ಯಾಕಾಶ ಹವಾಮಾನದ ಡೈನಾಮಿಕ್ಸ್ ಮತ್ತು ಕಣಗಳು ಮತ್ತು ಕ್ಷೇತ್ರಗಳ ಪ್ರಸರಣ ಸಮಸ್ಯೆಯನ್ನು ಅರ್ಥಮಾಡಿಕೊಳ್ಳಲು ಅತ್ಯಂತ ನಿರ್ಣಾಯಕ ಮಾಹಿತಿಯನ್ನು ಒದಗಿಸುವ ನಿರೀಕ್ಷೆಯಿದೆ.

    ವಿಜ್ಞಾನಿಗಳ ಪ್ರಕಾರ, ಭೂಮಿ ಮತ್ತು ಸೂರ್ಯನ ನಡುವೆ ಐದು ಲಗ್ರಾಂಜಿಯನ್ ಬಿಂದುಗಳು (ಅಥವಾ ಪಾರ್ಕಿಂಗ್ ಪ್ರದೇಶಗಳು) ಇವೆ, ಅಲ್ಲಿ ಒಂದು ಸಣ್ಣ ವಸ್ತುವನ್ನು ಇರಿಸಿದರೆ ಅಲ್ಲಿ ಉಳಿಯುತ್ತದೆ. ಇಟಾಲಿಯನ್-ಫ್ರೆಂಚ್ ಗಣಿತಜ್ಞ ಜೋಸೆಫ್-ಲೂಯಿಸ್ ಲಾಗ್ರೇಂಜ್ ಅವರ ಬಹುಮಾನ-ವಿಜೇತ ಪತ್ರಿಕೆಗಾಗಿ ಲಾಗ್ರೇಂಜ್ ಪಾಯಿಂಟ್‌ಗಳನ್ನು ಹೆಸರಿಸಲಾಗಿದೆ – ”ಎಸ್ಸೈ ಸುರ್ ಲೆ ಪ್ರಾಬ್ಲೆಮ್ ಡೆಸ್ ಟ್ರೋಯಿಸ್ ಕಾರ್ಪ್ಸ್, 1772.” ಬಾಹ್ಯಾಕಾಶದಲ್ಲಿನ ಈ ಬಿಂದುಗಳನ್ನು ಕಡಿಮೆ ಇಂಧನ ಬಳಕೆಯೊಂದಿಗೆ ಅಲ್ಲಿಯೇ ಉಳಿಯಲು ಬಾಹ್ಯಾಕಾಶ ನೌಕೆಗಳನ್ನು ಬಳಸಬಹುದು.

    ಒಂದು ಲಗ್ರೇಂಜ್ ಬಿಂದುವಿನಲ್ಲಿ, ಎರಡು ದೊಡ್ಡ ಕಾಯಗಳ (ಸೂರ್ಯ ಮತ್ತು ಭೂಮಿ) ಗುರುತ್ವಾಕರ್ಷಣೆಯು ಒಂದು ಸಣ್ಣ ವಸ್ತುವಿನೊಂದಿಗೆ ಚಲಿಸಲು ಅಗತ್ಯವಾದ ಕೇಂದ್ರಾಭಿಮುಖ ಬಲಕ್ಕೆ ಸಮನಾಗಿರುತ್ತದೆ.

  • KSOU: ಅರ್ಜಿ ಸಲ್ಲಿಸಲು ಅವಧಿ ವಿಸ್ತರಣೆ

    KSOU: ಅರ್ಜಿ ಸಲ್ಲಿಸಲು ಅವಧಿ ವಿಸ್ತರಣೆ

    ಬೆಂಗಳೂರು:

    ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವು 2023-24ನೇ ಶೈಕ್ಷಣಿಕ ಸಾಲಿನ ಜುಲೈ ಆವೃತಿಗೆ ಯು.ಜಿಸಿ ಅನುಮೋದಿತ ಶಿಕ್ಷಣಕ್ರಮಗಳ ಪ್ರವೇಶಾತಿಗಾಗಿ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸುವ ಅವಧಿಯನ್ನು ಸೆಪ್ಟೆಂಬರ್ 30ರ ವರೆಗೆ ವಿಸ್ತರಿಸಲಾಗಿದೆ.

    ವಿಶ್ವವಿದ್ಯಾನಿಲಯದ ಅಂತರ್ಜಾಲ www.ksoumysuru.ac.in ರಲ್ಲಿ ಲಭ್ಯವಿರುವ ವಿವರಣಾ ಪುಸ್ತಕದಲ್ಲಿ ಎಲ್ಲಾ ವಿವರಗಳು ಲಭ್ಯವಿದ್ದು, ವಿದ್ಯಾರ್ಥಿಗಳು ಅದರನ್ವಯ ಅರ್ಹ ಶಿಕ್ಷಣಕ್ರಮಗಳಿಗೆ ವಿಶ್ವವಿದ್ಯಾನಿಲಯ ವೆಬ್‍ಸೈಟ್‍ನಲ್ಲಿ ಲಭ್ಯವಿರುವ ಆನ್‍ಲೈನ್ ಅಡ್ಮಿಷನ್ ಪೋರ್ಟಲ್ ಮೂಲಕ ಪ್ರವೇಶಾತಿ ಮಾಡಿಕೊಳ್ಳಬಹುದಾಗಿದೆ.

    ಹೆಚ್ಚಿನ ಮಾಹಿತಿಗಾಗಿ ಪ್ರದೇಶಿಕ ನಿರ್ದೇಶಕರು, ಬೆಂಗಳೂರು ಪ್ರಾದೇಶಿಕ ಕೇಂದ್ರ-04, ನಂ3/3, ಲೋರ ಬಿಸಿನೆಸ್ ಅಕಾಡೆಮಿ ಕಟ್ಟಡ, 2ನೇ ಮಹಡಿ, ಬೇಗೂರು ಮುಖ್ಯ ರಸ್ತೆ, ಹೊಂಗಸಂದ್ರ, ಬೊಮ್ಮನಹಳ್ಳಿ, ಬೆಂಗಳೂರು-560088, ದೂರವಾಣಿ ಸಂಖ್ಯೆ: 080-23158888, 9448668880, 9844556968, 9535555796 ನ್ನು ಸಂಪರ್ಕಿಸಬಹುದಾಗಿದೆ ಎಂದು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಪ್ರಾದೇಶಿಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  • Karnataka: ಎನ್ಇಪಿಯಲ್ಲಿ ನಾಡಿನ, ಮಕ್ಕಳ ಭವಿಷ್ಯ ಅಡಗಿದೆ: ಬಸವರಾಜ ಬೊಮ್ಮಾಯಿ

    Karnataka: ಎನ್ಇಪಿಯಲ್ಲಿ ನಾಡಿನ, ಮಕ್ಕಳ ಭವಿಷ್ಯ ಅಡಗಿದೆ: ಬಸವರಾಜ ಬೊಮ್ಮಾಯಿ

    ಮಂಗಳೂರು:

    ಎನ್‌ಇಪಿಯನ್ನು ಎಸ್‌ಇಪಿ ಮಾಡಬಹುದೇ ಹೊರತು ಅದರ ಅಂಶಗಳನ್ನು ತೆಗೆಯಲು ಸಾಧ್ಯವಿಲ್ಲ. ಅಷ್ಟು ಸುಲಭವೂ ಅಲ್ಲ. ಯಾಕೆಂದರೆ ಎನ್‌ಇಪಿಯಲ್ಲಿ ಮಕ್ಕಳ, ನಾಡಿನ ಭವಿಷ್ಯ ಅಡಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

    ಪೀಪಲ್ಸ್ ಫೋರಂ ಫಾರ್ ಕರ್ನಾಟಕ ಎಜುಕೇಶನ್ ಮಂಗಳೂರು ವತಿಯಿಂದ ಗುರುವಾರ ನಡೆದ ‘ರಾಷ್ಟ್ರೀಯ ಶಿಕ್ಷಣ ನೀತಿ-2020’ ಕುರಿತು ಶಿಕ್ಷಣ ತಜ್ಞರ ವಿಶೇಷ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

    ಎನ್‌ಇಪಿ ಬಗ್ಗೆ ಚರ್ಚೆ ನಡೆಯಲಿ. ಅದರಲ್ಲಿ ತಪ್ಪು ಇದ್ದರೆ ಸರಿ ಮಾಡೋಣ. ಯಾವ ಕಾರಣದಿಂದ ಎನ್‌ಇಪಿ ಬೇಡ ಎಂಬುದನ್ನು ಉನ್ನತ ಶಿಕ್ಷಣ ಹಾಗೂ ಪ್ರಾಥಮಿಕ ಶಿಕ್ಷಣ ಸಚಿವರು ಇನ್ನೂ ಹೇಳಿಲ್ಲ. ಉತ್ತರ ಭಾರತದ ಅಂಶವನ್ನು ಇದರಲ್ಲಿ ತುರುಕಲಾಗಿದೆ ಎನ್ನುತ್ತಾರೆ. ಅಂತಹ ಯಾವ ಅಂಶ ಎನ್‌ಇಪಿಯಲ್ಲಿ ಇದೆ ಎಂಬುವುದನ್ನು ಸಚಿವರು ತೋರಿಸಲಿ ಎಂದು ಸವಾಲು ಹಾಕಿದ ಬೊಮ್ಮಾಯಿ ಅವರು, ಯಾವುದೇ ಕಾರಣಕ್ಕೂ ಎನ್‌ಇಪಿ ಸಂಪೂರ್ಣ ಬದಲು ಮಾಡಲು ಸಾಧ್ಯವಿಲ್ಲ ಎಂದರು.

    ರಾಜಕಾರಣ ಯಾವತ್ತಿಗೂ ಜನಪರವಾಗಿರಬೇಕು. ರಾಜಕಾರಣದಿಂದಾಗಿ ರಾಜ್ಯ ಹಿಂದೆ ಹೋಗಬಾರದು. ಜನಾಂಗವನ್ನು ದೂರ ನೂಕುವಂತಾಗಬಾರದು. ಜನಪರವಾಗಿರದಿದ್ದರೆ ಅಂತಹ ರಾಜಕೀಯ ದೇಶ, ರಾಜ್ಯಕ್ಕೆ ಮಾರಕ ಎಂದು ಅಭಿಪ್ರಾಯ ಪಟ್ಟರು.

    ಎನ್‌ಇಪಿಯನ್ನು ರಾಜ್ಯದಲ್ಲಿ ಅನುಷ್ಠಾನ ಮಾಡುವಾಗ ಸಾಕಷ್ಟು ತಯಾರಿ ಮಾಡಿದ್ದೆವು. ಆದರೆ ಸುದೀರ್ಘ ಕಾಲ ಚಿಂತನೆ ಮಾಡಿ ತಯಾರಿಸಿದ ಎನ್‌ಇಪಿಯನ್ನು ಕಾಂಗ್ರೆಸ್ ಸರಕಾರ ಬಂದ 10-15 ದಿನಗಳಲ್ಲಿಯೇ ರದ್ದು ಮಾಡುತ್ತೇವೆ ಎಂದು ಹೇಳಿರುವುದು ರಾಜಕೀಯ ದ್ವೇಷದ ನಿರ್ಧಾರವಾಗಿದೆ. ಯಾವುದೇ ವಿಷಯದಲ್ಲಿ ರಾಜಕಾರಣ ಮಾಡಬಹುದು. ಆದರೆ, ಶಿಕ್ಷಣ ಕ್ಷೇತ್ರದಲ್ಲಿ ಯಾವುದೇ ಕಾರಣಕ್ಕೂ ರಾಜಕೀಯ ಮಾಡಬಾರದು. ಒಂದು ವೇಳೆ ರಾಜಕೀಯ ಮಾಡಿದರೆ ಅದು ಮಕ್ಕಳ ಭವಿಷ್ಯದಲ್ಲಿ ಕಳ್ಳತನ ಮಾಡಿದಂತಾಗುತ್ತದೆ ಎಂದರು.

    ಇಲ್ಲಿಯವರೆಗೆ ದೇಶದಲ್ಲಿ ಇದ್ದ ಮೆಕಾಲೆ ಶಿಕ್ಷಣದಿಂದ ಅಕ್ಷರ ಓದು ಕಲಿಯಲು ಮಾತ್ರ ಸಾಧ್ಯವಾಗುತ್ತಿತ್ತು. ಆದರೆ, ಎನ್‌ಇಪಿಯಿಂದ ಸ್ವಂತ ಚಿಂತನೆಯ ಮೂಲಕ ಉನ್ನತ ಪರಿಣಾಮ ಕಾಣಲು ಅವಕಾಶವಿದೆ. ಮಕ್ಕಳಲ್ಲಿ ಪ್ರಯೋಗಶೀಲತೆ ಹೆಚ್ಚಲಿದೆ. ಆದರೆ, ಸಿದ್ದರಾಮಯ್ಯ ಅವರಿಗೆ ಪ್ರಯೋಗಶೀಲತೆ ಬೇಕಾಗಿಲ್ಲ. ಮಕ್ಕಳ ಭವಿಷ್ಯಕ್ಕೆ ಬೇಕು ಎಂದು ಹೇಳಿದರು.

    ಬೆಂಗಳೂರಿನ ಸೆಸ್ ನಿರ್ದೇಶಕ ಗೌರೀಶ್, ಮಾಜಿ ಎಂಎಲ್‌ಸಿ ಅರುಣ್, ಶಾರದಾ ವಿದ್ಯಾಸಂಸ್ಥೆಗಳ ಮುಖ್ಯಸ್ಥ ಪ್ರೊ|ಎಂ.ಬಿ.ಪುರಾಣಿಕ್, ಕಾಲೇಜು ಶಿಕ್ಷಣ ಇಲಾಖೆಯ ವಿಶ್ರಾಂತ ಹೆಚ್ಚುವರಿ ನಿರ್ದೇಶಕ ಪ್ರೊ| ರಾಜಶೇಖರ್ ಹೆಬ್ಬಾರ್, ಮಂಗಳೂರು ವಿವಿ ನಿಕಟಪೂರ್ವ ಸಿಂಡಿಕೇಟ್ ಸದಸ್ಯ ರಮೇಶ್ ಕೆ. ವೇದಿಕೆಯಲ್ಲಿದ್ದರು.

    ಸಂಸದ ನಳಿನ್ ಕುಮಾರ್ ಕಟೀಲು, ಮಾಜಿ ಉನ್ನತ ಶಿಕ್ಷಣ ಸಚಿವ ಡಾ|ಸಿ.ಎನ್. ಅಶ್ವತ್ಥ ನಾರಾಯಣ, ಶಾಸಕರಾದ ವೇದವ್ಯಾಸ ಕಾಮತ್, ಡಾ|ವೈ ಭರತ್ ಶೆಟ್ಟಿ, ಭಾಗೀರಥಿ ಮುರುಳ್ಯ, ವಿಧಾನ ಪರಿಷತ್ ಸದಸ್ಯ ಪ್ರತಾಪ್‌ಸಿಂಹ ನಾಯಕ್ ಮುಂತಾದ ಗಣ್ಯರು ಉಪಸ್ಥಿತರಿದ್ದರು.