ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿಯಾಗಿ ಕಾವೇರಿ ಬಿ.ಬಿ. ನೇಮಕ
ಬೆಂಗಳೂರು, ಜೂನ್ 7: ಹುದ್ದೆ ನಿರೀಕ್ಷೆಯಲ್ಲಿದ್ದ ಐಎಎಸ್ ಅಧಿಕಾರಿ ಕಾವೇರಿ ಬಿ.ಬಿ. (2008 ಬ್ಯಾಚ್) ಅವರನ್ನು ನಗರಾಭಿವೃದ್ಧಿ ಇಲಾಖೆ (ಯುಡಿ ಮತ್ತು ಮುನಿಸಿಪಾಲಿಟೀಸ್) ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ.
ದೀಪಾ ಚೋಳನ್ ಅವರ ವರ್ಗಾವಣೆಯ ಬಳಿಕ ತೆರವಾಗಿದ್ದ ಹುದ್ದೆಗೆ ಕಾವೇರಿ ಬಿ.ಬಿ. ಅವರನ್ನು ಸರ್ಕಾರ ನೇಮಕ ಮಾಡಿದೆ.
ನಗರಾಡಳಿತ, ನಗರ ಯೋಜನೆ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ಸಂಬಂಧಿಸಿದ ಪ್ರಮುಖ ಕಾರ್ಯಗಳ ಜವಾಬ್ದಾರಿ ಅವರ ಮೇಲಿದೆ.
