Home ಬೆಂಗಳೂರು ನಗರ Cauvery Water to Tamil Nadu: ಕೇಂದ್ರ ಜಲಶಕ್ತಿ ಸಚಿವರಿಗೆ ಕಾವೇರಿ ವಸ್ತುಸ್ಥಿತಿ ಮನವರಿಕೆ: ಡಿಸಿಎಂ...

Cauvery Water to Tamil Nadu: ಕೇಂದ್ರ ಜಲಶಕ್ತಿ ಸಚಿವರಿಗೆ ಕಾವೇರಿ ವಸ್ತುಸ್ಥಿತಿ ಮನವರಿಕೆ: ಡಿಸಿಎಂ ಡಿ.ಕೆ.ಶಿವಕುಮಾರ್

17
0
Cauvery Water to Tamil Nadu: Tomorrow, Karnataka DCM DK Shivakumar would try to persuade it with Union Jal Shakti Minister in Jaipur
Cauvery Water to Tamil Nadu: Tomorrow, Karnataka DCM DK Shivakumar would try to persuade it with Union Jal Shakti Minister in Jaipur

ಬೆಂಗಳೂರು:

“ಜೈಪುರದಲ್ಲಿ ನಾಳೆ ನಡೆಯಲಿರುವ ಆಣೆಕಟ್ಟು ಸುರಕ್ಷಣಾ ಸಭೆಗೆ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು ಆಗಮಿಸಲಿದ್ದು, ಈ ಸಂದರ್ಭದಲ್ಲಿ ಕಾವೇರಿ ನೀರಿನ ವಿಚಾರವಾಗಿ ರಾಜ್ಯದ ವಸ್ತುಸ್ಥಿತಿಯನ್ನು ವಿವರಿಸಲಿದ್ದೇನೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.

ಸದಾಶಿವನಗರದ ನಿವಾಸದ ಬಳಿ ಮಾಧ್ಯಮಗಳಿಗೆ ಬುಧವಾರ ಉತ್ತರಿಸಿದ ಅವರು: “ಕಾವೇರಿ ನೀರಿನ ವಿಚಾರವಾಗಿ ಇಂದು ಸರ್ವಪಕ್ಷಗಳ ತುರ್ತು ಸಭೆ ಕರೆಯಲಾಗಿದೆ. ಹಿರಿಯ ನಾಯಕರುಗಳು ಪಕ್ಷ ಭೇದ ಮರೆತು ಸಲಹೆ ಸೂಚನೆ ನೀಡುತ್ತಾರೆ ಎಂಬ ನಿರೀಕ್ಷೆ ಇದೆ,” ಎಂದರು.

ಜೈಪುರದ ಸಭೆಗೆ ಎಲ್ಲಾ ರಾಜ್ಯಗಳ ನೀರಾವರಿ ಸಚಿವರುಗಳು ಭಾಗವಹಿಸಲಿದ್ದಾರೆ. ನಮ್ಮ ಕಾನೂನು ತಜ್ಞರ ಸಲಹೆ ಪಡೆದು ಕೇಂದ್ರ ನೀರಾವರಿ ಸಚಿವರಿಗೆ ವಾಸ್ತವಾಂಶ ಮನವರಿಕೆ ಮಾಡಿಕೊಡುತ್ತೇವೆ.” ಎಂದರು.

ಕುಮಾರಸ್ವಾಮಿ ಅವರು ಸಭೆಗೆ ಬರಲು ಆಗುವುದಿಲ್ಲ ಎಂದಿದ್ದಾರೆ ಎನ್ನುವ ಪ್ರಶ್ನೆಗೆ “ಮಂಗಳವಾರ ರಾತ್ರಿ ಮುಖ್ಯಮಂತ್ರಿಗಳು ಹಾಗೂ ಸಚಿವರ ಜತೆ ಸಮಾಲೋಚನೆ ನಡೆಸಿ ಸಭೆ ನಡೆಸುವ ಬಗ್ಗೆ ತೀರ್ಮಾನ ತೆಗೆದುಕೊಂಡಿದ್ದು, ಅವರದ್ದು ಏನೂ ತಪ್ಪಿಲ್ಲ, ನಾವೇ ತುರ್ತಾಗಿ ಸಭೆ ಕರೆದಿದ್ದು. ಎಲ್ಲಿದ್ದರೂ ಅವರು ಸಲಹೆ, ಸೂಚನೆಗಳನ್ನು ನೀಡಬಹುದು. ನಾವು ಸ್ವೀಕರಿಸುತ್ತೇವೆ. ನಮಗೂ ಸಹ ಅನೇಕ ಕಾರ್ಯಕ್ರಮಗಳು ಇದ್ದವು, ಮುಖ್ಯಮಂತ್ರಿಗಳು ಎರಡು ಪ್ರಮುಖ ಕಾರ್ಯಕ್ರಮಗಳನ್ನು ರದ್ದು ಮಾಡಿಕೊಂಡಿದ್ದಾರೆ” ಎಂದು ತಿಳಿಸಿದರು.

ಬಿ.ಕೆ. ಹರಿಪ್ರಸಾದ್ ಅವರಿಗೆ ಎಐಸಿಸಿ ನೋಟಿಸ್ ನೀಡಿದೆ ಎನ್ನುವ ಪ್ರಶ್ನೆಗೆ “ಇದು ನನ್ನ ವ್ಯಾಪ್ತಿಗೆ ಬರುವುದಿಲ್ಲ. ಶಿಸ್ತನ್ನು ನಮ್ಮ ಪಕ್ಷದಲ್ಲಿ ಮೊದಲಿನಿಂದಲೂ ಪಾಲಿಸಿಕೊಂಡು ಬರಲಾಗುತ್ತಿದೆ. ಮುಂದಿನದು ಹೈಕಮಾಂಡ್ ತೀರ್ಮಾನಕ್ಕೆ ಬಿಟ್ಟದ್ದು” ಎಂದು ತಿಳಿಸಿದರು.

LEAVE A REPLY

Please enter your comment!
Please enter your name here