Home ಚಿಕ್ಕಮಗಳೂರು Serial accident in Chikkamagalur: ಬೈಕ್‌ನಲ್ಲಿದ್ದ ದಂಪತಿ ಸ್ಥಳದಲ್ಲೇ ದುರ್ಮರಣ; 14 ತಿಂಗಳ ಮಗು ಸ್ಥಿತಿ...

Serial accident in Chikkamagalur: ಬೈಕ್‌ನಲ್ಲಿದ್ದ ದಂಪತಿ ಸ್ಥಳದಲ್ಲೇ ದುರ್ಮರಣ; 14 ತಿಂಗಳ ಮಗು ಸ್ಥಿತಿ ಗಂಭೀರ

6
0
Serial accident in Chikkamagalur: couple on bike died on the spot; 14-month-old child is in critical condition
Serial accident in Chikkamagalur: couple on bike died on the spot; 14-month-old child is in critical condition
Advertisement
bengaluru

ಚಿಕ್ಕಮಗಳೂರು:

ಚಿಕ್ಕಮಗಳೂರು ತಾಲೂಕಿನ ಹಿರೇಗೌಜ ಸಮೀಪ ಭೀಕರ ಸರಣಿ ಅಪಘಾತ ಸಂಭವಿಸಿದ್ದು ದಂಪತಿ ಸ್ಥಳದಲ್ಲೇ ಸಾವನ್ನಪಿದ್ದರೆ, ಅವರ 14 ತಿಂಗಳ ಮಗು ಗಂಭೀರವಾಗಿ ಗಾಯಗೊಂಡಿದೆ. ಕಡೂರು- ಮೂಡಿಗೆರೆ ಹೆದ್ದಾರಿ ಹಿರೇಗೌಜ ಬಳಿ ಟಿಪ್ಪರ್ ಲಾರಿ, ಕಾರು ಮತ್ತು ಬೈಕ್ ನಡುವೆ ಸರಣಿ ಅಪಘಾತ ಸಂಭವಿಸಿದೆ.

ಕಾರು, ಟಿಪ್ಪರ್ ಲಾರಿ, ಬೈಕ್ ನಡುವೆ ಅಪಘಾತ ನಡೆದಿದ್ದು, ಬೈಕ್‌ನಲ್ಲಿದ್ದ ದಂಪತಿ ಶಿವಮೊಗ್ಗ ಮೂಲದ ಸಯ್ಯದ್ ಆಸೀಫ್ (38), ಮಾಜಿನಾ (33) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅವರ ಜತೆಗಿದ್ದ 14 ತಿಂಗಳ ಮಗುವಿಗೆ ಗಂಭೀರ ಗಾಯಗಳಾಗಿವೆ.

ದಂಪತಿ ಚಿಕ್ಕಮಗಳೂರಿನಿಂದ ಶಿವಮೊಗ್ಗಕ್ಕೆ ತೆರಳುತ್ತಿದ್ದ ವೇಳೆ ಕಾರು, ಬೈಕ್‌ ಮತ್ತು ಲಾರಿ ಮಧ್ಯೆ ಈ ಅವಘಡ ಸಂಭವಿಸಿದೆ. ಟಿಪ್ಪರ್ ಲಾರಿ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಕಳೆದ ರಾತ್ರಿ ಸಖರಾಯಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

bengaluru bengaluru


bengaluru

LEAVE A REPLY

Please enter your comment!
Please enter your name here