ಬೆಂಗಳೂರು:
ಪಾನ್ ಕಾರ್ಡ್, ಆಧಾರ್ ಕಾರ್ಡ್, ಆರ್ ಸಿ ಬುಕ್ ಸೇರಿದಂತೆ ಮಹತ್ವದ ದಾಖಲೆಗಳನ್ನು ನಕಲಿಯಾಗಿ ಮುದ್ರಿಸಿ ವಂಚಿಸುತ್ತಿದ್ದ ಬೃಹತ್ ಜಾಲ ಭೇದಿಸಿರುವ ಸಿಸಿಬಿ ಪೊಲೀಸರು, 10 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಕಮಲ್ಪಂುತ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಂಧಿತ ಆರೋಪಿಗಳು ಸರ್ಕಾರ ಹಾಗೂ ಸಾರ್ವಜನಿಕರನ್ನು ವಂಚಿಸುವ ಉದ್ದೇಶದಿಂದ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಮೋನೋಗ್ರಾಮ್ ಬಳಸಿ ಆಧಾರ್ ಕಾರ್ಡ್, ಪಾನ್ ಕಾರ್ಡ್, ಚುನಾವಣೆಯ ಗುರುತಿನ ಚೀಟಿ, ವಾಹನಗಳ ಆರ್ ಸಿ ಬುಕ್ಗಾಳು ಸೇರಿದಂತೆ ಅನೇಕ ದಾಖಲೆಗಳನ್ನು ನಕಲಿ ಮಾಡುತ್ತಿದ್ದರು ಎಂದು ತಿಳಿಸಿದರು.
ಮಹತ್ವದ ದಾಖಲೆಗಳನ್ನು ನಕಲಿಯಾಗಿ ಮುದ್ರಿಸಿ ವಂಚಿಸುತ್ತಿದ್ದ ಖಚಿತ ಮಾಹಿತಿ ಆಧರಿಸಿ ಕನಕಪುರ ರಸ್ತೆಯ ಗುಬ್ಬನಾಳ ಗ್ರಾಮದ 80 ಅಡಿ ರಸ್ತೆಯಲ್ಲಿನ ನಿತ್ಯ ಹೆರಿಟೇಜ್ ಅಪಾರ್ಟ್ ಮೆಂಟ್ ಪ್ಲಾಟ್ ಸಂಖ್ಯೆ 101ರ ಮೇಳೆ ದಾಳಿ ನಡೆಸಿದಾಗ ಮಾಲೀಕ ಕಮಲೇಶ್ ಕುಮಾರ್ ಭವಾಲಿಯ(33) ಸರ್ಕಾರ ಅಧಿಕೃತವಾಗಿ ವಿತರಿಸಬೇಕಾಗಿದ್ದ ಕಾರ್ಡ್ಗದಳನ್ನು ಅನಧಿಕೃತವಾಗಿ ದಾಸ್ತಾನು ಮಾಡಿಕೊಂಡಿರುವುದು ಪತ್ತೆಯಾಗಿದೆ ಎಂದರು.
ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಆತ ನೀಡಿದ ಮಾಹಿತಿ ಮೇರೆಗೆ ಪುಟ್ಟೇನಹಳ್ಳಿ ಮುಖ್ಯರಸ್ತೆಯ 6ನೇ ಹಂತದ ಎಸ್.ಲೋಕೇಶ್ (37), ಶಾಂತಿನಗರದ ಆ್ಯಂಡ್ರೆ ರಸ್ತೆಯ ಸುದರ್ಶನ್(50), ಇದೇ ಪ್ರದೇಶದ ನಿರ್ಮಲ್ ಕುಮಾರ್(56), ಕೆಂಗೇರಿಯ ಹರ್ಷಾ ಲೇಔಟ್ ನ ದರ್ಶನ್ (25), ಹಾಸನ ಜಿಲ್ಲೆ ಬೈಪಾಸ್ ರಸ್ತೆಯ ಗವೇನಹಳ್ಳಿಯ ಶ್ರೀಧರ್(31), ಜ್ಞಾನಭಾರತಿಯ ಕೆಂಚನಪುರ ಕ್ರಾಸ್ ನ ಚಂದ್ರಪ್ಪ(28), ವಿಜಯನಗರದ ಮಾರೇನಹಳ್ಳಿಯ ಅಭಿಲಾಷ್(27), ಸರಸ್ವತಿನಗರದ ಶ್ರೀಧರ ದೇಶಪಾಂಡೆ(35), ಬಸವೇಶ್ವರನಗರದ ಸತ್ಯನಾರಾಯಣ ಲೇಔಟ್ನಾ ತೇಜಸ್(30) ಎಂಬವರನ್ನು ಬಂಧಿಸಲಾಗಿದೆ ಎಂದು ತಿಳಿಸಿದರು.
V imp detection by CCB.. fake PAN cards, DL, Aadhar, Election ID cards seized..10 accused arrested..such fake documents can b misused during verification for Passports, Bank loans, RC for stolen vehicles..further investigation on..@CPBlr @BlrCityPolice pic.twitter.com/30KqXQjp3N
— Sandeep Patil IPS (@ips_patil) January 4, 2021
ಈ ಆರೋಪಿಗಳು ಸರ್ಕಾರದ ಮಹತ್ವದ ದಾಖಲೆಗಳಾದ ಪಾನ್ ಕಾರ್ಡ್, ಆಧಾರ್ ಕಾರ್ಡ್ , ರೇಷನ್ ಕಾರ್ಡ್, ಡಿಎಲ್ ಗಳಷ್ಟೇ ಅಲ್ಲದೆ ವಾಹನಗಳ ಆರ್ ಸಿ ಬುಕ್ ಗಳನ್ನು ನಕಲಿಯಾಗಿ ತಯಾರಿಸುತ್ತಿದ್ದರು. ಕಳ್ಳತನವಾಗಿದ್ದ ವಾಹನಗಳಿಗೆ ಎಂಜಿನ್ ನಂಬರ್ ನಮೂದಿಸಿ ನಕಲಿ ಆರ್ ಸಿ ಬುಕ್ ತಯಾರು ಮಾಡಿಕೊಡುತ್ತಿದ್ದರು. ಬ್ಯಾಂಕ್ ಸಾಲ ಪಡೆಯಲು ಈ ನಕಲಿ ದಾಖಲಾತಿಗಳನ್ನು ಬಳಕೆ ಮಾಡಲಾಗುತ್ತಿತ್ತು ಎಂದು ಆಯುಕ್ತರು ವಿವರಿಸಿದರು.
ಆರೋಪಿ ಲೋಕೇಶ್ ಹಾಗೂ ಮತ್ತಿತರರು ಸರ್ಕಾರಿ ದಾಖಲೆಗಳನ್ನು ಮುದ್ರಿಸಿಕೊಡುವ ಗುತ್ತಿಗೆ ಕಂಪೆನಿಯಾದ ರೋಸ್ ಮಾರ್ಟ್ನಗಲ್ಲಿ ಕೆಲಸ ಮಾಡುತ್ತಿದ್ದು, ಅಲ್ಲಿಗೆ ಬಂದ ಡಾಟಾವನ್ನು ಕದ್ದು ಪರ್ಯಾಯವಾಗಿ ಇವರೇ ಕಾರ್ಡ್ಗ ಳನ್ನು ಮುದ್ರಿಸಿ ವಿತರಣೆ ಮಾಡುತ್ತಿದ್ದರು. ಕಳೆದ ಎರಡು ವರ್ಷಗಳಿಂದಲೂ ಆರೋಪಿಗಳು ಈ ಕೆಲಸ ಮಾಡುತ್ತಿದ್ದು, ಸಾಕಷ್ಟು ನಕಲಿ ದಾಖಲಾತಿಗಳನ್ನು ಮಾರಾಟ ಮಾಡಿರುವುದಾಗಿ ಬಾಯ್ಬಿಟ್ಟಿದ್ದಾರೆ ಎಂದು ಹೇಳಿದರು.
ಬಂಧಿತರಿಂದ ಹೆಸರು, ವಿಳಾಸ ನಮೂದಿಸದೇ ಇರುವ ಸರ್ಕಾರದ ಮೋನೋಗ್ರಾಮ್ ಹೊಂದಿರುವ ತಲಾ 9 ಸಾವಿರ ಆಧಾರ್ ಮತ್ತು ಪಾನ್ ಕಾರ್ಡ್‌ಗಳು, 1200 ರೇಷನ್ ಕಾರ್ಡ್‌ಗಳು, ಹೆಸರು, ವಿಳಾಸ ಮುದ್ರಿಸಿರುವ 250 ನಕಲಿ ಆರ್ ಸಿ ಬುಕ್ಗ ಳು, 6240 ನಕಲಿ ಚುನಾವಣಾ ಗುರುತಿನ ಚೀಟಿಗಳು, ಹೆಸರು, ವಿಳಾಸ ನಮೂದಿಸದೇ ಇರುವ 28 ಸಾವಿರ ಚುನಾವಣಾ ಗುರುತಿನ ಚೀಟಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದರು. ಇವುಗಳನ್ನು ಮುದ್ರಿಸಲು ಬಳಸುತ್ತಿದ್ದ ಮೂರು ಲ್ಯಾಪ್ ಟಾಪ್, ಮೂರು ಪ್ರಿಂಟರ್, 67 ಸಾವಿರ ನಗದು ಹಾಗೂ ಒಂದು ಸಿಪಿಯುವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದರು.
ಈ ಜಾಲ ಬೆಳಕಿಗೆ ಬಂದ ಬಳಿಕ ಪೊಲೀಸರು ಮತ್ತಷ್ಟು ವಿಚಾರಣೆಯನ್ನು ತೀವ್ರಗೊಳಿಸಿದ್ದಾರೆ. ಆರೋಪಿಗಳು ಯಾರಿಗೆಲ್ಲಾ ನಕಲಿ ದಾಖಲಾತಿಗಳನ್ನು ಕೊಟ್ಟಿದ್ದಾರೆ. ಕಳ್ಳತನವಾಗಿರುವ ಎಷ್ಟು ವಾಹನಗಳಿಗೆ ನಕಲಿ ಆರ್ ಸಿ ಬುಕ್ ಮಾಡಿಕೊಟ್ಟಿದ್ದಾರೆ ಎಂಬ ಮಾಹಿತಿಯನ್ನು ಕಲೆಹಾಕುತ್ತಿದ್ದಾರೆ ಎಂದರು. 2018ರಲ್ಲಿ ಅನ್ನಪೂರ್ಣೇಶ್ವರಿನಗರದಲ್ಲಿ ನಡೆದಿರುವ ಅಪರಾಧ ಕೃತ್ಯದಲ್ಲೂ ಈ ಆರೋಪಿಗಳ ಪಾತ್ರ ಇರುವುದಾಗಿ ತಿಳಿದು ಬಂದಿದ್ದು, ಹೆಚ್ಚಿನ ವಿಚಾರಣೆ ನಡೆಸುತ್ತಿರುವುದಾಗಿ ಆಯುಕ್ತರು ಹೇಳಿದರು. ಅಪರಾಧ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್, ಡಿಸಿಪಿ ರವಿಕುಮಾರ್ ಹಾಜರಿದ್ದರು. UNI