Home ಬೆಂಗಳೂರು ನಗರ ಕನ್ನಡೇತರರಿಗೆ ಕನ್ನಡ ಕಲಿಸುವ ಶಿಕ್ಷಕರ ತರಬೇತಿ ಕಾರ್ಯಾಗಾರ

ಕನ್ನಡೇತರರಿಗೆ ಕನ್ನಡ ಕಲಿಸುವ ಶಿಕ್ಷಕರ ತರಬೇತಿ ಕಾರ್ಯಾಗಾರ

41
0

ಬೆಂಗಳೂರು:

ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಬೆಂಗಳೂರು ನಗರದಲ್ಲಿರುವ ಕನ್ನಡ ಬಾರದ ನಾಗರಿಕರಿಗೆ ಕನ್ನಡ ಭಾಷೆಯನ್ನು ಕಲಿಸುವ ಕಾರ್ಯಕ್ಕೆ ಪುನಶ್ಚೇತನ ನೀಡುತ್ತಿದೆ. ಇದರ ಅಂಗವಾಗಿ ಆಧುನಿಕ, ವೈಜ್ಞಾನಿಕ ವಿಧಾನದಲ್ಲಿ ವಿಶಿಷ್ಟವಾಗಿ ಕನ್ನಡೇತರರಿಗೆ ಕನ್ನಡಭಾಷಾ ಕೌಶಲ್ಯಗಳನ್ನು ಕಲಿಸುವ ಕುರಿತು ಶಿಕ್ಷಕರುಗಳಿಗೆ ತರಬೇತಿ ಕಾರ್ಯ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ.

ಕನ್ನಡ/ಭಾಷಾವಿಜ್ಞಾನ ಅಥವಾ ಇನ್ಯಾವುದೇ ಕನಿಷ್ಠ ಪದವಿಯ ವಿದ್ಯಾರ್ಹತೆಯುಳ್ಳ ಆಸಕ್ತಿ ಹೊಂದಿರುವ ಮಹಿಳೆಯರು/ಪುರುಷರು ಈ “ಶಿಕ್ಷಕರ ತರಬೇತಿ”ಯಲ್ಲಿ ಭಾಗವಹಿಸಬಹುದಾಗಿದೆ. ಈ ಕಾರ್ಯ ಶಿಬಿರದಲ್ಲಿ ಯಶಸ್ವಿಯಾದವರನ್ನು ಪ್ರಾಧಿಕಾರದ ಕನ್ನಡ ಕಲಿಕಾ ಯೋಜನೆಯ ಅಡಿಯಲ್ಲಿ ಸೂಕ್ತ ಸಂಭಾವನೆ ಸಹಿತ ತರಗತಿಗಳನ್ನು ನಡೆಸಲುನಿಯೋಜಿಸಲಾಗುವುದು. ಶಿಬಿರವು ಜನವರಿ 15, 16 ಮತ್ತು 23ರಂದು ನಡೆಯಲಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 10 ಜನವರಿ2021. ಹೆಚ್ಚಿನ ಮಾಹಿತಿಗಾಗಿಸಂಪರ್ಕಿಸಿ: 080-22286773 / 9845299621/ 8884211140
ಪ್ರಾಧಿಕಾರದ ಜಾಲತಾಣ https://kannadapraadhikaara.karnataka.gov.in/ ಮೂಲಕ ಪ್ರವೇಶಕ್ಕೆ ಅರ್ಜಿ ಸಲ್ಲಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here