ಬೆಂಗಳೂರು:
ಸಿಸಿಬಿ ಪೊಲೀಸ್ ಅಧಿಕಾರಿಗಳು ಇಂದು ಬೆಳ್ಳಂಬೆಳಗ್ಗೆ ನಗರದ 40 ರೌಡಿ ಶೀಟರ್‌ಗಳ ಮನೆ ಮೇಲೆ ದಾಳಿ ನಡೆಸಿದ್ದಾರೆ. ಸಿಕ್ತಾಳೆ ವೇಳೆ ಪೊಲೀಸರು ಅಪಾರ ಪ್ರಮಾಣದಲ್ಲಿ ನಗದು ಮತ್ತು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ.
ಜಂಟಿ ಪೊಲೀಸ್ ಆಯುಕ್ತರು (ಅಪರಾಧ) ಸಂದೀಪ್ ಪಾಟೀಲ್ ಅವರು ಈ ಸಂಬಂಧ ಟ್ವೀಟ್ ಮಾಡಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. “ಹತ್ಯೆ, ಸುಲಿಗೆ, ಭೂ ಕಬಳಿಕೆ, ಆಸ್ತಿ ವಿವಾದಗಳ ಅಕ್ರಮ ಇತ್ಯರ್ಥ ಸಂಬಂಧಪಟ್ಟಂತೆ 40 ಕುಖ್ಯಾತ ರೌಡಿಗಳ ಮನೆ ಮೇಲೆ ಸಿಸಿಬಿ ದಾಳಿ…. ಆಯುಧಗಳು, ನಗದು, ಆಸ್ತಿ ದಾಖಲೆಗಳು ವಶ,” ಎಂದು ಅವರು ಟ್ವೀಟ್ ಮಾಡುವ ಮೂಲಕ ಮಾಹಿತಿ ಬಹಿರಂಗಪಡಿಸಿದ್ದಾರೆ.
CCB raid houses of 40 notorious rowdies..involved in numerous cases of murder, extortion, land grabbing, illegal settlement of property disputes..seized weapons, cash, property documents..@CPBlr @BlrCityPolice pic.twitter.com/N2uechFnNR
— Sandeep Patil IPS (@ips_patil) July 23, 2021
ವಿಲ್ಸನ್ ಗಾರ್ಡನ್ ನಾಗ, ಸೈಕಲ್ ರವಿ, ಸೈಲೆಂಟ್ ಸುನೀಲ, ಜಿ.ಬಿ.ನಾರಾಯಣ್, ಸಹಚರರ ಹಾಗೂ ಇನ್ನಿತರ ರೌಡಿಶೀಟರ್ ಮನೆಯ ಮೇಲೆ ದಾಳಿ ನಡೆದಿದೆ.
ದಾಳಿ ವೇಳೆ ಹಣ, ಡ್ರ್ಯಾಗರ್, ಆಸ್ತಿ ದಾಖಲೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.