Home ಚಾಮರಾಜನಗರ ಚಾಮರಾಜನಗರ ದುರಂತ: ಮೂರು ದಿನಗಳೊಳಗೆ ವರದಿ ಸಲ್ಲಿಸಲು ಐಎಎಸ್ ಅಧಿಕಾರಿ ಶಿವಯೋಗಿ ಕಳಸದಗೆ ನೇಮಿಸಿ ಆದೇಶ

ಚಾಮರಾಜನಗರ ದುರಂತ: ಮೂರು ದಿನಗಳೊಳಗೆ ವರದಿ ಸಲ್ಲಿಸಲು ಐಎಎಸ್ ಅಧಿಕಾರಿ ಶಿವಯೋಗಿ ಕಳಸದಗೆ ನೇಮಿಸಿ ಆದೇಶ

65
0

ಬೆಂಗಳೂರು:

ಚಾಮರಾಜನಗರ ಜಿಲ್ಲಾ ಆಸ್ಪತ್ರೆಯಲ್ಲಿ 23 ಜನರ ಸಾವಿಗೆ ಹಿನ್ನೆಲೆಯನ್ನು ಪತ್ತೆ ಮಾಡಿ ಸರ್ಕಾರ ವರದಿ ಸಲ್ಲಿಸಲು ಐಎಎಸ್ ಅಧಿಕಾರಿ ಶಿವಯೋಗಿ ಕಳಸದ ಅವನ್ನು ವಿಚಾರಣಾಧಿಕಾರಿಯಾಗಿ ನೇಮಿಸಿ ಆದೇಶ ಹೊರಡಿಸಲಾಗಿದೆ.

ಮೂರು ದಿನಗಳೊಳಗೆ ವರದಿ ಸಲ್ಲಿಸಲು ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎನ್ ಮಂಜುನಾಥ ಪ್ರಸಾದ್ ಸೂಚಿಸಿದ್ದಾರೆ.

Screenshot 201

“ಚಾಮರಾಜನಗರ ಜಿಲ್ಲಾ ಆಸ್ಪತ್ರೆಯಲ್ಲಿ ದಿನಾಂಕ : 02.05.2021ರ ಬೆಳಿಗ್ಗೆ 09 : 00 ಗಂಟೆಯಿಂದ ದಿನಾಂಕ : 03.05.2021 ರ ಬೆಳಿಗ್ಗೆ 07 : 00 ಗಂಟೆಯವರೆಗೆ ಕೋವಿಡ್ -19 ಸೋಂಕಿನಿಂದ ಬಾಧಿತರಾದ ಸುಮಾರು 23 ಸೋಂಕಿತರು ಸಾವಿಗೆ ತುತ್ತಾಗಿರುವುದು ಸರ್ಕಾರದ ಗಮನಕ್ಕೆ ಬಂದಿರುತ್ತದೆ . ಇದು ತೀವ್ರ ಕಳವಳಕಾರಿಯಾಗಿರುತ್ತದೆ. ಈ ಘಟನೆಯನ್ನು ಸರ್ಕಾರವು ಗಂಭೀರವಾಗಿ ಪರಿಗಣಿಸಿದ್ದು , ಕೇವಿಡ್ -19 ಸೋಂಕಿತ ಸುಮಾರು 23 ಮಂದಿ ಸಾವಿಗೆ ಕಾರಣವಾದ ಹಿನ್ನೆಲೆಯನ್ನು ಪತ್ತೆ ಹಚ್ಚಿ ಸರ್ಕಾರಕ್ಕೆ ವರದಿ ನೀಡಲು ಶಿವಯೋಗಿ ಕಳಸದ , ಭಾ.ಆ.ಸೇ , ವ್ಯವಸ್ಕಾಪಕ ನಿರ್ದೇಶಕರು , ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ , ಬೆಂಗಳೂರು ಇವರನ್ನು ವಿಚಾರಣಾಧಿಕಾರಿಯನ್ನಾಗಿ ನೇಮಿಸಲಾಗಿದೆ . ವಿಚಾರಣಾಧಿಕಾರಿಗಳು ತಮ್ಮ ತನಿಖಾ ವರದಿಯನ್ನು 3 ದಿವಸಗಳೊಳಗೆ ಸರ್ಕಾರಕ್ಕೆ ಸಲ್ಲಿಸುವುದು,” ಎಂದು ಆದೇಶದಲ್ಲಿ ಪ್ರಸಾದ್ ಸೂಚಿಸಿದ್ದಾರೆ.

LEAVE A REPLY

Please enter your comment!
Please enter your name here