Home ಬೆಂಗಳೂರು ನಗರ Chandrayaan-3: ರೋವರ್ ಪ್ರಗ್ಯಾನ್​​ಗೆ ಎದುರಾಯ್ತು ದೊಡ್ಡ ಕುಳಿ, ಮಾರ್ಗ ಬದಲಿಸಿದ ಇಸ್ರೋ

Chandrayaan-3: ರೋವರ್ ಪ್ರಗ್ಯಾನ್​​ಗೆ ಎದುರಾಯ್ತು ದೊಡ್ಡ ಕುಳಿ, ಮಾರ್ಗ ಬದಲಿಸಿದ ಇಸ್ರೋ

23
0
Chandrayaan-3: Rover Pragyaan encountered a large crater, ISRO commanded to retrace the path
Chandrayaan-3: Rover Pragyaan encountered a large crater, ISRO commanded to retrace the path

ಬೆಂಗಳೂರು:

ಚಂದಿರನ ಅಂಗಳದ ಸಂಚರಿಸುತ್ತಿರುವ ಚಂದ್ರಯಾನ-3 ಯೋಜನೆಯ ಪ್ರಗ್ಯಾನ್ ರೋವರ್ ಗೆ ನಾಲ್ಕು ಮೀಟರ್ ವ್ಯಾಸದ ದೊಡ್ಡ ಕುಳಿಯೊಂದು ಎದುರಾಗಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಸೋಮವಾರ ತಿಳಿಸಿದೆ.

ಈ ಸಂಬಂಧ ಟ್ವೀಟ್ ಮಾಡಿರುವ ಇಸ್ರೋ, “ಚಂದ್ರಯಾನ-3 ಮಿಷನ್: ಆಗಸ್ಟ್ 27, 2023 ರಂದು ರೋವರ್ ಗೆ ತನ್ನ ಸ್ಥಳದಿಂದ 3 ಮೀಟರ್ ದೂರದಲ್ಲಿ 4 ಮೀಟರ್ ವ್ಯಾಸದ ಕುಳಿ ಇರುವುದನ್ನು ಗುರುತಿಸಿದೆ. ಹೀಗಾಗಿ, ರೋವರ್‌ನ ಪಥ ಬದಲಾವಣೆಗೆ ಇಸ್ರೋ ನಿಯಂತ್ರಣ ಕೊಠಡಿ ಸೂಚನೆ ರವಾನಿಸಿತು ಎಂದು ಹೇಳಿದೆ.

ರೋವರ್ ಈಗ ಸುರಕ್ಷಿತವಾಗಿ ಹೊಸ ಹಾದಿಯಲ್ಲಿ ಸಾಗುತ್ತಿದೆ ಎಂದು ಇಸ್ರೋ ಮಾಹಿತಿ ನೀಡಿದೆ.

ಇಂದು ಮಧ್ಯಾಹ್ನ ಇಸ್ರೋ ನಿಯಂತ್ರಣ ಕೊಠಡಿಗೆ ಪ್ರಗ್ಯಾನ್ ರೋವರ್ ತನಗೆ ಗುಂಡಿಯೊಂದು ಎದುರಾಗಿರುವ ಕುರಿತು ಮಾಹಿತಿ ನೀಡಿತ್ತು. ಆ ನಂತರ ಸಕ್ರಿಯರಾದ ತಜ್ಞರ ತಂಡ ರೋವರ್‌ಗೆ ಹೊಸ ಮಾರ್ಗವನ್ನು ಸೂಚಿಸಿದೆ. ನಂತರ ರೋವರ್‌ನ ಬದಲಾದ ಮಾರ್ಗದ ಫೋಟೋ ಸಮೇತ ಇಸ್ರೋ ಸಾರ್ವಜನಿಕರಿಗೆ ಮಾಹಿತಿ ನೀಡಿದೆ.

ಒಂದು ಚಂದ್ರನ ದಿನ ಪೂರ್ಣಗೊಳ್ಳಲು ಕೇವಲ 10 ದಿನಗಳು ಮಾತ್ರ ಬಾಕಿ ಉಳಿದಿವೆ. ಚಂದ್ರಯಾನ -3 ರ ರೋವರ್ ಮಾಡ್ಯೂಲ್ ಪ್ರಗ್ಯಾನ್ ಚಂದ್ರನ ಮೇಲ್ಮೈಯಲ್ಲಿ ಚಲಿಸುತ್ತಿದೆ. ಇದು ಸಮಯದ ವಿರುದ್ಧದ ಓಟ. ಆರು ಚಕ್ರಗಳ ರೋವರ್ ದಕ್ಷಿಣ ಧ್ರುವದ ಗರಿಷ್ಠ ದೂರವನ್ನು ಕ್ರಮಿಸುವಂತೆ ಮಾಡಲು ಇಸ್ರೋ ವಿಜ್ಞಾನಿಗಳು ಕೆಲಸ ಮಾಡುತ್ತಿದ್ದಾರೆ ಎಂದು ಬಾಹ್ಯಾಕಾಶ ಅಪ್ಲಿಕೇಶನ್ ಕೇಂದ್ರ(ಎಸ್‌ಎಸಿ)ದ ನಿರ್ದೇಶಕ ನಿಲೇಶ್ ಎಂ ದೇಸಾಯಿ ಅವರು ಭಾನುವಾರ ಹೇಳಿದ್ದರು.

LEAVE A REPLY

Please enter your comment!
Please enter your name here