Home ಕ್ರೀಡೆ ಛೇತ್ರಿ ಬೆಂಗಳೂರು ಎಫ್‌ಸಿಯೊಂದಿಗೆ ಹೊಸ ಒಪ್ಪಂದಕ್ಕೆ ಸಹಿ

ಛೇತ್ರಿ ಬೆಂಗಳೂರು ಎಫ್‌ಸಿಯೊಂದಿಗೆ ಹೊಸ ಒಪ್ಪಂದಕ್ಕೆ ಸಹಿ

90
0

ತಂಡದ ನಾಯಕ 2023ರವರೆಗೆ ಬ್ಲೂಸ್‌ ಪರ ಆಡಲು ನೂತನವಾಗಿ ಎರಡು ವರ್ಷಗಳ ಒಪ್ಪಂದಕ್ಕೆ ಸಹಿ ಮಾಡಿದ್ದಾರೆ.

ಬೆಂಗಳೂರು:

ಕ್ಲಬ್ ನಾಯಕ ಸುನಿಲ್ ಛೇತ್ರಿ, ಕನಿಷ್ಠ 2023ರವರೆಗೆ ಕ್ಲಬ್‌ ಪರ ಆಡಲು ಹೊಸ ಎರಡು ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ ಎಂದು ಬೆಂಗಳೂರು ಎಫ್‌ಸಿ ಭಾನುವಾರ ಪ್ರಕಟಿಸಿದೆ. 2013 ರಲ್ಲಿ ಬ್ಲೂಸ್‌ ಪರ ಪಾದಾರ್ಪಣೆ ಮಾಡಿದ ಛೇತ್ರಿ, ಈ ಹೊಸ ಒಪ್ಪಂದದ ವಿಸ್ತರಣೆಯಿಂದಾಗಿ ಬೆಂಗಳೂರು ತಂಡದೊಂದಿಗೆ ಹತ್ತನೇ ಆವೃತ್ತಿಯವರಿಗೆ ತಮ್ಮ ಸೇವೆಯನ್ನು ಸಲ್ಲಿಸಲಿದ್ದಾರೆ.

2013 ರಲ್ಲಿ ಬೆಂಗಳೂರು ತಂಡಕ್ಕೆ ಸೇರ್ಪಡೆಯಾದ ಛೇತ್ರಿ ಕ್ಲಬ್‌ ಪರ 203 ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದು, 101 ಗೋಲುಗಳನ್ನು ದಾಖಲಿಸಿದ್ದಾರೆ. 36 ವರ್ಷದ ಆಟಗಾರ, ಕ್ಲಬ್ 2013 ರಲ್ಲಿ ಪ್ರಾರಂಭವಾದಾಗಿನಿಂದ ತಂಡವನ್ನು ಮುನ್ನಡೆಸಿದ್ದಾರೆ ಮತ್ತು ಬ್ಲೂಸ್‌ನೊಂದಿಗಿನ ತನ್ನ ಎಂಟು ಆವೃತ್ತಿಗಳಲ್ಲಿ ಅತಿ ಹೆಚ್ಚು ಗೋಲ್ ಗಳಿಕೆಯ ಸಾಧನೆಯ ಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸಿದ್ದಾರೆ.

“ಬೆಂಗಳೂರು ಎಫ್‌ಸಿಯೊಂದಿಗೆ ಇನ್ನೂ ಎರಡು ವರ್ಷಗಳ ಕಾಲಕ್ಕೆ ಒಪ್ಪಂದ ಮಾಡಿಕೊಂಡಿರುವುದು ನನಗೆ ತುಂಬಾ ಸಂತೋಷವಾಗಿದೆ. ಈ ನಗರವು ಈಗ ಮನೆಯಂತಾಗಿದೆ ಮತ್ತು ಈ ಕ್ಲಬ್‌ನಲ್ಲಿರುವ ಜನರು ನನ್ನ ಕುಟುಂಬದವರಾಗಿದ್ದಾರೆ. ನಿನ್ನೆಯಷ್ಟೇ ನಾನು ಇಲ್ಲಿ ಮೊದಲ ಬಾರಿಗೆ ಸಹಿ ಮಾಡಿದ್ದೇನೆ ಎಂದು ಅನಿಸುತ್ತಿದೆ, ಮತ್ತು ಈವರೆಗಿನ ಪ್ರಯಾಣವು ಅತ್ಯಂತ ವಿಶೇಷವಾದದ್ದು ಎಂದು ನಾನು ಹೇಳಬೇಕಾಗಿದೆ. ನಾನು ಈ ಕ್ಲಬ್, ಅಭಿಮಾನಿಗಳು ಮತ್ತು ನಗರವನ್ನು ಪ್ರೀತಿಸುತ್ತೇನೆ, ಈ ಮೂರೂ ನನ್ನೊಂದಿಗೆ ಬಲವಾದ ಬಾಂಧವ್ಯವನ್ನು ಹೊಂದಿವೆ, ಮತ್ತು ಅವುಗಳೊಂದಿಗೆ ಇನ್ನೂ ಅನೇಕ ಉತ್ತಮ ಕ್ಷಣಗಳಲ್ಲಿ ಭಾಗವಾಗಲು ನಾನು ಎದುರು ನೋಡುತ್ತಿದ್ದೇನೆ ”ಎಂದು ಛೇತ್ರಿ ತಮ್ಮ ಒಪ್ಪಂದದ ವಿಸ್ತರಣೆಯ ಕುರಿತ ಔಪಚಾರಿಕತೆಯ ನಂತರ ಹೇಳಿದರು.

ಆರು ಬಾರಿ ಎಐಎಫ್‌ಎಫ್ ಟೂರ್ನಿಯ ವರ್ಷದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಛೇತ್ರಿ 2013 ರಲ್ಲಿ ಬ್ಲೂಸ್‌ ತಂಡವನ್ನು ತಮ್ಮ ಚೊಚ್ಚಲ ಲೀಗ್ ಪ್ರಶಸ್ತಿಗೆ ಕೊಂಡೊಯ್ದಿದ್ದರು ಮತ್ತು ನಂತರದಲ್ಲಿ ಕ್ಲಬ್‌ನೊಂದಿಗೆ ಫೆಡರೇಶನ್ ಕಪ್ (2015, 2017), ಇಂಡಿಯನ್ ಸೂಪರ್ ಲೀಗ್ (2018-19) ಮತ್ತು ಸೂಪರ್ ಕಪ್ (2018) ಸೇರಿದಂತೆ ಐದು ಟ್ರೋಫಿಗಳನ್ನು ಗೆದ್ದಿದ್ದಾರೆ. ಹಲವಾರು ಇತರ ವೈಯುಕ್ತಿಕ ಪ್ರಶಸ್ತಿಗಳ ಜೊತೆಗೆ, ಛೇತ್ರಿ ಅವರನ್ನು ಏಷ್ಯನ್ ಫುಟ್ಬಾಲ್ ಕಾನ್ಫೆಡರೇಶನ್‌ನ ಏಷ್ಯನ್ ಐಕೋನಿನ್ 2018 ಎಂದು ಗೌರವಿಸಲಾಯಿತು ಮತ್ತು ಆನಂತರದ ವರ್ಷದಲ್ಲಿ ಅವರಿಗೆ ಭಾರತದ ನಾಲ್ಕನೇ ಅತ್ಯುನ್ನತ ನಾಗರಿಕ ಗೌರವವಾದ ಪದ್ಮಶ್ರೀ ಪ್ರಶಸ್ತಿಯನ್ನು ನೀಡಲಾಯಿತು.

“ಮೊದಲ ದಿನದಿಂದಲೂ ಸುನಿಲ್ ಈ ಕ್ಲಬ್‌ನ ಅವಿಭಾಜ್ಯ ಅಂಗವಾಗಿದ್ದಾರೆ. ಆಟಗಾರನಾಗಿ ಅವರು ತಂಡದ ಪರ ಏನು ಮಾಡಬಲ್ಲರು ಎಂಬುದು ನಮಗೆಲ್ಲರಿಗೂ ತಿಳಿದಿದೆ. ಆದರೆ ನಾಯಕನಾಗಿ ಅವರ ಉಪಸ್ಥಿತಿಯು ನಮಗೆ ಅಷ್ಟೇ ನಿರ್ಣಾಯಕವಾದದ್ದು ಮತ್ತು ವಿಶೇಷವಾಗಿ ಶ್ರೇಯಾಂಕಗಳ ಮೂಲಕ ಬರುವ ಯುವಕರಿಗೆ ಅವರ ಅಗತ್ಯತೆ ಅನಿವಾರ್ಯ. ಅವರು ಆದರ್ಶಪ್ರಾಯರಾಗಿದ್ದಾರೆ, ಮತ್ತು ಅವರ ಪ್ರಭಾವ ಮತ್ತು ಅನ್ವಯದ ವಿಧಾನ ನಮ್ಮ ಯಶಸ್ಸಿನ ಪ್ರಮುಖ ಕಾರಣವಾಗಿದೆ. ಕಳೆದ ಎಂಟು ವರ್ಷಗಳಲ್ಲಿ, ಅವರು ಈ ನಗರವನ್ನು ತಮ್ಮ ಮನೆಯನ್ನಾಗಿ ಮಾಡಿಕೊಂಡಿದ್ದಾರೆ ಮತ್ತು ಅವರು ತಮ್ಮ ಭವಿಷ್ಯವನ್ನು ಬೆಂಗಳೂರು ಎಫ್‌ಸಿಗೆ ಒಪ್ಪಿಸಿರುವುದಕ್ಕೆ ನಾವು ನಿಜವಾಗಿಯೂ ಸಂತೋಷಪಡುತ್ತೇವೆ ”ಎಂದು ಕ್ಲಬ್ ಸಿಇಒ ಮಂದಾರ್ ತಮ್ಹಾನೆ ವಿವರಿಸಿದರು.

ಛೇತ್ರಿ, ಈ ತಿಂಗಳ ಆರಂಭದಲ್ಲಿ ಭಾರತದ ಫಿಫಾ ವಿಶ್ವಕಪ್ ಮತ್ತು ದೋಹಾದಲ್ಲಿ ನಡೆದ ಎಎಫ್‌ಸಿ ಏಷ್ಯನ್ ಕಪ್ ಜಂಟಿ ಅರ್ಹತಾ ಪಂದ್ಯಗಳಲ್ಲಿ ಬಾಂಗ್ಲಾದೇಶದ ವಿರುದ್ಧ ಎರಡು ಬಾರಿ ಅಂಕಗಳಿಸುವಲ್ಲಿ ಯಶಸ್ವಿಯಾಗಿದ್ದರು, ಈವರೆಗೆ ದೇಶದ ಪರ 100 ಕ್ಕೂ ಹೆಚ್ಚು ಬಾರಿ ನಾಯಕತ್ವ ವಹಿಸಿಕೊಂಡಿದ್ದಾರೆ ಮತ್ತು 76 ಗೋಲ್ ಗಳಿಸುವುದರೊಂದಿಗೆ ಅಂತರರಾಷ್ಟ್ರೀಯ ಫುಟ್‌ಬಾಲ್‌ನಲ್ಲಿ ಭಾರತದ ಪರ ಸಾರ್ವಕಾಲಿಕ ಶ್ರೇಷ್ಠ ಅಂಕ ಗಳಿಕೆಗೆ ಹೆಸರಾಗಿದ್ದಾರೆ.

ಆಗಸ್ಟ್‌ನಲ್ಲಿ ನಡೆಯಲಿರುವ 2021 ಎಎಫ್‌ಸಿ ಕಪ್ ಪ್ಲೇಆಫ್ ಹಂತದ ಪಂದ್ಯದಲ್ಲಿ ಬೆಂಗಳೂರು ಎಫ್‌ಸಿ ತಂಡ ಈಗಲ್ಸ್ ಎಫ್‌ಸಿಯನ್ನು ಎದುರಿಸಲಿದೆ.

LEAVE A REPLY

Please enter your comment!
Please enter your name here