Home ರಾಜಕೀಯ ಸಿ.ಪಿ. ಯೋಗೀಶ್ವರ್ ಗೆ ಮಂತ್ರಿ ಸ್ಥಾನ ಖಚಿತ; ಮುಖ್ಯಮಂತ್ರಿ ಯಡಿಯೂರಪ್

ಸಿ.ಪಿ. ಯೋಗೀಶ್ವರ್ ಗೆ ಮಂತ್ರಿ ಸ್ಥಾನ ಖಚಿತ; ಮುಖ್ಯಮಂತ್ರಿ ಯಡಿಯೂರಪ್

41
0

ಬೆಂಗಳೂರು:

ಸಿ.ಪಿ. ಯೋಗೀಶ್ವರ್ ರನ್ನು ಮಂತ್ರಿ ಮಾಡುವುದು ನೂರಕ್ಕೆ ನೂರರಷ್ಟು ಖಚಿತ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.
ಈ ಮೂಲಕ ಅವರು ಯೋಗೇಶ್ವರ್ ಅವರನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಬಾರದು ಎಂದು ಒತ್ತಾಯಿಸುತ್ತಿರುವ ಪಕ್ಷದೊಳಗಿನ ಶಾಸಕರು ಮತ್ತು ಹೊರಗಿನವರಿಗೆ ತಿರುಗೇಟು ನೀಡಿದ್ದಾರೆ.

ಯೋಗೀಶ್ವರ್ ಅವರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಮೂಲ ಬಿಜೆಪಿಗರ ವಿರೋಧದ ಬಗ್ಗೆ ಕೇಳಿದಾಗ ಯಡಿಯೂರಪ್ಪ ಅವರು ಒಂದೇ ಶಬ್ಧದಲ್ಲಿ ಈ ರೀತಿ ಪ್ರತಿಕ್ರಿಯೆ ನೀಡಿದರು.

ಇನ್ನು ಎಚ್. ವಿಶ್ವನಾಥ್ ಬಗ್ಗೆ ಕೇಳಿದಾಗ ಕೈ ಮುಗಿದು ಮುಖ್ಯಮಂತ್ರಿ ಮುನ್ನಡೆದರು.

ಇದಕ್ಕೂ ಮೊದಲು ವಿಧಾನಸೌಧದ ಆವರಣದಲ್ಲಿ ಮಾಜಿ ಮುಖ್ಯಮಂತ್ರಿ ದಿ.ಕೆಂಗಲ್ ಹನುಮಂತಯ್ಯ ಅವರ ಪುಣ್ಯತಿಥಿ ಅಂಗವಾಗಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪುಷ್ಪ ನಮನ ಸಲ್ಲಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಕೆಂಗಲ್ ಹನುಮಂತಯ್ಯ ಅವರು ಅಪರೂಪದ ರಾಜಕೀಯ ಮುತ್ಸದ್ಧಿ, ಧೀಮಂತ ರಾಜಕಾರಣಿಯಾಗಿದ್ದರು. ಅವರ ಪುಣ್ಯತಿಥಿ ಅಂಗವಾಗಿ ಅವರ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದ್ದೇವೆ. ಮುಖ್ಯಮಂತ್ರಿಯಾಗಿ, ಕೇಂದ್ರ ರೈಲ್ವೆ ಸಚಿವರಾಗಿ, ಪ್ರಪ್ರಥಮ ಆಡಳಿತ ಸುಧಾರಣಾ ಸಮಿತಿಯ ಅಧ್ಯಕ್ಷರಾಗಿ ಕೆಂಗಲ್ ಹನುಮಂತಯ್ಯ ಅವರ ಸೇವೆ ಅನುಪಮವಾದುದು ಎಂದರು.

ದೂರದೃಷ್ಟಿಯ ನಾಯಕರಾಗಿ, ದಕ್ಷ ಆಡಳಿತ ನೀಡುವ ಮೂಲಕ ರಾಜ್ಯದ ಏಳಿಗೆಗೆ ಮತ್ತು ಗ್ರಾಮೀಣ ಜನರ ಶ್ರೇಯೋಭಿವೃದ್ಧಿಗಾಗಿ ಅವರು ಅವಿರತ ಶ್ರಮಿಸಿದ್ದಾರೆ. ಕನ್ನಡ ಭಾಷೆ, ಸಂಸ್ಕೃತಿ, ಸಾಹಿತ್ಯ ಸಂವರ್ಧನೆಗೆ ಅವರ ಕೊಡುಗೆ ವಿಶೇಷವಾದುದು. ಅವರು ಕರ್ನಾಟಕದ ಏಕೀಕರಣಕ್ಕೂ ಅಪಾರ ಸೇವೆ ಸಲ್ಲಿಸಿದ್ದಾರೆ. ಅವರು ನಿರ್ಮಿಸಿದ ರಾಜ್ಯದ ಶಕ್ತಿ ಕೇಂದ್ರ ವಿಧಾನಸೌಧ ದೇಶದಲ್ಲೇ ಭವ್ಯ ಕಟ್ಟಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಅವರ ಪುಣ್ಯತಿಥಿಯ ಸಂದರ್ಭದಲ್ಲಿ ಅವರ ಆದರ್ಶ ಮೌಲ್ಯಗಳನ್ನು ಅನುಸರಿಸೋಣ ಎಂದು ಹೇಳಿದರು.

LEAVE A REPLY

Please enter your comment!
Please enter your name here