Home ಕರ್ನಾಟಕ ದೀಪಾವಳಿಯ ಬಲಿಪಾಡ್ಯಮಿ; ನಾಡಿನ ಜನತೆಗೆ ಶುಭಕೋರಿದ ಮುಖ್ಯಮಂತ್ರಿ

ದೀಪಾವಳಿಯ ಬಲಿಪಾಡ್ಯಮಿ; ನಾಡಿನ ಜನತೆಗೆ ಶುಭಕೋರಿದ ಮುಖ್ಯಮಂತ್ರಿ

76
0
Chief Minister BS Yediyurappa

ಬೆಂಗಳೂರು:

ಬೆಳಕಿನ ಹಬ್ಬ ದೀಪಾವಳಿಯ ಬಲಿಪಾಡ್ಯಮಿಗೆ ಮುಖ್ಯಮಂತ್ರಿ ಹಾಗೂ ಸಚಿವರು ನಾಡಿನ ಜನತೆಗೆ ಶುಭ ಕೋರಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಟ್ವೀಟ್ ಮಾಡಿ, ನಾಡಿನ ಸಮಸ್ತ ಜನತೆಗೆ ಬಲಿ ಪ್ರತಿಪದಾ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು.

ಸಂಕಷ್ಟಗಳು ಹಾಗೂ ಸಾಂಕ್ರಾಮಿಕದ ಕತ್ತಲು ಕಳೆದು ಸಂತಸ ಸಂಭ್ರಮಗಳ ಬೆಳಗು ಮೂಡಲಿ ಎಂದು ಪ್ರಾರ್ಥಿಸೋಣ. ನಮ್ಮನ್ನು ಕಾಯುತ್ತಿರುವ ನಮ್ಮ ಯೋಧರ ಹಾಗೂ ಅವರ ಕುಟುಂಬದವರ ಕರ್ತವ್ಯನಿಷ್ಠೆ, ತ್ಯಾಗಗಳಿಗೆ ನಮ್ಮ ಕೃತಜ್ಞತೆಗಳ ಪ್ರತೀಕವಾಗಿ ಒಂದು ದೀಪ ಹಚ್ಚೋಣ ಎಂದು ತಿಳಿಸಿದ್ದಾರೆ.

ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ‌, ಇಂದು ಬಲಿಪಾಡ್ಯಮಿ. ಚಕ್ರವರ್ತಿ ಬಲೀಂದ್ರರು ಭೂಲೋಕಕ್ಕೆ ಬರುವ ದಿನ ಎಂದು ಪ್ರತೀತಿ ಇರುವ ಈ ದಿನ ನಮ್ಮ-ನಿಮ್ಮೆಲ್ಲರ ಮನೆಗಳಲ್ಲಿ ಸಂಭ್ರಮವನ್ನು ತರಲಿ. ಅಂಧಕಾರವನ್ನು ಕಳೆಯುವ ಕಾರ್ತಿಕ ಮಾಸ ಪ್ರಾರಂಭವಾಗುವುದೇ ಪಾಡ್ಯದ ಈ ದಿನದಂದು ಬೆಳಗುವ ದೀಪದ ಬೆಳಕಿನಿಂದ. ಇದು ಎಲ್ಲರ ಬಾಳನ್ನು ಬೆಳಗಿಸಲಿ. ಸಂಕಷ್ಟಗಳು ಹಾಗೂ ಸಾಂಕ್ರಾಮಿಕದ ಕತ್ತಲು ಕಳೆದು ಸಂತಸ ಸಂಭ್ರಮಗಳ ಬೆಳಗು ಮೂಡಲಿ ಎಂದು ಎಂದು ಶುಭ ಕೋರಿದ್ದಾರೆ.

ನಮ್ಮನ್ನು ಕಾಯುತ್ತಿರುವ ಭಾರತೀಯ ಯೋಧರ ಹಾಗೂ ಅವರ ಕುಟುಂಬದವರ ಕರ್ತವ್ಯನಿಷ್ಠೆ, ತ್ಯಾಗಗಳಿಗೆ ನಮ್ಮ ಕೃತಜ್ಞತೆಗಳ ಪ್ರತೀಕವಾಗಿ ಒಂದು ದೀಪ ಹಚ್ಚೋಣ ಎಂದು ಜಲಸಂಪನ್ಮೂಲ ಸಚಿವರು ಇದೇ ಸಂದರ್ಭದಲ್ಲಿ ಕರೆ‌ ನೀಡಿದ್ದಾರೆ.

ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ, ಚಕ್ರವರ್ತಿ ಬಲೀಂದ್ರ ಭೂಲೋಕಕ್ಕೆ ಬರುವ ದಿನ ಎಂದು ಪ್ರತೀತಿ ಇರುವ ಬಲಿಪಾಡ್ಯಮಿಯ ಈ ದಿನ ನಮ್ಮ-ನಿಮ್ಮೆಲ್ಲರ ಮನೆಗಳಲ್ಲಿ ಸಂಭ್ರಮವನ್ನು ತರಲಿ.

ಅಂಧಕಾರವನ್ನು ಕಳೆಯುವ ಕಾರ್ತಿಕ ಮಾಸ ಆರಂಭವಾಗುವುದೇ ಪಾಡ್ಯದಂದು ಬೆಳಗುವ ದೀಪದ ಬೆಳಕಿನಿಂದ. ಇದು ಎಲ್ಲರ ಬಾಳನ್ನು ಬೆಳಗಿಸಲಿ ಎಂದು ಶುಭ ಕೋರುತ್ತೇನೆ ಎಂದು ಶುಭ ಕೋರಿದ್ದಾರೆ.

LEAVE A REPLY

Please enter your comment!
Please enter your name here