ಬೆಂಗಳೂರು:
ಚಿಕ್ಕಬಳ್ಳಾಪುರ ಜಿಲ್ಲೆಯ ಹಿರೇನಾಗವಲ್ಲಿಯಲ್ಲಿ ಸಂಭವಿಸಿದ ಜಿಲೆಟಿನ್ ಸ್ಫೋಟ ಪ್ರಕರಣ ಸಂಬಂಧ ಐದು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಕರ್ತವ್ಯಲೋಪ ಎಸಗಿದ ಆರೋಪದ ಮೇಲೆ ಗುಡಿಬಂಡೆ ಪೊಲೀಸ್ ಇನ್‌ಸ್ಪೆಕ್ಟರ್ ಮಂಜುನಾಥ್ ಹಾಗೂ ಗುಡಿಬಂಡೆ ಗ್ರಾಮೀಣ ಠಾಣೆಯ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಗೋಪಾಲ ರೆಡ್ಡಿ ಅವರನ್ನು ಅಮಾನತುಗೊಳಿಸಿದ್ದಾರೆ.
ಸೋಮವಾರ ತಡರಾತ್ರಿ ನಡೆದ ಸ್ಫೋಟ ದುರಂತದಲ್ಲಿ 6 ಮಂದಿ ಕಾರ್ಮಿಕರು ಮೃತಪಟ್ಟಿದ್ದರು.


ಜಿಲೆಟಿನ್ ಸ್ಫೋಟಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವ ಪೊಲೀಸರು ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆಯ ಗೋರಂಟ್ಲದಲ್ಲಿ ತಲೆಮೆರೆಸಿಕೊಂಡಿದ್ದ ಪ್ರಕರಣದ ಎರಡನೇ ಆರೋಪಿ, ಗಣಿ ಮಾಲೀಕ ರಾಘವೇಂದ್ರ ರೆಡ್ಡಿ, ನಾಲ್ಕನೇ ಆರೋಪಿ ವೆಂಕಟಶಿವಾ ರೆಡ್ಡಿ, ಐದನೇ ಆರೋಪಿ ಪ್ರವೀಣ್, ಏಳನೇ ಆರೋಪಿ ಚಾಲಕ ರಿಯಾಜ್ ಮತ್ತು ಹದಿನಾಲ್ಕನೇ ಆರೋಪಿ ಮಧುಸೂದನ್ ರೆಡ್ಡಿ ಅವರನ್ನು ಬಂಧಿಸಿದ್ದಾರೆ. ಮತ್ತೊಬ್ಬ ಆರೋಪಿ ಬಿಜೆಪಿ ಮುಖಂಡ ಹಾಗೂ ರೈಲ್ವೆ ಸಮಿತಿ ಸದಸ್ಯ ಗುಡಿಬಂಡೆ ನಾಗರಾಜ್‌ಗಾಗಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ.