Home ಬೆಂಗಳೂರು ನಗರ ಅದ್ಯಮ ಚೇತನ ಹೊರತಂದಿರುವ ಕಾರ್ಮೋಡಗಳ ನಡುವೆ ಪುಸ್ತಕ ಲೋಕಾರ್ಪಣೆ

ಅದ್ಯಮ ಚೇತನ ಹೊರತಂದಿರುವ ಕಾರ್ಮೋಡಗಳ ನಡುವೆ ಪುಸ್ತಕ ಲೋಕಾರ್ಪಣೆ

171
0
CM launches the book 'Kaarmodagala Naduve' brought out by Adamya Chetana

ಮಾನವೀಯತೆ ಎನ್ನುವುದು ಕಾರ್ಮೋಡಗಳ ಮಧ್ಯೆ ಇರುವ ಬೆಳ್ಳಿ ರೇಖೆ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬೆಂಗಳೂರು:

ಮಾನವೀಯತೆ ಎನ್ನುವುದು ಕಾರ್ಮೋಡಗಳ ನಡುವೆ ಇರುವ ಬೆಳ್ಳಿ ರೇಖೆಯಂತೆ. ಮಾನವೀಯತೆ ಹೆಚ್ಚಿದಷ್ಟು ವಿಶ್ವ ಸಹನೀಯವಾದ ಸ್ಥಳವಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ಕೋವಿಡ್ 19 ಸಂದರ್ಭದಲ್ಲಿ ಅದರ ವಿರುದ್ಧದ ಹೋರಾಟದ ಕಥೆಗಳ ಬಗ್ಗೆ ಅದಮ್ಯ ಚೇತನ ಹೊರತಂದಿರುವ ಕಾರ್ಮೋಡಗಳ ನಡುವೆ ಪುಸಕ್ತವನ್ನು ಲೋಕಾರ್ಪಣೆ ಮಾಡಿ ಮಾತನಾಡುತ್ತಿದ್ದರು.

ಪ್ರತಿ ವಿಚಾರದಲ್ಲಿಯೂ ಮಾನವೀಯತೆಗೆ ಪ್ರಾಮುಖ್ಯತೆ ನೀಡಬೇಕು ಎಂದ ಮುಖ್ಯಮಂತ್ರಿಗಳು, ದು:ಖದಲ್ಲಿಯೂ ಸಾಧಿಸಿ ಜಯಿಸಬಹುದು ಎಂಬ ಪಾಠವನ್ನು ಆಪತ್ಕಾಲ ನಮಗೆ ಕಲಿಸುತ್ತದೆ. ಸಂಪೂರ್ಣವಾಗಿ ನಾಶವಾಗುವ ಸಂದರ್ಭಗಳಲ್ಲಿಯೂ ಮನುಕುಲ ಹಾಗೂ ಸಂಸ್ಕøತಿಗಳು ಎದ್ದುನಿಂತಿರುವುದು ಮನುಷ್ಯನ ಸಹಜ ಗುಣ. ಅದಕ್ಕೆ ಮಾನವನ ಹೊಂದಿಕೊಳ್ಳುವ ಗುಣವೇ ಕಾರಣ. ಇದೇ ಅವನನ್ನು ಎಂಥಹ ಸಂಕಷ್ಟದಲ್ಲಿಯೂ ಪಾರುಮಾಡಿರುವ ಗುಣ ಎಂದು ಮುಖ್ಯಮಂತ್ರಿಗಳು ಅಭಿಪ್ರಾಯಪಟ್ಟರು.

ಕೋವಿಡ್ ಸಂದರ್ಭದಲ್ಲಿ ಎಲೆಮರೆಕಾಯಿಯಂತೆ ಜನರ ಸಹಾಯಕ್ಕೆ ಅನೇಕರು ಮುಂದಾಗಿದ್ದರು. ಅವರ ಪೈಕಿ ಹಲವು ಕಥೆಗಳನ್ನು ಪುಸಕ್ತದಲ್ಲಿ ದಾಖಲಿಸಿರುವುದು ಶ್ಲಾಘನೀಯ. ಸಂಕಷ್ಟದ ಸಮಯದಲ್ಲಿ ಸಮಾಜ ಸ್ಪಂದಿಸಬೇಕು. ಈ ಕಾರಣಕ್ಕಾಗಿಯೇ ನಾಗರಿಕ ಸಂಘಗಳು ಹುಟ್ಟಿಕೊಳ್ಳಬೇಕು. ಜನಾಭಿಪ್ರಾಯ ರೂಪಿಸಲು, ನಾಗರಿಕ ಸಂಘಗಳ ಅಗತ್ಯವಿದೆ. ಅದಮ್ಯ ಚೇತನ ಭವಿಷ್ಯದ ನಾಗರಿಕ ಸಂಘವಿದ್ದಂತೆ ಎಂದು ಮುಖ್ಯಮಂತ್ರಿಗಳು ಬಣ್ಣಿಸಿದರು.

ಅದಮ್ಯ ಚೇತನದ ಮುಖ್ಯಸ್ಥರಾದ ತೇಜಸ್ವಿನಿ ಅನಂತಕುಮಾರ್, ಟ್ರಸ್ಟೀ ಐಶ್ವರ್ಯ ಅನಂತ ಕುಮಾರ್, ವನ್ಯಜೀವಿ ತಜ್ಞ ಹಾಗೂ ಸಿ.ಡಬ್ಲ್ಯೂ.ಎಸ್ ಸಂಸ್ಥೆಯ ಮುಖ್ಯಸ್ಥರಾದ ಉಲ್ಲಾಸ್ ಕಾರಂತ್, ನಟಿ ಸಂಯುಕ್ತಾ ಕಾರಂತ್, ರಂಗಕರ್ಮಿ ಅಭಿಷೇಕ್ ಅಯ್ಯಂಗಾರ್, ಹೊಸ ದಿಗಂತ ಪತ್ರಿಕೆಯ ಸಂಪಾದಕ ವಿನಾಯಕ ಭಟ್ ಮೂರೂರು, ಸಪ್ನಾ ಬುಕ್ ಹೌಸ್ ನ ನಿತಿನ್ ಶಾ, ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here