ಬೆಂಗಳೂರು:
ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎನ್.ಆರ್.ಸಂತೋಷ್ ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಸದಾಶಿವ ನಗರದ ಮನೆ ಯಲ್ಲಿ ನಡೆದಿದೆ.
ಇಂದು ಸಂಜೆ 7.30ರ ವೇಳೆಗೆ 10ಕ್ಕೂ ಹೆಚ್ಚು ನಿದ್ರೆ ಮಾತೆಗಳನ್ನು ಸೇವಿಸಿ ಅಸ್ವಸ್ಥರಾಗಿದ್ದ,ಪ್ರಜ್ಞಾಹೀನ ಸ್ಥಿತಿಯ ಲ್ಲಿದ್ದಾಗ ಸಂತೋಷ್ ರನ್ನು ಎಂ.ಎಸ್.ರಾಮಯ್ಯ ಆಸ್ಪತ್ರಗೆ ದಾಖಲಿಸಲಾಗಿದ್ದು ಆರೋಗ್ಯ ಸ್ಥಿತಿ ಗಂಭೀರವಾಗಿದ್ದು ಐಸಿಯು ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
— Big News —
— Thebengalurulive/ಬೆಂಗಳೂರು ಲೈವ್ (@bengalurulive_) November 27, 2020
ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಆತ್ಮಹತ್ಯೆ ಯತ್ನ
ಯಡಿಯೂರಪ್ಪ ರಾಜಕೀಯ ಕಾರ್ಯದರ್ಶಿ ಎನ್. ಆರ್. ಸಂತೋಷ್ ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನ..
Chief Minister's Political Secretary attempts suicide
Yediyurappa's Political Secretary NR Santosh attempt to commit suicide.. pic.twitter.com/iG6mLKfQXL
ಮನೆಯ ಮೊದಲ ಮಹಡಿಯಲ್ಲಿ ಪುಸ್ತಕ ಓದುತ್ತಿರುವುದಾಗಿ ತಿಳಿಸಿದ ಪತ್ನಿಗೆ ತಿಳಿಸಿದ ಸಂತೋಷ್ ಬಳಿಕ ನಿದ್ರೆ ಮಾತ್ರೆ ಸೇವಿಸಿದ್ದಾರೆ .ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು ಎಂಬ ಮಾಹಿತಿ ಇದೆ.
ಎಂ.ಎಸ್ ರಾಮಯ್ಯ ಆಸ್ಪತ್ರೆಗೆ ಭೇಟಿ ನೀಡಿದ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಬಿ.ವೈ.ರಾಘವೇಂದ್ರ ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಅವರು,ನಿನ್ನೆ ತಮ್ಮ ಜೊತೆಯಲ್ಲಿಯೇ ಮದುವೆಯಲ್ಲಿ ಓಡಾ ಡಿಕೊಂಡಿ ದ್ದ,ನಿನ್ನೆ ಬೆಳಗ್ಗೆ ಜೊತೆಯಲ್ಲಿಯೇ ವಾಕ್ ಕೂಡ ಮಾಡಿದ್ದೇವೆ.ಏಕಾಏಕಿ ಏನಾಯ್ತು.ಯಾಕಿಂಗೆ ಮಾಡಿಕೊಂಡ ಎಂಬುದು ತಿಳಿದಿಲ್ಲ.ವೈದ್ಯರು ಆರೋಗ್ಯ ಸುಧಾರಿಸುತ್ತಿದೆ ಎಂದು ಹೇಳಿದ್ದಾರೆ.ಸಂತೋಷ್ ಕುಟುಂಬ ಸದಸ್ಯರನ್ನು ಹಾಗೂ ವೈದ್ಯರ ಜೊತೆ ಮಾತುಕತೆ ನಡೆಸುತ್ತೇನೆ ಎಂದು ಅವರು ತಿಳಿಸಿದ್ದಾರೆ.
ಯಡಿಯೂರಪ್ಪ ಅವರ ಸಹಾಯಕ ಎನ್.ಆರ್. ಸಂತೋಷ್ ಗೆ ರಾಜೀನಾಮೆಗೆ ಸೂಚನೆ…!!! https://kannada.thebengalurulive.com/yeddyurappas-assistant-nr-santoshs-resignation/