ಬೆಂಗಳೂರು:
ಮುಖ್ಯಮಂತ್ರಿಗಳ ಮಾಧ್ಯಮ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮರಮ್‌ಕಲ್, ಮಹದೇವ ಪ್ರಕಾಶ್ ಸೇರಿದಂತೆ ಮತ್ತಿತ್ತರನ್ನು ಯಡಿಯೂರಪ್ಪ ಆಪ್ತವಲಯದ ಹುದ್ದೆಯಿಂದ ಬಿಡುಗಡೆಗೊಳಿಸಿದಂತೆ ಇದೀಗ ಮತ್ತೆ ಸಿಎಂ ಆಪ್ತ ವಲಯದಲ್ಲೇ ಕುರ್ಚಿಗೆ ಕಂಟಕ ಶಂಕೆ ವ್ಯಕ್ತವಾಗಿದೆ.
ಬಿ.ಎಸ್. ಯಡಿಯೂರಪ್ಪ ಕುಟುಂಬದ ವಿರುದ್ಧ ಅಪಪ್ರಚಾರ ಆರೋಪದಿಂದ ಇಬ್ಬರು ಹುದ್ದೆ ಕಳೆದುಕೊಂಡಿದ್ದು, ಇದರ ಬೆನ್ನಲ್ಲೆ ಇದೀಗ ಮತ್ತೊಂದು ಆಪರೇಷನ್ ಗೆ ಸಿಎಂ ಮುಂದಾಗಿದ್ದು, ಆಪ್ತ ಸಹಾಯಕ ಕಾರ್ಯದರ್ಶಿ ಎನ್.ಆರ್ ಸಂತೋಷ್ ಗೂ ಸಂಕಷ್ಟ ಎದುರಾಗಲಿದೆ.
ಸದ್ಯದಲ್ಲಿಯೇ ಎನ್.ಆರ್ ಸಂತೋಷ್ ಹುದ್ದೆಯಿಂದ ಬಿಡುಗಡೆಯಾಗಲಿದ್ದು, ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ಬಿಡುಗಡೆಗೆ ಸಂತೋಷ್‌ಗೆ ಸಂದೇಶ ಹೋಗಿದೆ ಎನ್ನಲಾಗಿದೆ.
ಹುದ್ದೆಯಿಂದ ಬಿಡುಗಡೆಗೂ ಮೊದಲೇ ರಾಜೀನಾಮೆ ನೀಡುವಂತೆ ಸೂಚನೆ ನೀಡಲಾಗಿದ್ದು, ರಾಜೀನಾಮೆ ನೀಡದಿದ್ದರೆ ಹುದ್ದೆಯಿಂದ ಕಿತ್ತು ಹಾಕುವ ಬಗ್ಗೆ ಸಂತೋಷ್ ಗೆ ಸಿಎಂ ಕಚೇರಿ ಅಧಿಕಾರಿಗಳು ಸೂಚನೆ ನೀಡಿದ್ದಾರೆ ಎನ್ನಲಾಗಿದೆ.