Home ರಾಜಕೀಯ Congress condemns CAA: Shivakumar | ಸಿಎಎಯನ್ನು ಕಾಂಗ್ರೆಸ್ ಖಂಡಿಸುತ್ತದೆ: ಶಿವಕುಮಾರ್

Congress condemns CAA: Shivakumar | ಸಿಎಎಯನ್ನು ಕಾಂಗ್ರೆಸ್ ಖಂಡಿಸುತ್ತದೆ: ಶಿವಕುಮಾರ್

20
0
Congress condemns CAA: Shivakumar

ಬೆಂಗಳೂರು, ಮಾರ್ಚ್ 11: ಕೇಂದ್ರ ಸರ್ಕಾರ ಸಿಎಎ ಜಾರಿ ಮಾಡಿರುವ ಬಗ್ಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದು ಕೆಲವೇ ದಿನಗಳಲ್ಲಿ ಚುನಾವಣೆ ಘೋಷಣೆಯಾಗುವ ಹೊತ್ತಲ್ಲಿ ಶಾಂತಿ ಕದಡಲು ಇಂತಹ ಪ್ರಯತ್ನ ಮಾಡಲಾಗಿದೆ ಎಂದು ತಿಳಿಸಿದರು.

“ಈ ಬಗ್ಗೆ ಕೇಂದ್ರ ಸರ್ಕಾರ ಕಳೆದ ಮೂರೂವರೆ ವರ್ಷಗಳಿಂದ ನಿದ್ರೆ ಮಾಡುತ್ತಿತ್ತು. ಈಗ ಚುನಾವಣೆ ಬಂದ ಕಾರಣ, ಕೆಲವೇ ದಿನಗಳಲ್ಲಿ ಚುನಾವಣೆ ಘೋಷಣೆಯಾಗುವ ಹೊತ್ತಲ್ಲಿ ಶಾಂತಿ ಕದಡಲು ಇಂತಹ ಪ್ರಯತ್ನ ಮಾಡಲಾಗಿದೆ. ಇದಕ್ಕೂ ಮುನ್ನವೇ ಈ ವಿಚಾರವನ್ನು ಜಾರಿ ಮಾಡಬಹುದಿತ್ತು. ಕಾಂಗ್ರೆಸ್ ಪಕ್ಷ ಎಲ್ಲಾ ಜಾತಿ, ಧರ್ಮ ರಕ್ಷಣೆ ಮಾಡಿಕೊಂಡು ಸಂವಿಧಾನದ ಆಶಯ ಕಾಪಾಡಿಕೊಂಡು ನಡೆಯಲಿದೆ,” ಎಂದು ತಿಳಿಸಿದರು.

ಇದು ನಾಗರಿಕತೆ ನೀಡುವ ಕ್ರಮವಾಗಿದೆಯೇ ಹೊರತು, ಪೌರತ್ವ ಕಸಿಯುವುದಿಲ್ಲ ಎಂಬ ಕೇಂದ್ರದ ಸಮರ್ಥನೆ ಬಗ್ಗೆ ಕೇಳಿದಾಗ, “ಈಗ ಅವರು ಏನೇ ಹೇಳಬಹುದು, ಈ ಬಗ್ಗೆ ಎಐಸಿಸಿ ನಾಯಕರು ಈ ಬಗ್ಗೆ ಪಕ್ಷದ ನಿಲುವು ತಿಳಿಸಿದ್ದು, ನಾನು ಅದಕ್ಕೆ ಬದ್ಧನಾಗಿದ್ದೇನೆ. ಸಿಎಎ ಜಾರಿ ಮಾಡುತ್ತಿರುವ ಸಮಯ ಸರಿಯಾಗಿಲ್ಲ” ಎಂದು ತಿಳಿಸಿದರು.

LEAVE A REPLY

Please enter your comment!
Please enter your name here