Home ರಾಜಕೀಯ ಕಾಂಗ್ರೆಸ್ ಪಕ್ಷ ಕೆಟ್ಟು ನಿಂತಿರುವ ಬಸ್ಸ್ ಇದ್ದಂತೆ – ಬಸವರಾಜ ಬೊಮ್ಮಾಯಿ

ಕಾಂಗ್ರೆಸ್ ಪಕ್ಷ ಕೆಟ್ಟು ನಿಂತಿರುವ ಬಸ್ಸ್ ಇದ್ದಂತೆ – ಬಸವರಾಜ ಬೊಮ್ಮಾಯಿ

41
0
Advertisement
bengaluru

ಮುಡಬಿ: (ಬಸವಕಲ್ಯಾಣ)

ಕಾಂಗ್ರೆಸ್ ಪಕ್ಷ ನಡುರಸ್ತೆಯಲ್ಲಿ ಕೆಟ್ಟು ನಿಂತಿರುವ ಬಸ್ ನಂತಾಗಿದೆ. ಮುಂದಕ್ಕೂ ಬರುತ್ತಿಲ್ಲ. ಹಿಂದಕ್ಕೂ ಹೋಗುತ್ತಿಲ್ಲ‌ ಎಂದು ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಬಸವರಾಜ ಬೊಮ್ಮಾಯಿ ಲೇವಡಿ ಮಾಡಿದರು

ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರೊಂದಿಗೆ ಚುನಾವಣಾ ಪ್ರಚಾರ ನಡೆಸಿದ ಬಸವರಾಜ ಬೊಮ್ಮಾಯಿ, ಮುಡಬಿಯಲ್ಲಿ ಏರ್ಪಡಿಸಲಾಗಿದ್ದ ಬೃಹತ್ ಬಹಿರಂಗ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದರು.

Basavaraj Bommai..

ಕಾಂಗ್ರೆಸ್ ಪಕ್ಷ ನಡುರಸ್ತೆಯಲ್ಲಿ ಕೆಟ್ಟು ನಿಂತಿರುವ ಬಸ್ ನಂತಾಗಿದೆ. ಸಿದ್ದರಾಮಯ್ಯ ಮುಂದಕ್ಕೆ ಸಿಟಿ ಹೊಡೆದರೆ, ಡಿಕೆ ಶಿವಕುಮಾರ್ ಹಿಂದಕ್ಕೆ ಸಿಟಿ ಹೊಡೆಯುತ್ತಾರೆ. ಆದರೆ ಬಸ್ ಹಿಂದಕ್ಕೂ ಹೋಗುತ್ತಿಲ್ಲ. ಮುಂದಕ್ಕೂ ಬರುತ್ತಿಲ್ಲ. ಹೀಗಾಗಿ ಯಾರು ಕಾಂಗ್ರೆಸ್ ಬಸ್ಸನ್ನು ಹತ್ತಬೇಡಿ. ಅಭಿವೃದ್ಧಿಯ ರಥ ಬಿಜೆಪಿಯನ್ನು ಬೆಂಬಲಿಸಿ ಎಂದು ಅವರು ಹೇಳಿದರು.

bengaluru bengaluru

ಬಿಜೆಪಿ ಅಭ್ಯರ್ಥಿ ಶರಣು ಸಲಗರ್ ಅವರನ್ನು ಚುನಾವಣೆಯಲ್ಲಿ ಗೆಲ್ಲಿಸಿ. ನಿಮ್ಮ ಸೇವಕನನ್ನಾಗಿ ನೇಮಕ ಮಾಡಿಕೊಳ್ಳಿ. ಅಭಿವೃದ್ಧಿಗೆ ನಾಂದಿ ಹಾಡಿರಿ. ಶರಣು ಸಲಗರ ಅವರ ಗೆಲುವಿನಲ್ಲಿ ಭಾಗಿಯಾಗಿ ಎಂದು ಕ್ಷೇತ್ರದ ಜನತೆಗೆ ಅವರು ಮನವಿ ಮಾಡಿದರು.


bengaluru

LEAVE A REPLY

Please enter your comment!
Please enter your name here