ಬೆಂಗಳೂರು:
ಧರ್ಮದ ಆಧಾರದಲ್ಲಿ ದೇಶ ವಿಭಜನೆಗೆ ಕಾಂಗ್ರೆಸ್ ಯತ್ನಿಸುತ್ತಿದೆ ಎಂದು ಕೇಂದ್ರ ಸಚಿವ ಕಿಶನ್ ರೆಡ್ಡಿ ಗುರುವಾರ ಪ್ರತಿಕ್ರಿಯಿಸಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬಜರಂಗದಳ ನಿಷೇಧಿಸುವ ಆ ಪಕ್ಷದ ಚುನಾವಣೆ ಪ್ರಣಾಳಿಕೆ ಕುರಿತು ಪ್ರತಿಕ್ರಿಸಿದ ಕಿಶನ್ ರೆಡ್ಡಿ, ದೇಶದ ಜನರ ನಡುವೆ ಒಡಕು ಮೂಡಿಸಲು ಕಾಂಗ್ರೆಸ್ ಯತ್ನಿಸುತ್ತಿರುವುದು ತಪ್ಪು ಎಂದರು.
“ಕಾಂಗ್ರೆಸ್ ಪಕ್ಷ ಮತಕ್ಕಾಗಿ ದೇಶದ ಜನರನ್ನು ಧರ್ಮದ ಆಧಾರದ ಮೇಲೆ ವಿಭಜಿಸಲು ಪ್ರಯತ್ನಿಸುತ್ತಿದೆ. ಇದು ತಪ್ಪು. ಕಾಂಗ್ರೆಸ್ ಇಂತಹ ನಿರ್ಧಾರಗಳನ್ನು ತೆಗೆದುಕೊಳ್ಳುವುದರಿಂದ ರಾಷ್ಟ್ರದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಹಾಗಾಗಿ ಕರ್ನಾಟಕದ ಜನರು ಕಾಂಗ್ರೆಸ್ ತಿರಸ್ಕರಿಸಿ ಅವರಿಗೆ ತಕ್ಕ ಪಾಠ ಕಲಿಸಬೇಕೆಂದು ವಿನಂತಿಸುವುದಾಗಿ ತಿಳಿಸಿದರು.
Joined the massive roadshow in Gandhinagar Assembly Constituency, Bangalore as part of @BJP4Karnataka Election Campaign.#DoubleEngineSarkar#BJPYeBharavase pic.twitter.com/An3sPlJhmv
— G Kishan Reddy (@kishanreddybjp) May 4, 2023
ಕಿಶನ್ ರೆಡ್ಡಿ ಅವರು ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಅವರನ್ನು ಹೆಸರಿಸಿದರು ಮತ್ತು ಬಜರಂಗದಳವು ರಾಷ್ಟ್ರವಿರೋಧಿಯೇ ಅಥವಾ ಯಾವುದೇ ಭಯೋತ್ಪಾದಕ ಸಂಘಟನೆಯನ್ನು ನಿಷೇಧಿಸುತ್ತದೆಯೇ ಎಂದು ಕೇಳಿದರು.
ಬಜರಂಗದಳ ದೇಶ ವಿರೋಧಿಯೇ ಎಂದು ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಅವರನ್ನು ಕೇಳ ಬಯಸುವುದಾಗಿ ತಿಳಿಸಿದ ಕಿಶನ್ ರೆಡ್ಡಿ, ಬಜರಂಗದಳ ಹೆಸರಿನಲ್ಲಿ ಮುಸ್ಲಿಂ ಮತಗಳನ್ನು ಸೆಳೆಯಲು ಕಾಂಗ್ರೆಸ್ ಯತ್ನಿಸುತ್ತಿದೆ ಎಂದು ಆರೋಪಿಸಿದರು.