Skip to content
ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ಇದು ನಿಮ್ಮ ಧ್ವನಿ

Primary Menu
  • ಮುಖಪುಟ
  • ಪ್ರಾಯೋಜಿತ
  • ಬೆಂಗಳೂರು ನಗರ
  • ಅಪರಾಧ
  • ರಾಜಕೀಯ
  • English News
  • Delhi News
  • ಕರ್ನಾಟಕ
  • ಶಿಕ್ಷಣ
  • ಕ್ರೀಡೆ
  • Home
  • ಕರ್ನಾಟಕ
  • ಸಂವಿಧಾನ ಇರುವುದು ಸಮಾಜದ ಕಟ್ಟಕಡೆಯ ವ್ಯಕ್ತಿಗಾಗಿ, ಉಳ್ಳವರಿಗಾಗಿ ಅಲ್ಲ: ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್
  • ಕರ್ನಾಟಕ

ಸಂವಿಧಾನ ಇರುವುದು ಸಮಾಜದ ಕಟ್ಟಕಡೆಯ ವ್ಯಕ್ತಿಗಾಗಿ, ಉಳ್ಳವರಿಗಾಗಿ ಅಲ್ಲ: ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್

The Bengaluru Live November 25, 2026 9:40 PM
ಬೆಂಗಳೂರಿನ ಕೆಪಿಸಿಸಿ ಕಚೇರಿಯ ಸಂವಿಧಾನ ದಿನಾಚರಣೆ ವಿಚಾರ ಸಂಕಿರಣದಲ್ಲಿ ದೀಪ ಬೆಳಗುತ್ತಿರುವ ಕಾಂಗ್ರೆಸ್ ಮುಖಂಡರು

ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ನಡೆದ ಸಂವಿಧಾನ ದಿನಾಚರಣೆ ಮತ್ತು “ಸಂವಿಧಾನ ಮತ್ತು ಪ್ರಸ್ತುತ ರಾಜಕಾರಣ” ವಿಚಾರ ಸಂಕಿರಣದಲ್ಲಿ ದೀಪ ಬೆಳಗುತ್ತಿರುವ ಮುಖಂಡರು. ಚಿತ್ರ: ಕೆಪಿಸಿಸಿ

📗 ಈ ಸುದ್ದಿಯನ್ನು ಇಂಗ್ಲಿಷ್‌ನಲ್ಲಿ ಓದಿ

ಬೆಂಗಳೂರು: ಸಂವಿಧಾನ ಮತ್ತು ಪ್ರಜಾಪ್ರಭುತ್ವ ಇರುವುದು ಸಮಾಜದ ಕಟ್ಟಕಡೆಯ ವ್ಯಕ್ತಿಗಾಗಿ, ಉಳ್ಳವರಿಗಾಗಿ ಅಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಬುಧವಾರ ಹೇಳಿದರು. ಯಾವುದೇ ಧರ್ಮ ಸಂವಿಧಾನಕ್ಕೆ ರಕ್ಷಣೆ ನೀಡುವುದಿಲ್ಲ, ಆದರೆ ಸಂವಿಧಾನ ಎಲ್ಲ ಧರ್ಮಗಳಿಗೂ ರಕ್ಷಣೆ ನೀಡುತ್ತದೆ; ಇದೇ ಭಾರತೀಯ ಸಂವಿಧಾನದ ಶ್ರೇಷ್ಠತೆ ಎಂದರು.

ಕೆಪಿಸಿಸಿ ಕಚೇರಿಯ ಭಾರತ ಜೋಡೋ ಸಭಾಂಗಣದಲ್ಲಿ ಕೆಪಿಸಿಸಿ ಕಾನೂನು ಘಟಕದ ವತಿಯಿಂದ ಆಯೋಜಿಸಿದ್ದ ಸಂವಿಧಾನ ದಿನಾಚರಣೆ ಮತ್ತು “ಸಂವಿಧಾನ ಮತ್ತು ಪ್ರಸ್ತುತ ರಾಜಕಾರಣ” ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು. ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎ.ಎಸ್. ಪೊನ್ನಣ್ಣ, ವಿಧಾನ ಪರಿಷತ್ತಿನ ಆಡಳಿತ ಪಕ್ಷದ ಮುಖ್ಯ ಸಚೇತಕ ಮಂಜುನಾಥ್ ಭಂಡಾರಿ, ಕೆಪಿಸಿಸಿ ಕಾನೂನು ಘಟಕದ ಅಧ್ಯಕ್ಷ ಸಿ.ಎಂ. ಧನಂಜಯ, ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ವಿಭಾಗದ ಅಧ್ಯಕ್ಷ ರಮೇಶ್ ಬಾಬು, ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಮತ್ತಿತರರು ಉಪಸ್ಥಿತರಿದ್ದರು.

ಸಂವಿಧಾನದ ಕುರಿತು ಚರ್ಚಿಸಲು ಬಂದಿರುವ ಕಾನೂನು ವಿದ್ಯಾರ್ಥಿಗಳು ಸಂವಿಧಾನದ ಆಶಯಗಳನ್ನು ಆಳವಾಗಿ ಅಧ್ಯಯನ ಮಾಡಬೇಕು; ಇದು ವರ್ತಮಾನದ ವಿಚಾರ ಮಾತ್ರವಲ್ಲ, ದೇಶದ ಭವಿಷ್ಯದ ಪ್ರಶ್ನೆಯೂ ಹೌದು ಎಂದು ಹರಿಪ್ರಸಾದ್ ಹೇಳಿದರು. ಭಾರತದಲ್ಲಿ ಕಾನೂನು ಮತ್ತು ಸಂವಿಧಾನ ಬೇರೆ ಬೇರೆಯಾಗಿದ್ದು, ಎರಡು ವರ್ಷ, 11 ತಿಂಗಳು, 18 ದಿನಗಳ ಸುದೀರ್ಘ ಚರ್ಚೆಯ ನಂತರ ರೂಪಿಸಿದ ಸಂವಿಧಾನದ ಚೌಕಟ್ಟಿನಲ್ಲೇ ಕಾನೂನುಗಳನ್ನು ರೂಪಿಸಲಾಗುತ್ತದೆ ಎಂದರು.

ಸಂವಿಧಾನ ಇರುವುದು ಕಟ್ಟಕಡೆಯ ವ್ಯಕ್ತಿಗಾಗಿ: ಸಂವಿಧಾನ ಮತ್ತು ಪ್ರಜಾಪ್ರಭುತ್ವ ಸಮಾಜದ ಕಟ್ಟಕಡೆಯ ವ್ಯಕ್ತಿಗಾಗಿ ಇವೆ, ವೋಟು ಮತ್ತು ನೋಟು ಬೇರ್ಪಟ್ಟಾಗ ಮಾತ್ರ ಪ್ರಜಾಪ್ರಭುತ್ವ ಗಟ್ಟಿಯಾಗಲು ಸಾಧ್ಯ ಎಂದು ಹರಿಪ್ರಸಾದ್ ಹೇಳಿದರು. ಸಂವಿಧಾನದ ಮೂಲ ಆಶಯವೇ ಸಮಾನತೆ. ಸಂವಿಧಾನದ ಪೀಠಿಕೆಯನ್ನು “ಭಾರತೀಯರಾದ ನಾವು” ಎಂಬುದರ ಬದಲಿಗೆ ದೇವರ ಹೆಸರಿನಲ್ಲಿ ಆರಂಭಿಸಬೇಕು ಎಂಬ ಪ್ರಸ್ತಾಪವೂ ಬಂದಿತ್ತು; ಆದರೆ ಈ ದೇಶದಲ್ಲಿ ಆಸ್ತಿಕರು, ನಾಸ್ತಿಕರು ಮತ್ತು ವಿಚಾರವಾದಿಗಳಿದ್ದಾರೆ, ದೇವರನ್ನು ನಂಬುವವರಿಗೆ ಮತ್ತು ನಂಬದವರಿಗೆ ಪ್ರತ್ಯೇಕ ಸಂವಿಧಾನ ರಚಿಸಲು ಸಾಧ್ಯವಿಲ್ಲ ಎಂದರು. ಧರ್ಮ ಪ್ರತಿಯೊಬ್ಬರ ಖಾಸಗಿ ಬದುಕಿನ ವಿಚಾರ; ಸಾರ್ವಜನಿಕ ಬದುಕಿನಲ್ಲಿ ಸಂವಿಧಾನವೇ ಶ್ರೇಷ್ಠ ಮತ್ತು ಪವಿತ್ರ ಗ್ರಂಥ ಎಂದು ಪ್ರತಿಪಾದಿಸಿದರು.

ಅಂಬೇಡ್ಕರ್ ಕೊಡುಗೆ: ಸಂವಿಧಾನ ರಚನೆಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಕೊಡುಗೆ ಅಪಾರ; ಸಂವಿಧಾನ ಸಲಹೆಗಾರರಾಗಿದ್ದ ಬಿ.ಎನ್. ರಾವ್ ಅವರೂ ಪ್ರಕ್ರಿಯೆಗೆ ನೆರವಾಗಿದ್ದರು ಎಂದು ಹರಿಪ್ರಸಾದ್ ಹೇಳಿದರು. ಅಂಬೇಡ್ಕರ್ ಅವರಿಗೆ ಸಂವಿಧಾನ ರಚಿಸಲು ಕಾಂಗ್ರೆಸ್ ಅವಕಾಶ ನೀಡಲಿಲ್ಲ ಎಂಬ ಸುಳ್ಳುಗಳನ್ನು ಸಂಘ ಪರಿವಾರದವರು ಹರಡುತ್ತಿದ್ದಾರೆ ಎಂದು ಅವರು ಆರೋಪಿಸಿದರು. ಭಾರತೀಯರಲ್ಲೇ ಸಂವಿಧಾನ ರಚಿಸುವ ಸಾಮರ್ಥ್ಯವುಳ್ಳ ಪ್ರತಿಭಾವಂತರಿದ್ದಾರೆ ಎಂಬ ವಿಶ್ವಾಸ ಸ್ವಾತಂತ್ರ್ಯ ಹೋರಾಟದ ನಾಯಕರಿಗಿತ್ತು ಎಂದರು.

ಸಮಾಜವಾದದ ವಿರುದ್ಧ: ಶ್ರೀಮಂತರು ಮತ್ತು ಬಡವರ ನಡುವಿನ ಅಂತರ ಕಡಿಮೆ ಮಾಡುವುದೇ ಸಮಾಜವಾದದ ಮೂಲ ಉದ್ದೇಶ, ಆದರೆ ಸಂವಿಧಾನ ವಿರೋಧಿಗಳು ಸಮಾಜವಾದದ ಆಶಯಗಳನ್ನೂ ವಿರೋಧಿಸುತ್ತಿದ್ದಾರೆ ಎಂದು ಅವರು ಆರೋಪಿಸಿದರು. ಧರ್ಮಪ್ರಭುತ್ವ, ರಾಜಪ್ರಭುತ್ವ ಮತ್ತು ಸರ್ವಾಧಿಕಾರಿ ವ್ಯವಸ್ಥೆಗಳನ್ನು ದಾಟಿ ನಾವು ಪ್ರಜಾಪ್ರಭುತ್ವ ತಲುಪಿದ್ದೇವೆ; ಸರ್ಕಾರ ರಚಿಸುವ ಮತ್ತು ಕೆಳಗಿಳಿಸುವ ಶಕ್ತಿಯನ್ನು ಸಂವಿಧಾನ ಪ್ರಜೆಗಳಿಗೆ ನೀಡಿದೆ ಎಂದರು. ಎಷ್ಟೇ ಉತ್ತಮ ಸಂವಿಧಾನವಿದ್ದರೂ ಅದನ್ನು ಅನುಷ್ಠಾನಗೊಳಿಸುವವರ ಮನಸ್ಥಿತಿ ಸರಿಯಿಲ್ಲದಿದ್ದರೆ ಆಶಯಗಳು ಸಾಕಾರಗೊಳ್ಳುವುದಿಲ್ಲ; ಡಾ. ಮನಮೋಹನ್ ಸಿಂಗ್ ಅವರಂತಹ ಉತ್ತಮ ಆಡಳಿತಗಾರರು ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ಆಡಳಿತ ನಡೆಸಬಲ್ಲರು ಎಂದು ಅವರು ತಿಳಿಸಿದರು.

ಮೀಸಲಾತಿ ಬಡತನ ನಿರ್ಮೂಲನೆಯ ಕಾರ್ಯಕ್ರಮವಲ್ಲ: ಆರ್‌ಎಸ್‌ಎಸ್‌ನವರು ಪರೋಕ್ಷವಾಗಿ ಸಂವಿಧಾನವನ್ನು ಟೀಕಿಸುತ್ತಿದ್ದಾರೆ, ಸಂವಿಧಾನ ಎಂದರೆ ಕೇವಲ ಮೀಸಲಾತಿ ಎಂಬಂತೆ ಬಿಂಬಿಸುತ್ತಿದ್ದಾರೆ ಎಂದು ಹರಿಪ್ರಸಾದ್ ಆರೋಪಿಸಿದರು. ಮೀಸಲಾತಿ ಬಡತನ ನಿರ್ಮೂಲನೆಯ ಕಾರ್ಯಕ್ರಮವಲ್ಲ; ಶತಮಾನಗಳಿಂದ ಶೋಷಣೆಗೆ ಒಳಗಾದ ಮತ್ತು ಅವಕಾಶಗಳಿಂದ ವಂಚಿತರಾದ ಸಮುದಾಯಗಳಿಗೆ ಪ್ರಾತಿನಿಧ್ಯ ಮತ್ತು ಸಾಮಾಜಿಕ ನ್ಯಾಯ ಒದಗಿಸುವ ವ್ಯವಸ್ಥೆ ಎಂದರು.

ಮಹಿಳೆಯರ ಹಕ್ಕು ಮತ್ತು ಅಂಬೇಡ್ಕರ್: ಅಂಬೇಡ್ಕರ್ ಅವರು ಕಾಂಗ್ರೆಸ್ ವಿರುದ್ಧ ರಾಜೀನಾಮೆ ನೀಡಿ ಕೇಂದ್ರ ಸಚಿವ ಸಂಪುಟದಿಂದ ಹೊರನಡೆದರು ಎಂಬ ತಪ್ಪು ಮಾಹಿತಿಯನ್ನು ಆರ್‌ಎಸ್‌ಎಸ್ ಹರಡುತ್ತಿದೆ ಎಂದು ಅವರು ಆರೋಪಿಸಿದರು. ಹಿಂದೂ ಕೋಡ್ ಬಿಲ್ ಮೂಲಕ ಪಿತ್ರಾರ್ಜಿತ ಆಸ್ತಿಯಲ್ಲಿ ಮಹಿಳೆಯರಿಗೆ ಸಮಾನ ಹಕ್ಕು, ವಿವಾಹ ವಿಚ್ಛೇದನದ ಹಕ್ಕು ಮುಂತಾದವನ್ನು ಕಲ್ಪಿಸಲು ಅಂಬೇಡ್ಕರ್ ಮುಂದಾಗಿದ್ದರು, ನೆಹರು ಅವರು ಬೆಂಬಲ ನೀಡಿದ್ದರು, ಆದರೆ ಈ ಸುಧಾರಣೆಗಳಿಗೆ ತೀವ್ರ ವಿರೋಧ ವ್ಯಕ್ತವಾಗಿತ್ತು; ಇದು ಅಂಬೇಡ್ಕರ್ ಅವರ ರಾಜೀನಾಮೆಗೆ ಪ್ರಮುಖ ಕಾರಣವಾಗಿತ್ತು ಎಂದು ಹೇಳಿದರು. ಸೋನಿಯಾ ಗಾಂಧಿ ಮತ್ತು ಡಾ. ಮನಮೋಹನ್ ಸಿಂಗ್ ಅವರ ನಾಯಕತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ 2005ರ ಹಿಂದೂ ಉತ್ತರಾಧಿಕಾರ ಕಾಯ್ದೆ ತಿದ್ದುಪಡಿ ಮೂಲಕ ಹೆಣ್ಣುಮಕ್ಕಳಿಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಸಮಾನ ಹಕ್ಕು ಕಲ್ಪಿಸಲಾಯಿತು; ಕಾನೂನು ವಿದ್ಯಾರ್ಥಿಗಳು ಇಂತಹ ಐತಿಹಾಸಿಕ ಬೆಳವಣಿಗೆಗಳನ್ನು ಅಧ್ಯಯನ ಮಾಡಬೇಕು ಎಂದು ಕರೆ ನೀಡಿದರು.

ವೋಟು ಮತ್ತು ನೋಟು ಬೇರ್ಪಡಬೇಕು: ಪ್ರಜಾಪ್ರಭುತ್ವದ ಬುನಾದಿಯೇ ಚುನಾವಣೆ; ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಮತದಾನದ ವಿಚಾರದಲ್ಲಿರುವ ಹಕ್ಕೇ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಇದೆ, ಪ್ರತಿಯೊಬ್ಬ ನಾಗರಿಕನ ಮತಕ್ಕೂ ಸಮಾನ ಮೌಲ್ಯವಿದೆ ಎಂದು ಹರಿಪ್ರಸಾದ್ ಹೇಳಿದರು. ಇಂದು ವೋಟು ಮತ್ತು ನೋಟು ಒಂದಾಗುತ್ತಿರುವ ಪರಿಸ್ಥಿತಿ ನಿರ್ಮಾಣವಾಗಿದೆ; ಸಂವಿಧಾನದ ಆಶಯಗಳನ್ನು ಪಾಲಿಸದಿದ್ದರೆ ಅದರ ಪರಿಣಾಮವನ್ನು ದೇಶದ ಸಾಮಾನ್ಯ ನಾಗರಿಕರು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಿ: ಸಮಾಜದಲ್ಲಿ ಮೂಢನಂಬಿಕೆಗಳು ತುಂಬಿವೆ; ಇದೇ ಕಾರಣಕ್ಕೆ ನೆಹರು ಅವರು ವೈಚಾರಿಕತೆ ಮತ್ತು ವೈಜ್ಞಾನಿಕ ಮನೋಭಾವದ ಅಗತ್ಯವನ್ನು ಪ್ರತಿಪಾದಿಸಿದ್ದರು ಮತ್ತು ಐಐಟಿ, ಐಐಎಂಗಳಂತಹ ಸಂಸ್ಥೆಗಳ ಸ್ಥಾಪನೆಗೆ ಆದ್ಯತೆ ನೀಡಿದ್ದರು ಎಂದು ಹರಿಪ್ರಸಾದ್ ಹೇಳಿದರು. ಜನಾಭಿಪ್ರಾಯ ಬದಲಿಸುವ ಶಕ್ತಿ ಯುವಜನರಿಗಿದೆ; ಅಧಿಕಾರದಲ್ಲಿರುವವರನ್ನು ಪ್ರಶ್ನಿಸುವ ಮತ್ತು ಸರ್ಕಾರಗಳನ್ನು ಉತ್ತರದಾಯಿಗಳನ್ನಾಗಿ ಮಾಡುವ ಸಾಮರ್ಥ್ಯವನ್ನು ಸಂವಿಧಾನ ಮತ್ತು ಪ್ರಜಾಪ್ರಭುತ್ವದ ರಕ್ಷಣೆಗೆ ಬಳಸಬೇಕು ಎಂದರು.

ಇತಿಹಾಸ ಅರಿತು ಭವಿಷ್ಯ ರೂಪಿಸಿ: ಬ್ರಿಟಿಷರ ಆಳ್ವಿಕೆಯಿಂದ ಭಾರತವನ್ನು ಮುಕ್ತಗೊಳಿಸುವ ಸಂದರ್ಭದಲ್ಲಿ ಅಧಿಪತ್ಯ ರಾಷ್ಟ್ರದ ಸ್ಥಾನಮಾನ ಪಡೆಯಬೇಕೇ ಅಥವಾ ಸಂಪೂರ್ಣ ಸ್ವಾತಂತ್ರ್ಯ ಪಡೆಯಬೇಕೇ ಎಂಬ ಚರ್ಚೆಗಳು ನಡೆದಿದ್ದವು; 1929ರ ಲಾಹೋರ್ ಕಾಂಗ್ರೆಸ್ ಅಧಿವೇಶನದಲ್ಲಿ ಪೂರ್ಣ ಸ್ವರಾಜ್ಯದ ಐತಿಹಾಸಿಕ ನಿರ್ಣಯ ಕೈಗೊಳ್ಳಲಾಯಿತು ಎಂದು ಹರಿಪ್ರಸಾದ್ ಹೇಳಿದರು. ಸ್ವಾತಂತ್ರ್ಯ ಹೋರಾಟದ ಇತಿಹಾಸ, ಸಂವಿಧಾನ ರಚನೆಯ ಹಿನ್ನೆಲೆ ಮತ್ತು ರಾಷ್ಟ್ರೀಯ ನಾಯಕರ ಕೊಡುಗೆಗಳನ್ನು ಯುವಜನರು ಅರಿಯಬೇಕು; ಮಕ್ಕಳಿಗೆ ಉತ್ತಮ ಶಿಕ್ಷಣ, ಆರೋಗ್ಯ ಸೌಲಭ್ಯ ಮತ್ತು ಉದ್ಯೋಗಾವಕಾಶ ಕಲ್ಪಿಸುವ ಕುರಿತು ಗಂಭೀರ ಚರ್ಚೆ ನಡೆಯಬೇಕು ಎಂದರು.

ಸಂವಿಧಾನದ ಪ್ರತಿಯೊಂದು ವಿಧಿಯನ್ನೂ ಕಾನೂನು ವಿದ್ಯಾರ್ಥಿಗಳು ಅಧ್ಯಯನ ಮಾಡಿ ತಮ್ಮ ಜ್ಞಾನವನ್ನು ಸಮಾಜದ ಒಳಿತಿಗಾಗಿ ಬಳಸಬೇಕು; ಸಂವಿಧಾನದ ಆಶಯಗಳನ್ನು ಉಳಿಸಿ ಪ್ರಜಾಪ್ರಭುತ್ವವನ್ನು ಬಲಪಡಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಹರಿಪ್ರಸಾದ್ ಕರೆ ನೀಡಿದರು.

About the Author

The Bengaluru Live

Administrator

Visit Website View All Posts

Post navigation

Previous: ಕೆಪಿಎಸ್‌ಸಿ ಸುಧಾರಣೆಗೆ ರಚಿಸಿದ್ದ ಸದನ ಸಮಿತಿಯಿಂದ ಸ್ಪೀಕರ್ ಜಿ.ಎಸ್. ಪಾಟೀಲ ಅವರಿಗೆ ವರದಿ ಸಲ್ಲಿಕೆ
Next: ರಾಜ್ಯ ಜಿಡಿಪಿಗೆ ಎರಡನೇ ಅತಿ ದೊಡ್ಡ ಕೊಡುಗೆ ನೀಡುವ ಜಿಲ್ಲೆ ದಕ್ಷಿಣ ಕನ್ನಡ: ಪ್ರಿಯಾಂಕ್ ಖರ್ಗೆ

Related Stories

ಮಂಗಳೂರಿನಲ್ಲಿ ಡೆಲಾಯ್ಟ್ ಕಚೇರಿ ಉದ್ಘಾಟನೆಯಲ್ಲಿ ಮಾತನಾಡುತ್ತಿರುವ ಸಚಿವ ಪ್ರಿಯಾಂಕ್ ಖರ್ಗೆ
  • ಕರ್ನಾಟಕ

ರಾಜ್ಯ ಜಿಡಿಪಿಗೆ ಎರಡನೇ ಅತಿ ದೊಡ್ಡ ಕೊಡುಗೆ ನೀಡುವ ಜಿಲ್ಲೆ ದಕ್ಷಿಣ ಕನ್ನಡ: ಪ್ರಿಯಾಂಕ್ ಖರ್ಗೆ

The Bengaluru Live November 25, 2026 9:46 PM
ಸದನ ಸಮಿತಿಯ ಸದಸ್ಯರು ಸ್ಪೀಕರ್ ಜಿ.ಎಸ್. ಪಾಟೀಲ ಅವರಿಗೆ ವರದಿ ಸಲ್ಲಿಸುತ್ತಿರುವುದು
  • ಕರ್ನಾಟಕ

ಕೆಪಿಎಸ್‌ಸಿ ಸುಧಾರಣೆಗೆ ರಚಿಸಿದ್ದ ಸದನ ಸಮಿತಿಯಿಂದ ಸ್ಪೀಕರ್ ಜಿ.ಎಸ್. ಪಾಟೀಲ ಅವರಿಗೆ ವರದಿ ಸಲ್ಲಿಕೆ

The Bengaluru Live November 25, 2026 9:26 PM
ವಿಧಾನಸೌಧದಲ್ಲಿ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಅವರೊಂದಿಗೆ ಪುಸ್ತಕ ಹಿಡಿದು ನಿಂತಿರುವ ಐವರು ಐಪಿಎಸ್ ಪ್ರೊಬೇಷನರ್‌ಗಳು
  • ಕರ್ನಾಟಕ

ಕನ್ನಡ ಕಲಿಯಿರಿ, ಜನರ ಸಮಸ್ಯೆಗಳಿಗೆ ಮೊದಲ ಆದ್ಯತೆ ನೀಡಿ: ಕರ್ನಾಟಕ ಕೇಡರ್‌ನ ಐವರು ನೂತನ ಐಪಿಎಸ್ ಪ್ರೊಬೇಷನರ್‌ಗಳಿಗೆ ಮುಖ್ಯ ಕಾರ್ಯದರ್ಶಿ ಸಲಹೆ

The Bengaluru Live November 25, 2026 9:02 PM

Latest Post

ರಾಜ್ಯ ಜಿಡಿಪಿಗೆ ಎರಡನೇ ಅತಿ ದೊಡ್ಡ ಕೊಡುಗೆ ನೀಡುವ ಜಿಲ್ಲೆ ದಕ್ಷಿಣ ಕನ್ನಡ: ಪ್ರಿಯಾಂಕ್ ಖರ್ಗೆ ಮಂಗಳೂರಿನಲ್ಲಿ ಡೆಲಾಯ್ಟ್ ಕಚೇರಿ ಉದ್ಘಾಟನೆಯಲ್ಲಿ ಮಾತನಾಡುತ್ತಿರುವ ಸಚಿವ ಪ್ರಿಯಾಂಕ್ ಖರ್ಗೆ
  • ಕರ್ನಾಟಕ

ರಾಜ್ಯ ಜಿಡಿಪಿಗೆ ಎರಡನೇ ಅತಿ ದೊಡ್ಡ ಕೊಡುಗೆ ನೀಡುವ ಜಿಲ್ಲೆ ದಕ್ಷಿಣ ಕನ್ನಡ: ಪ್ರಿಯಾಂಕ್ ಖರ್ಗೆ

November 25, 2026 9:46 PM
ಸಂವಿಧಾನ ಇರುವುದು ಸಮಾಜದ ಕಟ್ಟಕಡೆಯ ವ್ಯಕ್ತಿಗಾಗಿ, ಉಳ್ಳವರಿಗಾಗಿ ಅಲ್ಲ: ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಬೆಂಗಳೂರಿನ ಕೆಪಿಸಿಸಿ ಕಚೇರಿಯ ಸಂವಿಧಾನ ದಿನಾಚರಣೆ ವಿಚಾರ ಸಂಕಿರಣದಲ್ಲಿ ದೀಪ ಬೆಳಗುತ್ತಿರುವ ಕಾಂಗ್ರೆಸ್ ಮುಖಂಡರು
  • ಕರ್ನಾಟಕ

ಸಂವಿಧಾನ ಇರುವುದು ಸಮಾಜದ ಕಟ್ಟಕಡೆಯ ವ್ಯಕ್ತಿಗಾಗಿ, ಉಳ್ಳವರಿಗಾಗಿ ಅಲ್ಲ: ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್

November 25, 2026 9:40 PM
ಕೆಪಿಎಸ್‌ಸಿ ಸುಧಾರಣೆಗೆ ರಚಿಸಿದ್ದ ಸದನ ಸಮಿತಿಯಿಂದ ಸ್ಪೀಕರ್ ಜಿ.ಎಸ್. ಪಾಟೀಲ ಅವರಿಗೆ ವರದಿ ಸಲ್ಲಿಕೆ ಸದನ ಸಮಿತಿಯ ಸದಸ್ಯರು ಸ್ಪೀಕರ್ ಜಿ.ಎಸ್. ಪಾಟೀಲ ಅವರಿಗೆ ವರದಿ ಸಲ್ಲಿಸುತ್ತಿರುವುದು
  • ಕರ್ನಾಟಕ

ಕೆಪಿಎಸ್‌ಸಿ ಸುಧಾರಣೆಗೆ ರಚಿಸಿದ್ದ ಸದನ ಸಮಿತಿಯಿಂದ ಸ್ಪೀಕರ್ ಜಿ.ಎಸ್. ಪಾಟೀಲ ಅವರಿಗೆ ವರದಿ ಸಲ್ಲಿಕೆ

November 25, 2026 9:26 PM
ಕನ್ನಡ ಕಲಿಯಿರಿ, ಜನರ ಸಮಸ್ಯೆಗಳಿಗೆ ಮೊದಲ ಆದ್ಯತೆ ನೀಡಿ: ಕರ್ನಾಟಕ ಕೇಡರ್‌ನ ಐವರು ನೂತನ ಐಪಿಎಸ್ ಪ್ರೊಬೇಷನರ್‌ಗಳಿಗೆ ಮುಖ್ಯ ಕಾರ್ಯದರ್ಶಿ ಸಲಹೆ ವಿಧಾನಸೌಧದಲ್ಲಿ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಅವರೊಂದಿಗೆ ಪುಸ್ತಕ ಹಿಡಿದು ನಿಂತಿರುವ ಐವರು ಐಪಿಎಸ್ ಪ್ರೊಬೇಷನರ್‌ಗಳು
  • ಕರ್ನಾಟಕ

ಕನ್ನಡ ಕಲಿಯಿರಿ, ಜನರ ಸಮಸ್ಯೆಗಳಿಗೆ ಮೊದಲ ಆದ್ಯತೆ ನೀಡಿ: ಕರ್ನಾಟಕ ಕೇಡರ್‌ನ ಐವರು ನೂತನ ಐಪಿಎಸ್ ಪ್ರೊಬೇಷನರ್‌ಗಳಿಗೆ ಮುಖ್ಯ ಕಾರ್ಯದರ್ಶಿ ಸಲಹೆ

November 25, 2026 9:02 PM
ನವೆಂಬರ್ 26ರಂದು ಮೈಸೂರಿನಲ್ಲಿ ರಾಜ್ಯಮಟ್ಟದ ಸಂವಿಧಾನ ದಿನಾಚರಣೆ: ಮುಖ್ಯಮಂತ್ರಿ ಉದ್ಘಾಟನೆ, ಒಂದು ಲಕ್ಷ ಜನ ಸೇರುವ ನಿರೀಕ್ಷೆ ಯುವ ಸಂಸತ್ತು 2026 ಬ್ಯಾನರ್ ಮುಂದೆ ಮೈಸೂರಿನ ಪತ್ರಿಕಾಗೋಷ್ಠಿಯಲ್ಲಿ ಕುಳಿತಿರುವ ಸಚಿವರು ಮತ್ತು ಅಧಿಕಾರಿಗಳು
  • ಕರ್ನಾಟಕ

ನವೆಂಬರ್ 26ರಂದು ಮೈಸೂರಿನಲ್ಲಿ ರಾಜ್ಯಮಟ್ಟದ ಸಂವಿಧಾನ ದಿನಾಚರಣೆ: ಮುಖ್ಯಮಂತ್ರಿ ಉದ್ಘಾಟನೆ, ಒಂದು ಲಕ್ಷ ಜನ ಸೇರುವ ನಿರೀಕ್ಷೆ

November 25, 2026 8:59 PM
₹27 ಲಕ್ಷ, ಮುಂಬಡ್ತಿಯ ಮಾತು ಮತ್ತು ಉಪ ಮುಖ್ಯಮಂತ್ರಿಯ ಹೆಸರು: ಜಿಬಿಎ ಆಡಿಯೋ ವಿವಾದದಲ್ಲಿ ಏನಿದೆ? ಜಿಬಿಎ ಮುಖ್ಯ ಆಯುಕ್ತ ಎಂ. ಮಹೇಶ್ವರ ರಾವ್ ಅವರಿಗೆ ವೇದಿಕೆಯ ಮೇಲೆ ಮನವಿ ಪತ್ರ ನೀಡುತ್ತಿರುವ ಜಿಬಿಎ ನೌಕರರ ಸಂಘದ ಪದಾಧಿಕಾರಿಗಳು ಮತ್ತು ಸುತ್ತಲೂ ನಿಂತಿರುವ ಸದಸ್ಯರು
  • ಬೆಂಗಳೂರು ನಗರ

₹27 ಲಕ್ಷ, ಮುಂಬಡ್ತಿಯ ಮಾತು ಮತ್ತು ಉಪ ಮುಖ್ಯಮಂತ್ರಿಯ ಹೆಸರು: ಜಿಬಿಎ ಆಡಿಯೋ ವಿವಾದದಲ್ಲಿ ಏನಿದೆ?

November 25, 2026 8:01 PM

ನೀವು ತಪ್ಪಿಸಿಕೊಂಡಿರಬಹುದು

ಮಂಗಳೂರಿನಲ್ಲಿ ಡೆಲಾಯ್ಟ್ ಕಚೇರಿ ಉದ್ಘಾಟನೆಯಲ್ಲಿ ಮಾತನಾಡುತ್ತಿರುವ ಸಚಿವ ಪ್ರಿಯಾಂಕ್ ಖರ್ಗೆ
  • ಕರ್ನಾಟಕ

ರಾಜ್ಯ ಜಿಡಿಪಿಗೆ ಎರಡನೇ ಅತಿ ದೊಡ್ಡ ಕೊಡುಗೆ ನೀಡುವ ಜಿಲ್ಲೆ ದಕ್ಷಿಣ ಕನ್ನಡ: ಪ್ರಿಯಾಂಕ್ ಖರ್ಗೆ

The Bengaluru Live November 25, 2026 9:46 PM
ಬೆಂಗಳೂರಿನ ಕೆಪಿಸಿಸಿ ಕಚೇರಿಯ ಸಂವಿಧಾನ ದಿನಾಚರಣೆ ವಿಚಾರ ಸಂಕಿರಣದಲ್ಲಿ ದೀಪ ಬೆಳಗುತ್ತಿರುವ ಕಾಂಗ್ರೆಸ್ ಮುಖಂಡರು
  • ಕರ್ನಾಟಕ

ಸಂವಿಧಾನ ಇರುವುದು ಸಮಾಜದ ಕಟ್ಟಕಡೆಯ ವ್ಯಕ್ತಿಗಾಗಿ, ಉಳ್ಳವರಿಗಾಗಿ ಅಲ್ಲ: ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್

The Bengaluru Live November 25, 2026 9:40 PM
ಸದನ ಸಮಿತಿಯ ಸದಸ್ಯರು ಸ್ಪೀಕರ್ ಜಿ.ಎಸ್. ಪಾಟೀಲ ಅವರಿಗೆ ವರದಿ ಸಲ್ಲಿಸುತ್ತಿರುವುದು
  • ಕರ್ನಾಟಕ

ಕೆಪಿಎಸ್‌ಸಿ ಸುಧಾರಣೆಗೆ ರಚಿಸಿದ್ದ ಸದನ ಸಮಿತಿಯಿಂದ ಸ್ಪೀಕರ್ ಜಿ.ಎಸ್. ಪಾಟೀಲ ಅವರಿಗೆ ವರದಿ ಸಲ್ಲಿಕೆ

The Bengaluru Live November 25, 2026 9:26 PM
ವಿಧಾನಸೌಧದಲ್ಲಿ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಅವರೊಂದಿಗೆ ಪುಸ್ತಕ ಹಿಡಿದು ನಿಂತಿರುವ ಐವರು ಐಪಿಎಸ್ ಪ್ರೊಬೇಷನರ್‌ಗಳು
  • ಕರ್ನಾಟಕ

ಕನ್ನಡ ಕಲಿಯಿರಿ, ಜನರ ಸಮಸ್ಯೆಗಳಿಗೆ ಮೊದಲ ಆದ್ಯತೆ ನೀಡಿ: ಕರ್ನಾಟಕ ಕೇಡರ್‌ನ ಐವರು ನೂತನ ಐಪಿಎಸ್ ಪ್ರೊಬೇಷನರ್‌ಗಳಿಗೆ ಮುಖ್ಯ ಕಾರ್ಯದರ್ಶಿ ಸಲಹೆ

The Bengaluru Live November 25, 2026 9:02 PM

ನಮ್ಮ ಕುರಿತು

ಬೆಂಗಳೂರು ಲೈವ್ ಬೆಂಗಳೂರು ಮತ್ತು ಕರ್ನಾಟಕವನ್ನು ಕೇಂದ್ರೀಕರಿಸಿ ಇಂಗ್ಲಿಷ್ ಮತ್ತು ಕನ್ನಡದಲ್ಲಿ ಸುದ್ದಿ ಹಾಗೂ ಮಾಹಿತಿಯನ್ನು ಪ್ರಕಟಿಸುವ ಸ್ವತಂತ್ರ ಡಿಜಿಟಲ್ ಸುದ್ದಿ ಪ್ರಕಟಣೆಯಾಗಿದೆ. ಇದು ಫೆಬ್ರವರಿ 2020ರಿಂದ ಕಾರ್ಯನಿರ್ವಹಿಸುತ್ತಿದೆ.

ಉಪಯುಕ್ತ ಕೊಂಡಿಗಳು

  • ಬೆಂಗಳೂರು ಲೈವ್ ಕುರಿತು
  • ಸಂಪರ್ಕಿಸಿ
  • ಸಂಪಾದಕೀಯ ಮಾನದಂಡಗಳು ಮತ್ತು ತಿದ್ದುಪಡಿ ನೀತಿ
  • ಪ್ರಕಾಶಕರು, ಸಂಪಾದಕೀಯ ಹೊಣೆಗಾರಿಕೆ ಮತ್ತು ದೂರು ಪರಿಹಾರ
  • ಮಾಲೀಕತ್ವ ಮತ್ತು ಹಣಕಾಸು ಪಾರದರ್ಶಕತೆ
  • ನಮ್ಮೊಂದಿಗೆ ಜಾಹೀರಾತು ನೀಡಿ
  • ಗೌಪ್ಯತಾ ನೀತಿ
  • ಸೇವಾ ನಿಯಮಗಳು
  • ಪತ್ರಿಕಾ ಪ್ರಕಟಣೆ ಸಲ್ಲಿಸಿ

ಇತ್ತೀಚಿನ ಸುದ್ದಿಗಳು

  • ರಾಜ್ಯ ಜಿಡಿಪಿಗೆ ಎರಡನೇ ಅತಿ ದೊಡ್ಡ ಕೊಡುಗೆ ನೀಡುವ ಜಿಲ್ಲೆ ದಕ್ಷಿಣ ಕನ್ನಡ: ಪ್ರಿಯಾಂಕ್ ಖರ್ಗೆ
  • ಸಂವಿಧಾನ ಇರುವುದು ಸಮಾಜದ ಕಟ್ಟಕಡೆಯ ವ್ಯಕ್ತಿಗಾಗಿ, ಉಳ್ಳವರಿಗಾಗಿ ಅಲ್ಲ: ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್
  • ಕೆಪಿಎಸ್‌ಸಿ ಸುಧಾರಣೆಗೆ ರಚಿಸಿದ್ದ ಸದನ ಸಮಿತಿಯಿಂದ ಸ್ಪೀಕರ್ ಜಿ.ಎಸ್. ಪಾಟೀಲ ಅವರಿಗೆ ವರದಿ ಸಲ್ಲಿಕೆ
  • ಕನ್ನಡ ಕಲಿಯಿರಿ, ಜನರ ಸಮಸ್ಯೆಗಳಿಗೆ ಮೊದಲ ಆದ್ಯತೆ ನೀಡಿ: ಕರ್ನಾಟಕ ಕೇಡರ್‌ನ ಐವರು ನೂತನ ಐಪಿಎಸ್ ಪ್ರೊಬೇಷನರ್‌ಗಳಿಗೆ ಮುಖ್ಯ ಕಾರ್ಯದರ್ಶಿ ಸಲಹೆ
©Copyright 2025 The Bengaluru Live All rights reserved. | MoreNews by AF themes.