Home ಬೆಂಗಳೂರು ನಗರ ರಾಜ್ಯದಲ್ಲಿ ಕೋವಿಡ್ ಸೋಂಕು ಇಳಿಮುಖ: ಹೊಸ 12,209 ಪ್ರಕರಣಗಳು ವರದಿ

ರಾಜ್ಯದಲ್ಲಿ ಕೋವಿಡ್ ಸೋಂಕು ಇಳಿಮುಖ: ಹೊಸ 12,209 ಪ್ರಕರಣಗಳು ವರದಿ

25
0
bengaluru

ಬೆಂಗಳೂರು:

ರಾಜ್ಯದಲ್ಲಿ ಕೋವಿಡ್ ಸೋಂಕು ಇಳಿಮುಖವಾಗುತ್ತಿದ್ದು, ಕಳೆದ 24 ತಾಸಿನಲ್ಲಿ ಹೊಸ 12,209 ಪ್ರಕರಣಗಳು ವರದಿಯಾಗಿವೆ.

ಇದರೊಂದಿಗೆ ಒಟ್ಟು ಪ್ರಕರಣಗಳ ಸಂಖ್ಯೆ 26,95,523ಕ್ಕೆ ಏರಿದೆ. ಕರ್ನಾಟಕದಲ್ಲಿ ಒಟ್ಟು ಸೋಂಕು ಪ್ರಕರಣಗಳ ಸಂಖ್ಯೆ 26,95,523 ಕ್ಕೆ ಏರಿಕೆಯಾಗಿದೆ. ಅಂತೆಯೇ ಇದೇ ಅವಧಿಯಲ್ಲಿ ಒಟ್ಟು 320 ಸೋಂಕಿತರು  ಸಾವನ್ನಪ್ಪಿದ್ದು ಆ ಮೂಲಕ ಕೋವಿಡ್ ಸೋಂಕಿಗೆ ಬಲಿಯಾದವರ ಸಂಖ್ಯೆ 31580ಕ್ಕೆ ಏರಿಕೆಯಾಗಿದೆ.

24 ಗಂಟೆಗಳ ಅವಧಿಯಲ್ಲಿ 25,659 ಸೋಂಕಿತರು ಚೇತರಿಸಿಕೊಂಡಿದ್ದು ಆ ಮೂಲಕ ರಾಜ್ಯದಲ್ಲಿನ ಒಟ್ಟಾರೆ ಗುಣಮುಖರ ಸಂಖ್ಯೆ 24,09,417ಕ್ಕೆ ಏರಿಕೆಯಾಗಿದೆ. ಇನ್ನು ರಾಜ್ಯದಲ್ಲಿ ಪ್ರಸ್ತುತ ಒಟ್ಟು 2,54,505 ಸಕ್ರಿಯ ಪ್ರಕರಣಗಳು ವರದಿಯಾಗಿವೆ.

bengaluru

ರಾಜ್ಯದಲ್ಲಿ ಸೋಂಕಿನಿಂದ ಮೃತಪಟ್ಟವರ ಶೇಕಡಾವಾರು ಪ್ರಮಾಣ 2.62 ರಷ್ಟು ಕಂಡು ಬಂದಿದ್ದು,  ಅಂತೆಯೇ ರಾಜ್ಯದ ಸೋಂಕು ಸಕಾರಾತ್ಮಕ ಪ್ರಮಾಣ ಶೇ.7.71ಕ್ಕೆ ಏಳಿಕೆಯಾಗಿದೆ.

ಇದೇ ವೇಳೆ ಎಂದಿನಂತೆ ರಾಜಧಾನಿ ಬೆಂಗಳೂರಿನಲ್ಲಿ ಅತಿ ಹೆಚ್ಚು ಅಂದರೆ 2944 ಸೋಂಕು ಪ್ರಕರಣಗಳು ವರದಿಯಾಗಿವೆ. ಉಳಿದಂತೆ ಬೆಳಗಾವಿ (418), ದಕ್ಷಿಣ ಕನ್ನಡ (609), ಧಾರವಾಡ (262), ಹಾಸನ (655), ಮೈಸೂರಿನಲ್ಲಿ 1237 ಪ್ರಕರಣಗಳು ವರದಿಯಾಗಿವೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

bengaluru

LEAVE A REPLY

Please enter your comment!
Please enter your name here