ಆದರೆ ಎನ್ 95 ಮಾಸ್ಕ್ ಧಾರಣೆ ಹಾಗೂ ಎರಡೂ ಡೋಸ್ ಲಸಿಕೆ ಕಡ್ಡಾಯ ಮಾಡಲಾಗಿದೆ.
ಬೆಂಗಳೂರು:
ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಕೋವಿಡ್ ಸ್ಥಿತಿಗತಿ ಕುರಿತು ಪರಿಶೀಲನಾ ಸಭೆ ನಡೆಯಿತು.
ಸಭೆಯಲ್ಲಿ ಕೆಲವು ಮುನ್ನೆಚ್ಚರಿಕೆಯ ಕ್ರಮಗಳನ್ನು ಚಿತ್ರಮಂದಿರಗಳನ್ನು 100% ಆಸನ ಭರ್ತಿಗೆ ತೆರೆಯಲು ಅನುಮತಿ ನೀಡಲು ನಿರ್ಧರಿಸಲಾಯಿತು.
ಚಿತ್ರಮಂದಿರ ಪ್ರವೇಶಿಸಲು ಎನ್ 95 ಮಾಸ್ಕ್ ಧಾರಣೆ ಹಾಗೂ ಎರಡೂ ಡೋಸ್ ಲಸಿಕೆ ಕಡ್ಡಾಯ ಮಾಡಲಾಗಿದೆ.
ಚಿತ್ರಮಂದಿರದ ಒಳಗೆ ಆಹಾರ, ಪಾನೀಯ ಸೇವನೆಗೆ ಅವಕಾಶವಿಲ್ಲ ಎಂದು ಸಭೆಯಲ್ಲಿ ನಿರ್ಧರಿಸಲಾಯಿತು ಎಂದು ಮುಖ್ಯಮಂತ್ರಿಗಳ ಕಚೇರಿಯಿಂದ ಹೊರಡಿಸಲಾದ ಪತ್ರಿಕಾ ಹೇಳಿಕೆಯಲ್ಲಿ ಹೇಳಲಾಗಿದೆ.
ಎಲ್ಲ ಮಾರ್ಗಸೂಚಿಗಳು ಕುರಿತು ಪರವಾನಗಿ ನೀಡುವ ಸಂಸ್ಥೆಗಳಿಂದ ನಿಯಮಿತ ಹಾಗೂ ಅನಿರೀಕ್ಷಿತ ತಪಾಸಣೆಗೆ ಸೂಚಿಸಲಾಯಿತು ಎಂದು ಹೇಳಲಾಗಿದೆ.