Home ಆರೋಗ್ಯ ಕರ್ನಾಟಕ್ಕೆ ಕೋವಿಡ್‌ 2ನೇ ಅಲೆ!

ಕರ್ನಾಟಕ್ಕೆ ಕೋವಿಡ್‌ 2ನೇ ಅಲೆ!

37
0

ಬೆಂಗಳೂರಿನಲ್ಲಿ ಹೊಸದಾಗಿ 526 ಕೊರೊನಾ ವೈರಸ್‌ ಪ್ರಕರಣಗಳು ವರದಿ

ಮತ್ತೆ ಹೆಚ್ಚುತ್ತಿದೆ ಸೋಂಕು!

ಬೆಂಗಳೂರು:

ಶುಕ್ರವಾರ ಒಂದೇ ದಿನ ರಾಜ್ಯಾದ್ಯಂತ 833 ಹೊಸ ಸೋಂಕು ಪ್ರಕರಣಗಳು ದೃಢಪಟ್ಟಿವೆ. 8114 ಸಕ್ರಿಯ ಪ್ರಕರಣಗಳಿದ್ದು, ಸೋಂಕಿಗೆ 5 ಮಂದಿ ಬಲಿಯಾಗಿದ್ದಾರೆ.

ಬೆಂಗಳೂರು, ಹಲವಾರು ದಿನಗಳ ಅಂತರದ ನಂತರ 500 ಪ್ಲಸ್ ಕೊರೊನಾ ವೈರಸ್‌ ಪ್ರಕರಣಗಳನ್ನು ದಾಟಿದೆ. ಬೆಂಗಳೂರಿನಲ್ಲಿ ಹೊಸದಾಗಿ 526 ಪ್ರಕರಣಗಳು ವರದಿಯಾಗಿವೆ.

ರಾಜ್ಯದಲ್ಲಿ ಕೊರೊನಾ ವೈರಸ್‌ ಎರಡನೇ ಅಲೆ ಅಪ್ಪಳಿಸುವ ಎಲ್ಲ ಸಾಧ್ಯತೆಗಳೂ ಇವೆ. ದಿನೇದಿನೆ ಹೆಚ್ಚುತ್ತಿರುವ ಹೊಸ ಸೋಂಕಿತರ ಸಂಖ್ಯೆಯೇ ಇದಕ್ಕೆ ಸಾಕ್ಷಿ.

Screenshot 303
Screenshot 304

ಶುಕ್ರವಾರ ಒಂದೇ ದಿನ 545 ಮಂದಿ ಗುಣಮುಖರಾಗಿದ್ದಾರೆ. 125 ರೋಗಿಗಳ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ತೀವ್ರ ನಿಗಾ ಘಟಕಗಳಲ್ಲಿ ದಾಖಲಿಸಲಾಗಿದೆ. ರಾಜ್ಯದಲ್ಲಿ ಸೋಂಕು ಪತ್ತೆ ಪ್ರಮಾಣವು ಶೇ 1.13ರಷ್ಟಿದ್ದರೆ, ಮರಣ ದರವು ಶೇ 0.60ರಷ್ಟಿದೆ.

ರಾಜ್ಯದಲ್ಲಿ ಇದುವರೆಗೆ ಒಟ್ಟು 9,58,417 ಸೋಂಕಿತ ಪ್ರಕರಣಗಳು ವರದಿಯಾಗಿವೆ. ಈ ಪೈಕಿ 9,37,898 ಮಂದಿ ಚೇತರಿಸಿಕೊಂಡಿದ್ದಾರೆ. ಉಳಿದಂತೆ 8114 ಸಕ್ರಿಯ ಪ್ರಕರಣಗಳಿದ್ದು, ಇವರು ನಿಗದಿತ ಆಸ್ಪತ್ರೆ, ಕೋವಿಡ್‌ ಆರೈಕೆ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಶುಕ್ರವಾರ ಸೋಂಕಿಗೆ 5 ಮಂದಿ ಬಲಿಯಾಗಿದ್ದು, ಸಾವಿನ ಸಂಖ್ಯೆ 12,386ಕ್ಕೆ ಏರಿಕೆಯಾಗಿದೆ.

LEAVE A REPLY

Please enter your comment!
Please enter your name here