Home ಅಪರಾಧ ನಿವೃತ್ತ ಐಪಿಎಸ್ ಅಧಿಕಾರಿ ಶಂಕರ್ ಬಿದರಿಗೆ ಸೈಬರ್ ವಂಚನೆ

ನಿವೃತ್ತ ಐಪಿಎಸ್ ಅಧಿಕಾರಿ ಶಂಕರ್ ಬಿದರಿಗೆ ಸೈಬರ್ ವಂಚನೆ

42
0
Cyber Criminal targets Karnataka's former IPS officer bank account

ಬೆಂಗಳೂರು:

ನಿವೃತ್ತ ಡಿಜಿ ಮತ್ತು ಐಜಿಪಿ ಶಂಕರ್ ಬಿದರಿಯ ಅವರಿಗೆ ಬ್ಯಾಂಕ್ ಅಧಿಕಾರಿ ಸೋಗಿನಲ್ಲಿ ವಂಚಿಸಲಾಗಿದೆ.

ಬ್ಯಾಂಕ್ ಅಧಿಕಾರಿ ಸೋಗಿನಲ್ಲಿ ಶಂಕರ್ ಬಿದರಿಗೆ ಕರೆಮಾಡಿ ಕಳ್ಳರು ವಂಚಿಸಿದ್ದಾರೆ.

ನಿಮ್ಮ ಅಕೌಂಟ್​​ಗೆ ಪಾನ್​ ಕಾರ್ಡ್​ ಲಿಂಕ್​ ಮಾಡಬೇಕು. ಲಿಂಕ್ ಮಾಡದಿದ್ದರೆ ಖಾತೆ ಸ್ಥಗಿತಗೊಳಿಸಲಾಗುವುದು ಎಂದು ಹೇಳಿ ಒಟಿಪಿ ಪಡೆದು ಅಕೌಂಟ್​​ನಲ್ಲಿದ್ದ 89 ಸಾವಿರ ರೂ. ವಂಚನೆ ಮಾಡಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಆಗ್ನೇಯ ವಿಭಾಗದ ಸಿಇಎನ್ ಠಾಣೆಯಲ್ಲಿ ಶಂಕರ್ ಬಿದರಿ ದೂರು‌ ನೀಡಿದ್ದಾರೆ. ಬಿದರಿ ದೂರಿನ ಮೇರೆಗೆ ಪೊಲೀಸರು ಎಫ್​ಐಆರ್ ದಾಖಲಾಗಿದ್ದು, ಪೊಲೀಸರ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.

LEAVE A REPLY

Please enter your comment!
Please enter your name here