ಮಂಗಳೂರು:
ತೌತೆ ಚಂಡಮಾರುತದಿಂದಾಗಿ ಕರಾವಳಿ ಕರ್ನಾಟಕದ 22 ತಾಲ್ಲೂಕುಗಳಲ್ಲಿ ಸುಮಾರು ಎಂಟು ಜನರು ಸಾವನ್ನಪ್ಪಿದ್ದಾರೆ ಮತ್ತು 121 ಗ್ರಾಮಗಳು ತೀವ್ರವಾಗಿ ಬಾಧಿತವಾಗಿವೆ.
ರಾಜ್ಯ ವಿಪತ್ತು ನಿರ್ವಹಣಾ ಸಮಿತಿಯ ಮುಖ್ಯಸ್ಥರೂ ಆಗಿರುವ ಕಂದಾಯ ಸಚಿವ ಆರ್.ಅಶೋಕ ಅವರು ನಗರದ ಚಂಡಮಾರುತ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಆರಂಭಿಕ ವರದಿಗಳ ಪ್ರಕಾರ ಸುಮಾರು 333 ಮನೆಗಳಿಗೆ ಹಾನಿಯಾಗಿದೆ ಮತ್ತು 644 ವಿದ್ಯುತ್ ಕಂಬಗಳು ಕೆಳಗಿಳಿದಿವೆ ಎಂದು ಹೇಳಿದರು. ಈವರೆಗೆ ಸುಮಾರು 290 ಜನರಿಗೆ ಜಿಲ್ಲಾಡಳಿತ ಆಶ್ರಯ ನೀಡಿದೆ.
ಅರಬ್ಬಿ ಸಮುದ್ರದ ಟಗ್ ಬೋಟ್ ದುರಂತದಲ್ಲಿ ಮೃತಪಟ್ಟ ಕುಟುಂಬಕ್ಕೆ ಪರಿಹಾರ ಘೋಷಿಸಲಾಯಿತು.
— R. Ashoka (ಆರ್. ಅಶೋಕ) (@RAshokaBJP) May 17, 2021
ಮೃತ ಕುಟುಂಬಕ್ಕೆ ತಲಾ 10 ಲಕ್ಷವನ್ನು MRPL ಕಂಪನಿಯಿಂದ ನೀಡಲು ಸೂಚನೆ ನೀಡಿದ್ದೇನೆ. 182 ಕುಟುಂಬಗಳಿಗೆ ತಲಾ 10 ಸಾವಿರ ರೂ ನೀಡಲಾಗುವುದು, ಭಾಗಶಃ ಮನೆ ಹಾನಿಯಾದವರಿಗೆ 1ಲಕ್ಷ ರೂ, ಪೂರ್ತಿ ಮನೆ ಹಾನಿಯಾದವರಿಗೆ 5 ಲಕ್ಷ ರೂ ಪರಿಹಾರ ನೀಡಲಾಗುವುದು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಟ್ಟು 333 ಮನೆಗಳಿಗೆ ಹಾಗೂ 644 ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ. ಎಂಟು ಜನರು ಮೃತಪಟ್ಟಿದ್ದಾರೆ. 290 ಜನರಿಗೆ ಕಾಳಜಿ ಕೇಂದ್ರದಲ್ಲಿ ಆಶ್ರಯ ಕಲ್ಪಿಸಲಾಗಿದೆ ಎಂದರು.
ಮನೆ ಹಾನಿಗೆ ಒಳಗಾದವರಿಗೆ ತಕ್ಷಣದ ಪರಿಹಾರವಾಗಿ ₹10 ಸಾವಿರ ವಿತರಿಸಲಾಗುತ್ತಿದೆ. ಭಾಗಶಃ ಹಾನಿಯಾದರೆ ₹1 ಲಕ್ಷ, ಪೂರ್ಣ ಹಾನಿಯಾಗಿದ್ದರೆ ₹5 ಲಕ್ಷ ಪರಿಹಾರ ನೀಡಲಾಗುವುದು ಎಂದು ಹೇಳಿದರು.
ಹಾನಿಯ ಕುರಿತು ಅಂದಾಜು ಪಟ್ಟಿಯನ್ನು ಸಿದ್ಧಪಡಿಸುವಂತೆ ಎಲ್ಲ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲಾಡಳಿತದ ಬಳಿ ಒಟ್ಟು ₹106 ಕೋಟಿ ಲಭ್ಯವಿದ್ದು, ಮೂಲಸೌಕರ್ಯ ಅಭಿವೃದ್ಧಿ, ಪರಿಹಾರ ನೀಡಲು ಬಳಕೆ ಮಾಡುವಂತೆ ಸೂಚಿಸಲಾಗಿದೆ ಎಂದು ತಿಳಿಸಿದರು.