Home ಬೆಂಗಳೂರು ನಗರ Covid-19: ಕರ್ನಾಟಕದಲ್ಲಿ 24 ಗಂಟೆಗಳಲ್ಲಿ 34,635 ಮಂದಿ ಗುಣಮುಖ; 38,603 ಹೊಸ ಪ್ರಕರಣ

Covid-19: ಕರ್ನಾಟಕದಲ್ಲಿ 24 ಗಂಟೆಗಳಲ್ಲಿ 34,635 ಮಂದಿ ಗುಣಮುಖ; 38,603 ಹೊಸ ಪ್ರಕರಣ

25
0
bengaluru

ಬೆಂಗಳೂರು:

ಕರ್ನಾಟಕದಲ್ಲಿ ಕಳೆದ 24 ಗಂಟೆಗಳಲ್ಲಿ ಹೊಸದಾಗಿ 38,603 ಕೋವಿಡ್ ಪ್ರಕರಣಗಳು ಮತ್ತು ಹೊಸದಾಗಿ 34,635 ಮಂದಿ ಚೇತರಿಸಿಕೊಂಡಿದ್ದು ಪ್ರಕರಣಗಳು ವರದಿಯಾಗಿದೆ.

ಕರ್ನಾಟಕದಲ್ಲಿ ಇದುವರೆಗೆ ವರದಿಯಾದ ಸೋಂಕು ಪ್ರಕರಣಗಳ ಸಂಖ್ಯೆ 22,42,065ಕ್ಕೆ ಏರಿಕೆಯಾಗಿದೆ ಮತ್ತು ಸದ್ಯ 6,03,639 ಪ್ರಕರಣಗಳು ಸಕ್ರಿಯವಾಗಿವೆ.

ಇಂದು ಕರ್ನಾಟಕದಲ್ಲಿ 476 ಮತ್ತು ಬೆಂಗಳೂರಿನಲ್ಲಿ 239 ಮಂದಿ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

bengaluru

ಬೆಂಗಳೂರಿನಲ್ಲಿ ಅತಿ ಹೆಚ್ಚು 13,338 ಪ್ರಕರಣಗಳು ವರದಿಯಾಗಿದ್ದು ಹಾಸನ 2,324, ಬಳ್ಳಾರಿ 2,322, ಮೈಸೂರು 1,980, ತುಮಕೂರು 1,915, ಬೆಳಗಾವಿ 1,748, ಶಿವಮೊಗ್ಗ 1,322, ಉತ್ತರ ಕನ್ನಡ 1,288, ಹಾಗೂ ಮಂಡ್ಯದಲ್ಲಿ 1,087 ಒಂದು ಸಾವಿರಕ್ಕಿಂತ ಹೆಚ್ಚು ಖಚಿತ ಪ್ರಕರಣಗಳು ವರದಿಯಾಗಿವೆ.

bengaluru

LEAVE A REPLY

Please enter your comment!
Please enter your name here