ಬೆಂಗಳೂರು:
ಝೆಕ್ ರಿಪಬ್ಲಿಕ್ ವತಿಯಿಂದ ರಾಜ್ಯಕ್ಕೆ 500 ಪ್ಲಾಸ್ಮಾ ಘಟಕಗಳನ್ನು ದೇಣಿಗೆಯಾಗಿ ನೀಡಲು ಮುಂದಾಗಿದೆ ಎಂದು ಬೆಂಗಳೂರಿನ ಕಾನಸುಲೇಟ್ ಕಚೇರಿಯ ಕೌನ್ಸಲ್ ತಿಳಿಸಿದರು.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಇಂದು ಭೇಟಿ ಮಾಡಿದ ಬೆಂಗಳೂರಿನ ಕಾನ್ಸುಲೇಟ್ ಕಚೇರಿಯ ಕೌನ್ಸಲ್ ಸಿ.ಎಸ್. ಪ್ರಕಾಶ್ ಈ ವಿಷಯವನ್ನು ತಿಳಿಸಿದರು. ಪ್ರಾಗ್‍ನ ಸೆಂಟ್ರಲ್ ಮಿಲಟರಿ ಆಸ್ಪತ್ರೆಯಲ್ಲಿ ಈಗಾಗಲೇ ಪ್ಲಾಸ್ಮಾವನ್ನು ಸಂಗ್ರಹಿಸಲಾಗಿದ್ದು, ಭಾರತ ತಲುಪುವವರೆಗೆ ಎಲ್ಲಾ ವೆಚ್ಚವನ್ನು ಝೆಕ್ ರಿಪನ್ಲಿಕ್ ಭರಿಸಲಿದೆ ಎಂದು ತಿಳಿಸಿದರು.
ಮುಖ್ಯಮಂತ್ರಿಗಳ ಒಪ್ಪಿಗೆಗಾಗಿ ಕಾಯುತ್ತಿದೆ. ಈ ವಿಚಾರವಾಗಿ ಮುಖ್ಯಮಂತ್ರಿಗಳಿಗೆ ಮನವಿ ಪತ್ರವನ್ನು ನೀಡಿ, ಪ್ಲಾಸ್ಮಾವನ್ನು ರಾಜ್ಯಕ್ಕೆ ತರಲು ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳುವಂತೆ ವಿನಂತಿಸಲಾಯಿತು.
— Shankargowda Patil (@shankargowdabjp) May 15, 2021
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸರ್ಕಾರದ ವಿಶೇಷ ಪ್ರತಿನಿಧಿ ಶಂಕರಗೌಡ ಪಾಟೀಲ್ ಉಪಸ್ಥಿತರಿದ್ದರು.