Home Uncategorized ಝೆಕ್ ರಿಪಬ್ಲಕ್‍ನಿಂದ ರಾಜ್ಯಕ್ಕೆ 500 ಪ್ಲಾಸ್ಮಾ ಘಟಕ ಕೊಡುಗೆ

ಝೆಕ್ ರಿಪಬ್ಲಕ್‍ನಿಂದ ರಾಜ್ಯಕ್ಕೆ 500 ಪ್ಲಾಸ್ಮಾ ಘಟಕ ಕೊಡುಗೆ

8
0
bengaluru

ಬೆಂಗಳೂರು:

ಝೆಕ್ ರಿಪಬ್ಲಿಕ್ ವತಿಯಿಂದ ರಾಜ್ಯಕ್ಕೆ 500 ಪ್ಲಾಸ್ಮಾ ಘಟಕಗಳನ್ನು ದೇಣಿಗೆಯಾಗಿ ನೀಡಲು ಮುಂದಾಗಿದೆ ಎಂದು ಬೆಂಗಳೂರಿನ ಕಾನಸುಲೇಟ್ ಕಚೇರಿಯ ಕೌನ್ಸಲ್ ತಿಳಿಸಿದರು.

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಇಂದು ಭೇಟಿ ಮಾಡಿದ ಬೆಂಗಳೂರಿನ ಕಾನ್ಸುಲೇಟ್ ಕಚೇರಿಯ ಕೌನ್ಸಲ್ ಸಿ.ಎಸ್. ಪ್ರಕಾಶ್ ಈ ವಿಷಯವನ್ನು ತಿಳಿಸಿದರು. ಪ್ರಾಗ್‍ನ ಸೆಂಟ್ರಲ್ ಮಿಲಟರಿ ಆಸ್ಪತ್ರೆಯಲ್ಲಿ ಈಗಾಗಲೇ ಪ್ಲಾಸ್ಮಾವನ್ನು ಸಂಗ್ರಹಿಸಲಾಗಿದ್ದು, ಭಾರತ ತಲುಪುವವರೆಗೆ ಎಲ್ಲಾ ವೆಚ್ಚವನ್ನು ಝೆಕ್ ರಿಪನ್ಲಿಕ್ ಭರಿಸಲಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸರ್ಕಾರದ ವಿಶೇಷ ಪ್ರತಿನಿಧಿ ಶಂಕರಗೌಡ ಪಾಟೀಲ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here