ಹೆಚ್ಚುವರಿ ಪ್ರಯಾಣಿಕರ ದಟ್ಟಣೆಯನ್ನು ನಿವಾರಿಸಲು ದಾನಾಪುರ್-ಬೆಂಗಳೂರು ವಿಶೇಷ ರೈಲುಗಳನ್ನು ಸೆಪ್ಟೆಂಬರ್ ತನಕ ವಿಸ್ತರಣೆ
ಹುಬ್ಬಳ್ಳಿ, ಜುಲೈ 15: ಹೆಚ್ಚುವರಿ ಪ್ರಯಾಣಿಕರ ದಟ್ಟಣೆಯನ್ನು ನಿವಾರಿಸಲು Train Nos. 03251/03252 Danapur-Sir M. Visvesvaraya Terminal Bengaluru-Danapur Daily Special Trains ಅನ್ನು ವಿಸ್ತರಿಸಿರುವುದಾಗಿ ಪೂರ್ವ ಮಧ್ಯ ರೈಲ್ವೆ ತಿಳಿಸಿದೆ.
ದಕ್ಷಿಣ ಪಶ್ಚಿಮ ರೈಲ್ವೆ ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯ ಪ್ರಕಾರ, ಈ ರೈಲುಗಳು ಪ್ರಸ್ತುತ ಸಮಯಪಟ್ಟಿ ಮತ್ತು ನಿಲ್ದಾಣಗಳೊಂದಿಗೆ ಸಂಚರಿಸುತ್ತಲೇ ಇರುತ್ತವೆ.
Train No. 03251 Danapur-Sir M. Visvesvaraya Terminal Bengaluru Daily Special ಜುಲೈ 17ರಿಂದ ಆಗಸ್ಟ್ 31ರವರೆಗೆ ಪ್ರತಿದಿನ ಸಂಚರಿಸಲಿದೆ. ಆದರೆ ಜುಲೈ 27ರಿಂದ ಆಗಸ್ಟ್ 1ರವರೆಗೆ ಸಂಚರಿಸುವುದಿಲ್ಲ.
ಅದೇ ರೀತಿ, Train No. 03252 Sir M. Visvesvaraya Terminal Bengaluru-Danapur Daily Special ಜುಲೈ 19ರಿಂದ ಸೆಪ್ಟೆಂಬರ್ 2ರವರೆಗೆ ಪ್ರತಿದಿನ ಸಂಚರಿಸಲಿದೆ. ಆದರೆ ಜುಲೈ 29ರಿಂದ ಆಗಸ್ಟ್ 3ರವರೆಗೆ ಸಂಚರಿಸುವುದಿಲ್ಲ.