Home ಬೆಂಗಳೂರು ನಗರ Bengaluru: ಡಿಸಿಎಂ ಡಿಕೆ ಶಿವಕುಮಾರ್​ ಸಿಟಿ ರೌಂಡ್ಸ್

Bengaluru: ಡಿಸಿಎಂ ಡಿಕೆ ಶಿವಕುಮಾರ್​ ಸಿಟಿ ರೌಂಡ್ಸ್

14
0
DCM DK Shivakumar City Rounds
DCM DK Shivakumar City Rounds
Advertisement
bengaluru

ಬೆಂಗಳೂರು:

ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಶನಿವಾರ ಬೆಂಗಳೂರಿನಲ್ಲಿ ವಿವಿಧ ಯೋಜನೆಗಳ ಕಾಮಗಾರಿಗಳ ಸ್ಥಿತಿಗತಿ ಕುರಿತು ಖುದ್ದು ಪರಿಶೀಲನೆ ನಡೆಸಿ, ಅಧಿಕಾರಿಗಳಿಂದ ವರದಿ ಪಡೆದುಕೊಂಡರು.

 1. ಈಜೀಪುರ ಮೇಲುಸೇತುವೆ(ಎಲಿವೇಟೆಡ್ ಕಾರಿಡಾರ್) ಕಾಮಗಾರಿ ತಪಾಸಣೆ:

ಕೊರಮಂಗಲ 100 ಅಡಿ ಮುಖ್ಯ ರಸ್ತೆಯಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡುವ ಉದ್ದೇಶದಿಂದ ಈಜೀಪುರ ಸಿಗ್ನಲ್‌ ನಿಂದ ಕೇಂದ್ರೀಯ ಸದನ ಜಂಕ್ಷನ್‌ನವರೆಗಿನ ಮೇಲುಸೇತುವೆ(ಎಲಿವೇಟೆಡ್ ಕಾರಿಡಾರ್)ಯ ಬಾಕಿಯಿರುವ ಕಾಮಗಾರಿಯನ್ನು ಕೂಡಲೆ ಪ್ರಾರಂಭಿಸಿ ತ್ವರಿತವಾಗಿ ಪೂರ್ಣಗೊಳಿಸಲಾಗುವುದೆಂದು ಉಪ ಮುಖ್ಯ ಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವರಾದ ಶ್ರೀ ಡಿ.ಕೆ ಶಿವಕುಮಾರ್* ರವರು ತಿಳಿಸಿದರು.

2.951 ಕಿ.ಮಿ ಉದ್ದದ ಮೇಲುಸೇತುವೆ ನಿರ್ಮಾಣಕ್ಕೆ 2017 ರಲ್ಲಿ ಶಂಕುಸ್ಥಾಪನೆ ಮಾಡಲಾಗಿದ್ದು, ಶೇ. 29 ರಷ್ಟು ಕೆಲಸ ಮಾಡಿ ಸದ್ಯ ಕಾಮಗಾರಿ ನಿಂತಿದೆ. ಮೆಲುಸೇತುವೆ ನಿರ್ಮಾಣ ಮಾಡುತ್ತಿದ್ದ ಸಂಸ್ಥೆ ಕಾಮಾಗರಿಯನ್ನು ನಿಲ್ಲಿಸಿರುವ ಕಾರಣ ಸಂಸ್ಥೆಗೆ ನೋಟೀಸ್ ನೀಡಿ ಟರ್ಮಿನೇಟ್ ಮಾಡಲಾಗಿದೆ. ಇದೀಗ ಹೊಸದಾಗಿ ಟೆಂಡರ್ ಕರೆಯಲಾಗಿದೆ ಎಂದರು.

bengaluru bengaluru

ನಾಲ್ಕು ಪಥದ ಮೇಲುಸೇತವೆಗೆ ಮೇಲುಸೇತುವೆ ಕಾಮಗಾರಿಗೆ ಸುಮಾರು 300 ಕೋಟಿ ರೂ. ವ್ಯಯವಾಗಲಿದೆ.‌ ಮೇಲುಸೇತುವೆ ಕೇಂದ್ರಿಯ ಸದನ ಜಂಕ್ಷನ್ ಮತ್ತು ಸೋನಿ ವರ್ಲ್ಡ್ ಜಂಕ್ಷನ್‌ಗಳ ಮೂಲಕ ಹಾದು ಹೋಗಲಿದೆ. ಕೇಂದ್ರೀಯ ಸದನ ಜಂಕ್ಷನ್ ಮೂಲಕ ತಾವರೆಕರೆ, ಎಂ.ಜಿ.ರಸ್ತೆ, ಹೊಸೂರು ರಸ್ತೆ, ಅಗರ, ಬಿಟಿಎಂ ಲೇಔಟ್, ಕೋರಮಂಗಲ, ಬಿಡಿಎ ಕಾಂಪ್ಲೆಕ್ಸ್, ಸರ್ಜಾಪುರ ಮುಖ್ಯರಸ್ತೆ ಹಾಗೂ ವಿವೇಕನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳು ಹಾದು ಹೋಗುತ್ತವೆ. ಸೋನಿ ವರ್ಲ್ಡ್ ಜಂಕ್ಷನ್ ಮೂಲಕ ಇಂದಿರಾನಗರ, ಕೇಂದ್ರೀಯ ಸದನ, ವಿವೇಕನಗರ, ಜಕ್ಕಸಂದ್ರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳು ಹಾದು ಹೋಗುತ್ತವೆ. ಮೇಲುಸೇತುವೆ ನಿರ್ಮಾಣದಿಂದಾಗಿ ಈ ಭಾಗದಲ್ಲಿ ಶೇ.39.69ರಷ್ಟು ವಾಹನ ದಟ್ಟಣೆ ಕಡಿಮೆಯಾಗಲಿದ್ದು, ಕನಿಷ್ಠ 30 ನಿಮಿಷಗಳಷ್ಟು ಸಮಯ ಉಳಿತಾಯವಾಗಲಿದೆ. ಮೇಲುಸೇತಯವೆ ಕಾಮಗಾರಿ ತ್ವರಿತವಾಗಿ ಮುಗಿದರೆ ಈ ಭಾಗದಲ್ಲಾಗುವ ಸಂಚಾರ ದಟ್ಟಣೆ ಬಹುತೇಕ ಕಡಿಮೆಯಾಗಲಿದ್ದು, ವಾಹನ ಸವಾರರಿಗೆ ಸಂಚಾರದಟ್ಟಣೆಯಿಂದ ಮುಕ್ತಿ ಸಿಗಲಿದೆ.

ಎಲಿವೇಟೆಡ್ ಕಾರಿಡಾರ್ ನಲ್ಲಿ ಬರುವ 7 ಜಂಕ್ಷನ್ ಗಳು:

 1. ಈಜೀಪುರ ಮುಖ್ಯರಸ್ತೆ- ಒಳವರ್ತುಲ ರಿಂಗ್ ರಸ್ತೆ ಜಂಕ್ಷನ್
 2. ಸೋನಿ ವರ್ಲ್ಡ್ ಜಂಕ್ಷನ್
 3. ಕೇಂದ್ರೀಯ ಸದನ ಜಂಕ್ಷನ್
 4. ಕೋರಮಂಗಲ 8ನೇ ಮುಖ್ಯ ರಸ್ತೆ ಜಂಕ್ಷನ್
 5. ಕೋರಮಂಗಲ 60 ಅಡಿ ರಸ್ತೆ ಜಂಕ್ಷನ್
 6. ಕೋರಮಂಗಲ ಐದನೇ ಬ್ಲಾಕ್ 1ಎ ಕ್ರಾಸ್ ರಸ್ತೆ ಜಂಕ್ಷನ್
 7. ಕೊರಮಂಗಲ ಬಿಡಿಎ ಜಂಕ್ಷನ್
 8. ಬನಶಂಕರಿ ಬಸ್ ನಿಲ್ದಾಣ ವೃತ್ತ ಪರಿಶೀಲನೆ:

ಬನಶಂಕರಿ ಬಸ್ ನಿಲ್ದಾಣದ ಬಳಿ 6 ಕಡೆಯಿಂದ ವಾಹನಗಳ ಸಂಚಾರವಿರುವುದರಿಂದ ಹೆಚ್ಚು ಸಂಚಾರ ದಟ್ಟೆಣೆಯಾಗಲಿದ್ದು, ಸಂಚಾರ ದಟ್ಟಣೆಯನ್ನು ನಿವಾರಿಸುವ ಸಲುವಾಗಿ ಬಸ್ ನಿಲ್ದಾಣದ ಜಂಕ್ಷನ್ ಸುತ್ತಲು ಪಾದಚಾರಿ ಮೇಲುಸೇತುವೆ ನಿರ್ಮಾಣ ಹಾಗೂ 2.5 ಕಿ.ಮೀ ಉದ್ದ ಮೇಲುಸೇತುವೆ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ಸಂಚಾರ ದಟ್ಟಣೆ ನಿವಾರಣೆ ಮಾಡಲು ಮತ್ತೊಮ್ಮೆ ಯೋಜನೆ ರೂಪಿಸಿ ಅಂತಿಮ ವಿನ್ಯಾಸವನ್ನು ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

 1. ಇಟ್ಟಮಡುವಿನಲ್ಲಿ ರೂಪುಗೊಳ್ಳುತ್ತಿರುವ ದಿ. ಶ್ರೀ ರಾಜೀವ್ ಗಾಂಧಿ ರವರ ಪ್ರತಿಮೆ ವಿನ್ಯಾಸದ ವೀಕ್ಷಣೆ:

ಶೇಷಾದ್ರಿಪುರಂ ನಟರಾಜ ಚಿತ್ರಮಂದಿರದ ಬಳಿಯ ವೃತ್ತದಲ್ಲಿ ದಿ. ರಾಜೀವ್ ಗಾಂಧಿ ಪ್ರತಿಮೆ ಪ್ರತಿಷ್ಠಾಪಿಸುವ ಸಲುವಾಗಿ ಇಟ್ಟಮಡುವಿನಲ್ಲಿ ರೂಪುಗೊಳ್ಳುತ್ತಿರುವ ದಿ. ಶ್ರೀ ರಾಜೀವ್ ಗಾಂಧಿ ರವರ ಪ್ರತಿಮೆ ವಿನ್ಯಾಸವನ್ನು ವೀಕ್ಷಿಸಿದರು.

 1. ಗಾಂಧಿ ಬಜಾರ್ ನಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿಗಳ ವೀಕ್ಷಣೆ:

ಗಾಂಧಿ ಬಜಾರ್ ನಲ್ಲಿ ಸ್ಮಾರ್ಟ್ ಸಿಟಿ ವತಿಯಿಂದ ರಸ್ತೆ ಅಭಿವೃದ್ಧಿ ಕಾರ್ಯ ಪ್ರಗತಿಯಲ್ಲಿದ್ದು, ಸದರಿ ಕಾಮಗಾರಿಯನ್ನು ವೀಕ್ಷಿಸಿದ ಬಳಿಕ ವ್ಯಾಪಾರಿಗಳು ಹಾಗೂ ಸ್ಥಳೀಯರ ಸಮಸ್ಯೆಗಳನ್ನು ಆಲಿಸಿದರು. ಸಾಕಷ್ಟು ಮಂದಿ ಕಾಮಗಾರಿ ಅವೈಜ್ಞಾನಿಕವಾಗಿದ್ದು, ರಸ್ತೆ ಅಗಲವನ್ನು ಕಡಿಮೆ ಮಾಡಲಾಗಿದೆ. ಅದನ್ನು ಮೊದಲಿನಂತೆಯೇ ವಿಸ್ತರಿಸಿ ಸರಿಯಾದ ರೀತಿಯಲ್ಲಿ ಯೋಜನೆ ರೂಪಿಸಿ ಯಾರೊಬ್ಬರಿಗೂ ಸಮಸ್ಯೆಯಾಗದಂತೆ ಎಲ್ಲರಿಗೂ ಅನುಕೂಲವಾಗುವ ನಿಟ್ಟಿನಲ್ಲಿ ತ್ವರಿತಗತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಿಕೊಡಲು ಮನವಿ ಮಾಡಿದರು.

ಬೀದಿ ಬದಿ ವ್ಯಾಪಾರಿಗಳ ಅನುಕೂಲವಾಗುವ ದೃಷ್ಠಿಯಿಂದ ರಸ್ತೆಯನ್ನು ಅಲಗ ಮಾಡುವ ಹಾಗೂ ಏನಾದರು ಬದಲಾವಣೆಗಳಿದ್ದರೆ ಅರ್ಜಿಗಳನ್ನು ಸಲ್ಲಿಸಿ, ಜೊತೆಗೆ ಸ್ಥಳೀಯ ಹಾಲಿ ಹಾಗೂ ಮಾಜಿ ಶಾಸಕರ ಜೊತೆ ಚರ್ಚಿಸಿ ಕಾನೂನು ಪ್ರಕಾರ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಮಾನ್ಯ ಉಪ ಮುಖ್ಯಮಂತ್ರಿಯವರಾದ ಶ್ರೀ ಡಿ.ಕೆ ಶಿವಕುಮಾರ್ ರವರು ವ್ಯಾಪಾರಸ್ಥರು ಹಾಗೂ ಸ್ಥಳೀಯರಿಗೆ ಭರವಸೆ ನೀಡಿದರು.

ಪರಿಶೀಲನೆಯ ವೇಳೆ ಮಾನ್ಯ ಸಾರಿಗೆ ಸಚಿವರು ಹಾಗೂ ಸ್ಥಳೀಯ ಶಾಸಕರಾದ ಶ್ರೀ ರಾಮಲಿಂಗಾ ರೆಡ್ಡಿ, ಸ್ಥಳೀಯ ಶಾಸಕರಾದ ಶ್ರೀ ಉದಯ್ ಬಿ ಗರುಡಾಚಾರ್, ಆಡಳಿತಗಾರರಾದ ರಾಕೇಶ್ ಸಿಂಗ್, ಮುಖ್ಯ ಆಯುಕ್ತರಾದ ತುಷಾರ್ ಗಿರಿ ನಾಥ್, ಬಿ.ಎಂ.ಆರ್.ಸಿ.ಎಲ್ ವ್ಯವಸ್ಥಾಪಕ ನಿರ್ದೇಶಕರಾದ ಅಂಜುಂ ಫರ್ವೇಸ್, ದಕ್ಷಿಣ ವಲಯ ಆಯುಕ್ತರಾದ ಜಯರಾಮ್ ರಾಯಪುರ, ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾದ ಪ್ರಹ್ಲಾದ್ ಸೇರಿದಂತೆ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.


bengaluru

LEAVE A REPLY

Please enter your comment!
Please enter your name here