Home ಬೆಂಗಳೂರು ನಗರ ಇಂದಿರಾ ಕ್ಯಾಂಟೀನ್ ಕ್ಕೆ 125ಕೋಟಿ ಅನುದಾನ ಮೀಸಲಿಡಲು ಮನವಿ

ಇಂದಿರಾ ಕ್ಯಾಂಟೀನ್ ಕ್ಕೆ 125ಕೋಟಿ ಅನುದಾನ ಮೀಸಲಿಡಲು ಮನವಿ

35
0

ಬೆಂಗಳೂರು:

ಬಿ.ಬಿ.ಎಂ.ಪಿ.ಯ ಬಜೆಟ್ ನಲ್ಲಿ ಇಂದಿರಾ ಕ್ಯಾಂಟೀನ್ ಕ್ಕೆ125ಕೋಟಿ ರೂಪಾಯಿ ಅನುದಾನ ಮೀಸಲು ಇಡಬೇಕು ಎಂದು ಬಿ.ಬಿ.ಎಂ.ಪಿ. ಮಾಜಿ ವಿರೋಧ ಪಕ್ಷದ ನಾಯಕರಾದ ಅಬ್ದುಲ್ ವಾಜಿದ್ ಮನವಿ ಮಾಡಿದ್ದಾರೆ.

ಮಾಜಿ ಪ್ರಧಾನಿ ಇಂದಿರಾ ಗಾಂಧಿಜೀರವರ ನೆನಪಿನಲ್ಲಿ 2017ರಲ್ಲಿ ಬಡವರು ಹಸಿವಿನಿಂದ ಬಳಲಬಾರದು ಎಂದು 5ರೂಪಾಯಿ ಉಪಾಹಾರ 10ಊಟ 174 ವಾರ್ಡ್ಗಗಳಲ್ಲಿ ಸುಸಜ್ಜಿತ ಕ್ಯಾಂಟೀನ್ ಮತ್ತು 25ಮೊಬೈಲ್ ಕ್ಯಾಂಟೀನ್ ‘ಇಂದಿರಾ ಕ್ಯಾಂಟೀನ್’ ಎಂಬ ಹೆಸರಿನಲ್ಲಿ ಬಡವರ ಹಸಿವು ನೀಗಿಸುವ ಯೋಜನೆಯಾಗಿತ್ತು.

ಇದನ್ನೂ ಓದಿ: ಇಂದಿರಾ ಕ್ಯಾಂಟೀನ್ ಮುಚ್ಚುವ ಹುನ್ನಾರ ಬಿ.ಜೆ.ಪಿ.ಸರ್ಕಾರದ ವಿರುದ್ದ ಬೃಹತ್ ಪ್ರತಿಭಟನೆ https://kannada.thebengalurulive.com/protests-against-bjp-for-closing-indira-canteen/

ಕಳೆದ ಮತ್ತು ಈಬಾರಿ ರಾಜ್ಯ ಸರ್ಕಾರ ಅನುದಾನವಿಟ್ಟಿಲ್ಲ. ಇಂದಿರಾ ಕ್ಯಾಂಟೀನ್ ನಡೆಸುವುದು ಆಸಾಧ್ಯವಾಗಿದೆ. ಈ ಬಾರಿ ಬಿ.ಬಿ.ಎಂ.ಪಿ.ಯ ಬಜೆಟ್ ನಲ್ಲಿ ಇಂದಿರಾ ಕ್ಯಾಂಟೀನ್ 125ಕೋಟಿ ರೂಪಾಯಿ ಅನುದಾನ ಮೀಸಲು ಇಡಬೇಕು ಎಂದು ಬಿ.ಬಿ.ಎಂ.ಪಿ.ಮಾಜಿ ವಿರೋಧ ಪಕ್ಷದ ನಾಯಕರಾದ ಅಬ್ದುಲ್ ವಾಜಿದ್ ರವರು ಬಿ.ಬಿ.ಎಂ.ಪಿ.ವಿಶೇಷ ಆಯುಕ್ತರಾದ ತುಳಸಿ ಮದ್ದಿನೇನಿರವರಿಗೆ ಮನವಿ ನೀಡಿದರು.

LEAVE A REPLY

Please enter your comment!
Please enter your name here