ಬೆಂಗಳೂರು:
ಕನ್ನಡ ಅಸ್ಮಿತೆ ವಿಷಯದಲ್ಲಿ ರಾಜ್ಯ ಬಿಜೆಪಿ ಸರ್ಕಾರದ ನಿಲುವುಗಳು ಕನ್ನಡಿಗರ ಸ್ವಾಭಿಮಾನವನ್ನು ಪದೇ ಪದೇ ಕೆಣಕುತ್ತಿದ್ದು, ಇದೀಗ ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡುತ್ತಿರುವುದು ಖಂಡನೀಯ ಎಂದು ಕನ್ನಡ ರಣಧೀರ ಪಡೆ ಹೇಳಿದೆ.
ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ರಣಧೀರರ ಪಡೆಯ ರಾಜ್ಯಾಧ್ಯಕ್ಷ ಬಿ ಹರೀಶ್ ಕುಮಾರ್, ಕೂಡಲೇ ಪ್ರಾಧಿಕಾರ ರಚನೆಯನ್ನು ಕೈಬಿಡಬೇಕು ಎಂದು ಒತ್ತಾಯಿಸಿದ್ದಾರೆ.,
ಅನೇಕ ದಶಕಗಳಿಂದ ಕನ್ನಡಿಗರ ವಿರೋಧವಿದ್ದ ತಿರುವಳ್ಳುವರ್ ಪ್ರತಿಮೆ ಅನಾವರಣ ಮಾಡಿ ತಮಿಳು ಮತಬ್ಯಾಂಕ್ ಓಲೈಕೆಗೆ ಯಡಿಯೂರಪ್ಪ ನೇತೃತ್ವದ ಸರ್ಕಾರ ಕ್ರಮ ಕೈಗೊಂಡಿತ್ತು. ಹಲವಾರು ಕನ್ನಡ ಪರ ಹೋರಾಟಗಾರರ ಹಾಗೂ ಸ್ವಾಭಿಮಾನಿ ಕನ್ನಡಿಗರಿಗೆ ಬರೆ ಎಳೆದು ತನ್ನ ಕನ್ನಡ ವಿರೋಧಿ ನಿಲುವು ತೋರ್ಪಡಿಸಿತು. ಇದೀಗ ಮತ್ತೊಂದು ತಪ್ಪು ಮಾಡಲು ಹೊರಟಿದೆ ಎಂದು ಹೇಳಿದ್ದಾರೆ.
ಮೆಟ್ರೋ ದಲ್ಲಿ ಹಿಂದಿ ಇರಬೇಕು, ಕನ್ನಡ ದ್ವಜ ಬೇಡ ಎನ್ನುವುದರಿಂದ ನಾಡಪ್ರಭು ಬೆಂಗಳೂರು ಕೆಂಪೇಗೌಡರ ಯಲಹಂಕ ನಗರದ ಸೇತುವೆಗೆ ಇತಿಹಾಸವನ್ನೇ ತಿರುಚುವ ಸಾವರಕರ್ ಹೆಸರು ನಾಮಕರಣ ಮಾಡಿ ತನ್ನ ಸರ್ವಾಧಿಕಾರಿ ಧೋರಣೆ ತೋರಿಸಿದೆ.
ಈಗ ಮತ್ತೆ ಯಡಿಯೂರಪ್ಪ ತಮ್ಮ ಹಳೆಯ ಚಾಳಿ ಮುಂದುವರೆಸಿದ್ದು ಮುಂಬರುವ ಬಸವಕಲ್ಯಾಣ ಹಾಗೂ ಬೆಳಗಾವಿ ಚುನಾವಣೆ ಮೇಲೆ ಕಣ್ಣಿಟ್ಟು ಮರಾಠಿಗರ ಮತ ಸೆಳೆಯಲು “ಮರಾಠ ಅಭಿವೃದ್ದಿ ಪ್ರಾಧಿಕಾರ ” ಸ್ಥಾಪಿಸಲು ಮುಂದಾಗಿದ್ದು ಇದು ಕನ್ನಡ-ಕನ್ನಡಿಗ-ಕರ್ನಾಟಕ ವಿರುದ್ದವಾದ ನಡೆ. ಇದರ ಕೆಟ್ಟ ಪರಿಣಾಮ ಮುಂದಿನ ಸ್ವಾಭಿಮಾನಿ ಕನ್ನಡಿಗರು ಅನುಭವಿಸಬೇಕಿದ್ದು ಕರ್ನಾಟಕ ರಾಜ್ಯದಲ್ಲಿ ಹಿಂದಿ ಹೇರಿಕೆ ಉತ್ತುಂಗದಲ್ಲಿ ಇದ್ದು ಮುಂದೆ ಮರಾಠಿಮಯವಾಗಿ ಬೇರೆ ಭಾಷಿಕರು ತಮಿಳು , ತೆಲುಗು , ಮಲಯಾಳಂ, ಮಾರ್ವಾಡಿ ಮುಂತಾದ ಪ್ರಾದಿಕಾರ ರಚನೆಗೆ ನಾಂದಿ ಹಾಡಿದಂತಾಗುತ್ತದೆ . ಭಾಷಾವಾರು ಪ್ರಾಂತ್ಯವಾಗಿ ಕರ್ನಾಟಕ ರಾಜ್ಯ ಉದಯವಾಗಿದ್ದು ಇಂದು ಅದೇ ಕನ್ನಡ ಭಾಷೆ , ಕನ್ನಡಿಗ ಹಾಗೂ ಕರ್ನಾಟಕಕ್ಕೆ ಧಕ್ಕೆ ಆಗುತ್ತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಕನ್ನಡ-ಕನ್ನಡಿಗ-ಕರ್ನಾಟಕಕ್ಕೆ ಸಂಬಂಧ ಪಟ್ಟ ಯಾವುದೇ ಸಮಸ್ಯೆ ಎದುರಾದರೂ ಸ್ಪಂದಿಸಿ ಹೊರಟ್ಟಕ್ಕೆ ಇಳಿಯುವ ಹಾಗೂ ಆ ಹೋರಾಟ ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗಿ ನ್ಯಾಯ ದೊರಕಿಸಿ ಕೊಡುವ ಕರ್ನಾಟಕ ರಣಧೀರ ಪಡೆ ಇದನ್ನು ತೀವ್ರವಾಗಿ ಖಂಡಿಸುತ್ತಿದ್ದು , ಏನಾದರೂ “ಮರಾಠ ಅಭಿವೃದ್ದಿ ಪ್ರಾಧಿಕಾರ “ಗೆ ಚಾಲನೆ ಕೊಟ್ಟರೆ ರಣಧೀರರ ಪಡೆ ನೇತೃತ್ವದಲ್ಲಿ ದೊಡ್ಡ ಮಟ್ಟದ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.