Home ರಾಜಕೀಯ ‘ಬಸವರಾಜ ಬೊಮ್ಮಾಯಿ ಹೆಸರಿನ ಹಿಂದೆ ಇರುವ ಪದನಾಮಗಳು ಶಾಶ್ವತವಲ್ಲ’

‘ಬಸವರಾಜ ಬೊಮ್ಮಾಯಿ ಹೆಸರಿನ ಹಿಂದೆ ಇರುವ ಪದನಾಮಗಳು ಶಾಶ್ವತವಲ್ಲ’

61
0
Designation behind name 'Basavaraj Bommai' is not permanent
Advertisement
bengaluru

ಶಿಗ್ಗಾವಿ ಪಟ್ಟಣದಲ್ಲಿ ಸಿಎಂ ಬೊಮ್ಮಾಯಿ ಭಾವುಕ ನುಡಿ

ಹಾವೇರಿ:

‘ಕ್ಷೇತ್ರದ ಹೊರಗಡೆ ಮಾತ್ರ ನಾನು ಸಿಎಂ. ಶಿಗ್ಗಾವಿ–ಸವಣೂರ ಕ್ಷೇತ್ರದ ಒಳಗಡೆ ಬಂದಾಗ ನಾನು ಕೇವಲ ಬಸವರಾಜ ಬೊಮ್ಮಾಯಿಯಾಗಿ ಉಳಿಯುತ್ತೇನೆ. ಹೆಸರಿನ ಹಿಂದೆ ಇರುವ ಪದನಾಮಗಳು ಶಾಶ್ವತವಲ್ಲ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾವುಕರಾಗಿ ನುಡಿದರು.

ಶಿಗ್ಗಾವಿ ಪಟ್ಟಣದಲ್ಲಿ ಭಾನುವಾರ ವೀರರಾಣಿ ಕಿತ್ತೂರು ಚನ್ನಮ್ಮ ಕಂಚಿನ ಪುತ್ಥಳಿ ಅನಾವರಣ ಮತ್ತು ಪಂಚಮಸಾಲಿ ಸಮುದಾಯ ಭವನದ ಕಾಮಗಾರಿಗೆ ಅಡಿಗಲ್ಲು ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

Designation behind name 'Basavaraj Bommai' is not permanent

‘ನಿಮ್ಮೆಲ್ಲರ ಆಶೀರ್ವಾದದಿಂದ ಈ ರಾಜ್ಯದ ಮುಖ್ಯಮಂತ್ರಿಯಾಗಿ‌‌ ನಿಂತಿದ್ದೇನೆ. ನಾನು ನಿಮ್ಮೂರಿಗೆ ಬಂದಾಗ ರೊಟ್ಟಿ ತಿನ್ನಿಸಿದ್ದೀರಿ,‌ ನವಣೆ ಅಕ್ಕಿ ಅನ್ನ ಮಾಡಿ ಹಾಕಿದ್ದೀರಿ. ಆ ಋಣ ತೀರಿಸಲು ಆಗೋದಿಲ್ಲ ಎಂದು ಬೊಮ್ಮಾಯಿ ಕೆಲಕ್ಷಣ ಗದ್ಗದಿತರಾದರು.

bengaluru bengaluru

ನಂತರ ಪಂಚಮಸಾಲಿ ಸಮಾಜದ ಸಮುದಾಯ ಭವನಕ್ಕೆ ಗುದ್ದಲಿ ಪೂಜೆ ಕಾರ್ಯಕ್ರಮವನ್ನು ದೀಪ ಬೇಳಗುವುದರ ಮೂಲಕ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸಚಿವರುಗಳಾದ ಮುರುಗೇಶ್ ನಿರಾಣಿ, ಶಂಕರ ಪಾಟೀಲ ಮುನೇನಕೊಪ್ಪ, ಶಾಸಕರುಗಳು ಬಸವಗೌಡ ಪಾಟೀಲ್ ಯತ್ನಾಳ್, ಪಂಚಮಸಾಲಿ ಹರಿಹರ ಪೀಠದ ವಾಚನಾನಂದ ಸ್ವಾಮೀಜಿ, ಹಾಗೂ ಕೂಡಲಸಂಗಮ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿಗಳು ಹಾಗೂ ಅನೇಕ ಗಣ್ಯರು ಸಮಾರಂಭದಲ್ಲಿ ಉಪ್ಥಿತರಿದ್ದರು.


bengaluru

LEAVE A REPLY

Please enter your comment!
Please enter your name here