Home ಮಂಗಳೂರು ಮಂಗಳೂರು ವಿಮಾನ ನಿಲ್ದಾಣದಲ್ಲಿ ದುಬೈಗೆ ತೆರಳುತ್ತಿದ್ದ ಪ್ರಯಾಣಿಕರಿಂದ ₹ 2.6 ಕೋಟಿ ಮೌಲ್ಯದ ವಜ್ರ ವಶ

ಮಂಗಳೂರು ವಿಮಾನ ನಿಲ್ದಾಣದಲ್ಲಿ ದುಬೈಗೆ ತೆರಳುತ್ತಿದ್ದ ಪ್ರಯಾಣಿಕರಿಂದ ₹ 2.6 ಕೋಟಿ ಮೌಲ್ಯದ ವಜ್ರ ವಶ

35
0
Mangaluru International Airport

ಮಂಗಳೂರು:

ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಎಂಐಎ) ಇಬ್ಬರು ಪ್ರಯಾಣಿಕರಿಂದ 2.6 ಕೋಟಿ ರೂಪಾಯಿ ಮೌಲ್ಯದ ವಜ್ರಗಳನ್ನು ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ವಶಪಡಿಸಿಕೊಂಡಿದೆ ಎಂದು ಅಧಿಕೃತ ಮೂಲಗಳು ಸೋಮವಾರ ತಿಳಿಸಿವೆ.

ಶನಿವಾರ ದುಬೈಗೆ ಪ್ರಯಾಣ ಬೆಳೆಸಲು ಮುಂದಾಗಿದ್ದ ಭಟ್ಕಳದ ಅನಸ್ ಮತ್ತು ಅಮರ್ ಎಂಬ ಇಬ್ಬರು ಪ್ರಯಾಣಿಕರಿಂದ ವಜ್ರಗಳನ್ನು ವಿಮಾನ ನಿಲ್ದಾಣದಲ್ಲಿ ಸಿಐಎಸ್‌ಎಫ್ ಸಿಬ್ಬಂದಿಯ ಸಹಾಯದಿಂದ ಡಿಆರ್‌ಐ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ವಜ್ರ ಸಾಗಿಸುತ್ತಿರುವ ಕುರಿತು ಖಚಿತ ಮಾಹಿತಿ ಮೇರೆಗೆ ಐಆರ್‌ಐ ಅಧಿಕಾರಿಗಳು, ವಲಸೆ ಕೌಂಟರ್‌ನಲ್ಲಿ ನಡೆದ ತೀವ್ರ ದೈಹಿಕ ತಪಾಸಣೆಯ ಸಮಯದಲ್ಲಿ ಪ್ರಯಾಣಿಕರೊಬ್ಬರ ಶೂಗಳಲ್ಲಿ ಅಡಗಿಸಿಟ್ಟಿದ್ದ ಎರಡು ಪ್ಯಾಕೆಟ್ ವಜ್ರಗಳು ಪತ್ತೆಯಾಗಿವೆ.

ಹೆಚ್ಚಿನ ತನಿಖೆಗಾಗಿ ಸಿಐಎಸ್‌ಎಫ್ ಸಿಬ್ಬಂದಿ ಇಬ್ಬರು ಪ್ರಯಾಣಿಕರನ್ನು ಡಿಆರ್‌ಐ ಅಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

LEAVE A REPLY

Please enter your comment!
Please enter your name here