Home Uncategorized Direct Tax: ಒಟ್ಟು ನೇರ ತೆರಿಗೆ ಸಂಗ್ರಹ ಬರೋಬ್ಬರಿ ಶೇ 26ರಷ್ಟು ಹೆಚ್ಚಳ

Direct Tax: ಒಟ್ಟು ನೇರ ತೆರಿಗೆ ಸಂಗ್ರಹ ಬರೋಬ್ಬರಿ ಶೇ 26ರಷ್ಟು ಹೆಚ್ಚಳ

4
0
Advertisement
bengaluru

ನವದೆಹಲಿ: ದೇಶದ ಒಟ್ಟು ನೇರ ತೆರಿಗೆ (Direct Tax) ಸಂಗ್ರಹ 23ನೇ ಹಣಕಾಸು ವರ್ಷದಲ್ಲಿ ಈವರೆಗೆ ಶೇಕಡಾ 26ರಷ್ಟು ಹೆಚ್ಚಳವಾಗಿದ್ದು, 13.63 ಲಕ್ಷ ಕೋಟಿ ರೂ. ಆಗಿದೆ. ಮರುಪಾವತಿಗೆ ಸರಿಹೊಂದಿಸುವ ಮೊದಲು ಈ ವರ್ಷ ನೇರ ತೆರಿಗೆಗಳ ಒಟ್ಟು ಸಂಗ್ರಹ 13.63 ಲಕ್ಷ ಕೋಟಿ ರೂ. ಆಗಿದೆ. ಕಳೆದ ವರ್ಷ ಇದು 10.83 ಲಕ್ಷ ಕೋಟಿ ರೂ. ಇತ್ತು ಎಂದು ನೇರ ತೆರಿಗೆಗಳ ಕೇಂದ್ರೀಯ ಮಂಡಳಿ (CBDT) ಪ್ರಕಟಣೆಯಲ್ಲಿ ತಿಳಿಸಿದೆ. ಮರುಪಾವತಿಗಳನ್ನು ಸರಿಹೊಂದಿಸಿದ ಬಳಿಕ ನಿವ್ವಳ ನೇರ ತೆರಿಗೆ ಸಂಗ್ರಹ 11.35 ಲಕ್ಷ ಕೋಟಿ ರೂ. ಆಗಿದೆ. ಕಳೆದ ವರ್ಷ ಇದು 9.47 ಲಕ್ಷ ಕೋಟಿ ರೂ. ಇತ್ತು ಎಂದು ಮಂಡಳಿ ತಿಳಿಸಿದೆ.

ಡಿಸೆಂಬರ್​ 17ರ ವರೆಗೆ 2.28 ಲಕ್ಷ ಕೋಟಿ ಮರುಪಾವತಿ ಮಾಡಲಾಗಿದೆ. ಇದು ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇಕಡಾ 68ರಷ್ಟು ಹೆಚ್ಚಾಗಿದೆ. ಹಿಂದಿನ ವರ್ಷ 1.35 ಲಕ್ಷ ಕೋಟಿ ಆಗಿತ್ತು. ನೇರ ತೆರಿಗೆಗಳ ಒಟ್ಟು ಸಂಗ್ರಹದಲ್ಲಿ ಕಾರ್ಪೊರೇಷನ್ ತೆರಿಗೆ 7.25 ಲಕ್ಷ ಕೋಟಿ ರೂ., ಸೆಕ್ಯುರಿಟೀಸ್ ಟ್ರಾನ್ಸಾಕ್ಷನ್ ಟ್ಯಾಕ್ಸ್ ಒಳಗೊಂಡಂತೆ ಆದಾಯ ತೆರಿಗೆ 6.35 ಲಕ್ಷ ಕೋಟಿ ರೂ. ಇದೆ ಎಂದು ಸಿಬಿಡಿಟಿ ತಿಳಿಸಿದೆ.

ಇದನ್ನೂ ಓದಿ: Direct Tax Collection: ನೇರ ತೆರಿಗೆ ಸಂಗ್ರಹದಲ್ಲಿ ಶೇ 24ರಷ್ಟು ಹೆಚ್ಚಳ; ಹಣಕಾಸು ಸಚಿವಾಲಯ ಮಾಹಿತಿ

ಮುಂಗಡ ತೆರಿಗೆ 5.21 ಲಕ್ಷ ಕೋಟಿ ರೂ, ಟ್ಯಾಕ್ಸ್ ಡಿಡಕ್ಟೆಡ್ ಎಟ್ ಸೋರ್ಸ್ 6.45 ಲಕ್ಷ ಕೋಟಿ ರೂ, ಸೆಲ್ಫ್ ಅಸೆಸ್​ಮೆಂಟ್ ಟ್ಯಾಕ್ಸ್ 1.40 ಲಕ್ಷ ಕೋಟಿ ರೂ, ರೆಗ್ಯುಲರ್ ಅಸೆಸ್​​ಮೆಂಟ್ ಟ್ಯಾಕ್ಸ್ 46,244 ಕೋಟಿ ರೂ, ಇತರ ಮೂಲಗಳಿಂದ ಸ್ವೀಕರಿಸಿದ ತೆರಿಗೆ 11,237 ಕೋಟಿ ರೂ. ಆಗಿದೆ ಎಂದು ಮಂಡಳಿ ತಿಳಿಸಿದೆ.

bengaluru bengaluru

ಪ್ರಸಕ್ತ ವರ್ಷದ ಸಂಚಿತ ಮುಂಗಡ ತೆರಿಗೆ ಮೊದಲ, ಎರಡನೇ ಹಾಗೂ ಮೂರನೇ ತ್ರೈಮಾಸಿಕಗಳಲ್ಲಿ 5.21 ಲಕ್ಷ ಕೋಟಿ ರೂ. ಇತ್ತು. ಕಳೆದ ವರ್ಷ ಇದು 4.62 ಲಕ್ಷ ಕೋಟಿ ರೂ. ಆಗಿತ್ತು. ಒಟ್ಟು ಶೇಕಡಾ 12.83ರ ಬೆಳವಣಿಗೆ ಸಾಧಿಸಲಾಗಿದೆ. ಸಲ್ಲಿಕೆ​ಯಾಗಿರುವ ಆದಾಯ ತೆರಿಗೆ ರಿಟರ್ನ್ಸ್ ಅನ್ನು ದೃಢೀಕರಿಸುವ ಈ ಬಾರಿ ವೇಗಪಡೆದುಕೊಂಡಿದೆ. ಡಿಸೆಂಬರ್ 17ರ ಒಳಗೆ ಶೇಕಡಾ 96.5ರಷ್ಟು ದೃಢೀಕರಣ ಪ್ರಕ್ರಿಯೆ ಮುಗಿದಿದೆ. ಇದು ಪ್ರಸ್ತುತ ಹಣಕಾಸು ವರ್ಷದಲ್ಲಿ ನೀಡಿದ ಮರುಪಾವತಿಗಳ ಸಂಖ್ಯೆಯಲ್ಲಿ ಶೇಕಡಾ 109ರಷ್ಟು ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಸಿಬಿಡಿಟಿ ತಿಳಿಸಿದೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ


bengaluru

LEAVE A REPLY

Please enter your comment!
Please enter your name here