Home ಬೆಂಗಳೂರು ನಗರ ಬಿ.ಕೆ.ಹರಿಪ್ರಸಾದ್ ಹೇಳಿಕೆಯಿಂದ ತಿರುವು – ಅಶ್ವತ್ಥನಾರಾಯಣ್

ಬಿ.ಕೆ.ಹರಿಪ್ರಸಾದ್ ಹೇಳಿಕೆಯಿಂದ ತಿರುವು – ಅಶ್ವತ್ಥನಾರಾಯಣ್

33
0
Divergence from BK Hariprasad statement — BJP Leader Ashwath Narayan
Divergence from BK Hariprasad statement — BJP Leader Ashwath Narayan

ಬೆಂಗಳೂರು:

ಕಾಂಗ್ರೆಸ್ಸಿನ ಹಿರಿಯ ಮುಖಂಡ ಬಿ.ಕೆ.ಹರಿಪ್ರಸಾದ್ ಅವರು ನೀಡಿದ ಹೇಳಿಕೆ ಒಂದು ತಿರುವು ಕೊಡಲಿದೆ ಎಂಬ ಭಾವನೆ ನಮಗಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವತ್ಥನಾರಾಯಣ್ ಅವರು ತಿಳಿಸಿದರು.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು ಪ್ರಶ್ನೆಗೆ ಉತ್ತರ ನೀಡಿದರು. ಇವತ್ತು ಕಾಂಗ್ರೆಸ್ಸಿನ ಬಿ.ಕೆ.ಹರಿಪ್ರಸಾದ್ ಅವರು, ಸಿದ್ದರಾಮಯ್ಯನವರ ಬಜೆಟ್‍ನಲ್ಲಿ ಸಣ್ಣ ಸಣ್ಣ ಸಮುದಾಯ, ಒಬಿಸಿ ಸಮುದಾಯಕ್ಕೆ ಅನುದಾನ ಕೊಟ್ಟಿಲ್ಲವೆಂದು ಸತ್ಯದ ಮಾತನಾಡಿದ್ದಾರೆ ಎಂದರು.

ಅಧಿಕಾರ ಇಲ್ಲದಾಗ ಸಿದ್ದರಾಮಯ್ಯನವರಿಗೆ ಅಹಿಂದ ಜ್ಞಾಪಕಕ್ಕೆ ಬರುತ್ತದೆ. ಅಧಿಕಾರ ಬಂದಾಗ ತಳ ಸಮುದಾಯ, ಸಣ್ಣ ಸಣ್ಣ ಸಮುದಾಯ, ಅಹಿಂದದವರ ನೆನಪಾಗುವುದಿಲ್ಲ. ಅವರಿಗೆ ಬಜೆಟ್‍ನಡಿ ಅನುದಾನವೂ ಸಿಗುವುದಿಲ್ಲ. ಅವರು ಕೇವಲ ಒನ್ ವೇನಲ್ಲಿ ಹೋಗುತ್ತಾರೆ. ಒಂದು ಸಮುದಾಯಕ್ಕೆ, ಒಂದು ಮತದವರಿಗೆ ವಿಶೇಷ ಅನುದಾನವನ್ನು ನೀಡುತ್ತಾರೆ ಎಂದು ಆಕ್ಷೇಪಿಸಿದರು.

ಉತ್ತರ ಕನ್ನಡ, ದಕ್ಷಿಣ ಕನ್ನಡ ಭಾಗದಲ್ಲಿ ವಾಸಿಸುವ ಬಿಲ್ಲವರು, ಈಡಿಗರಿಗೆ ಕೊಡಬೇಕಾದ ಹಣವನ್ನು ಕೊಟ್ಟಿಲ್ಲ ಎಂಬ ಸತ್ಯವನ್ನು ಅವರು ವ್ಯಕ್ತಪಡಿಸಿದ್ದಾರೆ. ಒಂದೇ ವರ್ಗಕ್ಕೆ ಸಾವಿರಾರು ಕೋಟಿ ಅನುದಾನ ಕೊಟ್ಟು ಸಿದ್ದರಾಮಯ್ಯ ಮತಬ್ಯಾಂಕ್ ರಾಜಕಾರಣವನ್ನು ಮಾಡುತ್ತಿದ್ದಾರೆ. ಎಸ್‍ಸಿ, ಎಸ್‍ಟಿ ವರ್ಗಕ್ಕೆ ಇಟ್ಟ ಹಣವನ್ನೂ ಬೇರೆ ವಿಷಯಕ್ಕೆ ವಿನಿಯೋಗ ಮಾಡಿದ್ದಾರೆ. ಅವರ ಪಾರ್ಟಿಯವರೇ ಮುಖ್ಯಮಂತ್ರಿ ಮಾಡಲೂ ಗೊತ್ತು; ಇಳಿಸೋದೂ ಗೊತ್ತು ಎಂದು ಹೇಳಿದ್ದಾರೆ. ದೆಹಲಿ ರಾಜಕಾರಣವನ್ನು ಹತ್ತಿರದಿಂದ ಕಂಡಿರುವ ಹಿರಿಯ ರಾಜಕಾರಣಿ ಬಿ.ಕೆ.ಹರಿಪ್ರಸಾದ್ ಹೇಳಿದ್ದರಲ್ಲಿ ಸತ್ಯ ಇದೆ ಎಂದು ವಿಶ್ಲೇಷಿಸಿದರು.

ವಿಪಕ್ಷಗಳ ಎಲ್ಲ ಮುಖಂಡರನ್ನು ಆಚೆ ಇಟ್ಟು ಸಿದ್ದರಾಮಯ್ಯನವರು ಸರ್ವಾಧಿಕಾರಿಯಂತೆ ವರ್ತಿಸಿದ್ದಾರೆ. ಅದರಿಂದ ಬಜೆಟ್ ಕುರಿತು ಮಾತನಾಡಲು ವಿಪಕ್ಷದವರಿಗೆ ಅವಕಾಶ ಸಿಕ್ಕಿಲ್ಲ ಎಂದು ಪ್ರಶ್ನೆಗೆ ಉತ್ತರ ನೀಡಿದರು.

ಪಿಎಸ್‍ಐಗಳ ನೇಮಕಾತಿ ಅಕ್ರಮದ ಕುರಿತು ನ್ಯಾಯೋಚಿತ ತನಿಖೆ ಮಾಡಿ ಎಂದು ಹೇಳಿದ ಅವರು, ನ್ಯಾಯೋಚಿತ ತನಿಖೆಯನ್ನು ಪಕ್ಷ ಸ್ವಾಗತಿಸುತ್ತದೆ ಎಂದು ತಿಳಿಸಿದರು. ಹಿಂದೆ ಪಿಎಸ್‍ಐಗಳ ನೇಮಕಾತಿಯಲ್ಲಿ ಅಕ್ರಮ ಆಗಿದೆ ಎಂದು ನಮ್ಮ ಬಿಜೆಪಿ ಸರಕಾರ ಇದರ ಕುರಿತು ಸಮಗ್ರ ತನಿಖೆಗೆ ಆದೇಶ ಮಾಡಿತ್ತು. ಆಗ ವಿರೋಧ ಪಕ್ಷದಲ್ಲಿದ್ದ ಕಾಂಗ್ರೆಸ್‍ನವರು ಇದರ ಕುರಿತು ತೀವ್ರವಾಗಿ ಮಾತನಾಡಿದ್ದರು. ದಾಖಲೆ ಕೊಡುವಂತೆ ಪ್ರಿಯಾಂಕ್ ಖರ್ಗೆಯವರಿಗೆ ನೋಟಿಸ್ ಕೊಟ್ಟಾಗ ‘ಒಬ್ಬ ದಲಿತ ಶಾಸಕರಿಗೆ ನೋಟಿಸ್ ಕೊಟ್ಟದ್ದಾಗಿ’ ಆಕ್ಷೇಪಿಸಿದ್ದರು ಎಂದು ನುಡಿದರು.

ತನಿಖೆಗೆ ನೀಡಿದ್ದು ಸಂತೋಷಕರ. ತನಿಖಾ ವರದಿಯನ್ನು ಜನತೆಯ ಮುಂದಿಡಬೇಕು. ಈ ಹಗರಣದಲ್ಲಿ ಕಾಂಗ್ರೆಸ್ಸಿನ ಅಫಜಲಪುರದ ಶಾಸಕನ ಸಹೋದರ ಭಾಗಿ ಆಗಿರುವುದು ಹಿಂದೆ ತನಿಖೆಯಲ್ಲಿ ಗೊತ್ತಾಗಿದೆ. ಪ್ರಕರಣದಲ್ಲಿ ಕೈವಾಡ ಇದ್ದುದು ಗೊತ್ತಾಗಿ ಡಿ.ಜಿ. ರ್ಯಾಂಕಿನ ಪೊಲೀಸ್ ಅಧಿಕಾರಿಯನ್ನು ಅಮಾನತು ಮಾಡಿದ್ದೇವೆ. ಅವರನ್ನು ಜೈಲಿಗೆ ಹಾಕಿದ್ದು ನಮ್ಮ ಸರಕಾರ. ತನಿಖೆ ಮಾಡಿ ಕ್ರಮ ಕೈಗೊಳ್ಳಲಿ ಎಂದು ತಿಳಿಸಿದರು.

LEAVE A REPLY

Please enter your comment!
Please enter your name here