ಬೆಂಗಳೂರು: ಜಕ್ಕೂರು–ವಿಮಾನ ನಿಲ್ದಾಣ ಮೆಟ್ರೋ ಕಾರಿಡಾರ್ನಲ್ಲಿ ನಡೆಯುತ್ತಿರುವ ನಿಧಾನಗತಿಯ ಕಾಮಗಾರಿಗೆ ಅಸಮಾಧಾನ ವ್ಯಕ್ತಪಡಿಸಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಇಂದು ಸ್ಥಳ ಪರಿಶೀಲನೆ ವೇಳೆ ನಾಗಾರ್ಜುನ ಕನ್ಸ್ಟ್ರಕ್ಷನ್ ಕಂಪನಿ (NCC) ಅಧಿಕಾರಿಗಳಿಗೆ ತೀವ್ರ ಎಚ್ಚರಿಕೆ ನೀಡಿದರು.
ಸ್ಥಳ ಪರಿಶೀಲನೆ ನಡೆಸಿದ ನಂತರ ಡಿಕೆಶಿ ನೇರವಾಗಿ ಹೇಳಿದ್ದು:
“ಟೈಮ್ ಇಸ್ ಮನಿ, ಟೈಮ್ ಇಸ್ ವ್ಯಾಲ್ಯೂ… ಬೆಂಗಳೂರು ಇನ್ನೂ ವಿಳಂಬವನ್ನು ತಾಳುವುದಿಲ್ಲ. ಕೆಲಸ ವೇಗವಾಗಿ ಮಾಡಬೇಕು.”
ಕಾಮಗಾರಿ ನಿಧಾನ – ಅಧಿಕಾರಿಗಳಿಂದಲೇ ಡಿಕೆಶಿಗೆ ದೂರು
ಜಕ್ಕೂರು ಬಳಿಯ ಮೇಲ್ಸೇತುವೆ ಮತ್ತು ಮೆಟ್ರೋ ಕಾಮಗಾರಿ ನೋಡಿಕೊಂಡ ನಂತರ, ನಗರಾಭಿವೃದ್ಧಿ ವಿಭಾಗದ ಎಸಿಎಎಸ್ ತುಷಾರ್ ಗಿರಿಯ್ನಾಥ್ ಡಿಕೆಶಿಗೆ ಸ್ಪಷ್ಟವಾಗಿ ತಿಳಿಸಿದ್ದಾರೆ:
- ಗುತ್ತಿಗೆದಾರರು ಸಭೆಗಳಿಗೆ ಹಾಜರಾಗುವುದಿಲ್ಲ,
- ತಪಾಸಣಾ ಸೂಚನೆಗಳನ್ನು ಪಾಲಿಸಿಲ್ಲ,
- ಕಾಮಗಾರಿ ವೇಗ ಅತ್ಯಂತ ನಿಧಾನವಾಗಿದೆ.
ಇದನ್ನು ಕೇಳಿದ ಡಿಕೆಶಿ NCC ಅಧಿಕಾರಿಗಳ ಕಡೆ ತಿರುಗಿ ಕಠಿಣ ಶಬ್ದದಲ್ಲಿ
“ನಿಮ್ಮ ಕೆಲಸ ಯಾರಿಗೂ ಸಮಾಧಾನಕರವಾಗಿ ಇಲ್ಲ. ಇನ್ನೂ ವಿಳಂಬ ಮಾಡಿದ್ರೆ ನಿಮ್ಮನ್ನು ಬ್ಲಾಕ್ ಮಾಡುತ್ತೇವೆ, ” ಹೇಳಿದರು.
NCC ಅಧಿಕಾರಿ–ಎಸಿಎಎಸ್–ಡಿಕೆಶಿ ನಡುವೆ ವಾಗ್ವಾದ
ಪರಿಶೀಲನೆ ಸಂದರ್ಭದಲ್ಲೇ NCC ಪ್ರತಿನಿಧಿ ಪ್ರೇಮ್ ರೆಡ್ಡಿ ಮತ್ತು ಅಧಿಕಾರಿಗಳ ನಡುವೆ ವಾಗ್ವಾದ ತಲೆದೋರಿತು.
ಅಧಿಕಾರಿಗಳು ತಿಳಿಸಿದ ಮಾಹಿತಿ—
- NCC ನಿಂದಲೇ ಕಾಮಗಾರಿ ತೀವ್ರ ನಿಧಾನ,
- ಪ್ರಗತಿ ವರದಿಗಳು ಸರಿಯಾಗಿ ಸಲ್ಲಿಕೆ ಇಲ್ಲ,
- ಸ್ಥಳೀಯ ತಾಂತ್ರಿಕ ತೊಂದರೆಗಳ ಪರಿಹಾರದಲ್ಲಿ ವಿಳಂಬ.
ಡಿಕೆಶಿ ಮಧ್ಯಪ್ರವೇಶಿಸಿ ಎಚ್ಚರಿಕೆ ನೀಡಿದರು:
“NCC ಆಗಲಿ, ಯಾರು ಆಗಲಿ… ಸಮಯಕ್ಕೆ ಕೆಲಸ ಮಾಡದಿದ್ದರೆ ಮುಂದಿನ ಯಾವುದೇ ಮೆಟ್ರೋ ಗುತ್ತಿಗೆ ಕೊಡೋದಿಲ್ಲ.”
ಹೆಬ್ಬಾಳ–ಎಯರ್ಪೋರ್ಟ್ ಕಾರಿಡಾರ್ ಗಡುವುಗಳು ಮತ್ತೆ ಗಾಳಿಯಲ್ಲ?
ಹಲವು ಗಡುವುಗಳನ್ನು NCC ಮುಂಚೆಯೇ ಘೋಷಿಸಿಕೊಂಡು ನಂತರ ಮುಂದೂಡಿರುವ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದರು:
- ಹೆಬ್ಬಾಳ–ವಿಮಾನ ನಿಲ್ದಾಣ ಗಡುವು ಮುಂದೂಡಲಾಗಿದೆ
- ಗುತ್ತಿಗೆದಾರರು ಉಲ್ಲೇಖಿಸಿರುವ ಡಿಸೆಂಬರ್ 2027 ಮತ್ತು ಜೂನ್ 2027 ಗುರಿಗಳ ಗಡುವು,
- ತಾಂತ್ರಿಕ ಸಮಸ್ಯೆಗಳ ಪರಿಹಾರದಲ್ಲಿ ಅನವಶ್ಯಕ ವಿಳಂಬ.
ಡಿಕೆಶಿ “ಗಡುವನ್ನು ಹಾಳು ಮಾಡ್ಬೇಕಾದರೆ ಜನರಿಗೆ ಏನು ಉತ್ತರ ಕೊಡ್ತೀರಾ? ಬೆಂಗಳೂರಿನ ಟ್ರಾಫಿಕ್ ನಿಮ್ಮ ಕೆಲಸದ ಮೇಲೆ ನಿಂತಿದೆ,” ಹೇಳಿದರು.
ಕೊನೆಯ ಸಂದೇಶ – ಗುತ್ತಿಗೆದಾರರಿಗೆ ಕಠಿಣ ತಾಕೀತು
ಸ್ಥಳ ಪರಿಶೀಲನೆ ಮಾತುಕತೆಯ ಅಂತ್ಯದಲ್ಲಿ ಡಿಕೆಶಿ ಅಂತಿಮವಾಗಿ ಹೇಳಿದ್ದಾರೆ:
“ಇನ್ನು ಮುಂದೆ ಗುತ್ತಿಗೆ ತೆಗೆದುಕೊಳ್ಳೋವರು ಸಮಯಕ್ಕೆ ಕೆಲಸ ಮಾಡಲೇಬೇಕು. ಸಮಯಕ್ಕೆ ಕೆಲಸ ಮಾಡದ ಕಂಪನಿಗಳು ಕರ್ನಾಟಕದಲ್ಲಿ ಅವಕಾಶ ಪಡೆಯುವುದಿಲ್ಲ.”
