Home ರಾಜಕೀಯ ಸುವರ್ಣ ಸೌಧ ಕಟ್ಟಿದ್ದು ಯಾಕೆ? ಬಿಜೆಪಿಗೆ ಜನರ ಬಗ್ಗೆ ಕಾಳಜಿ ಇಲ್ಲ: ಡಿ.ಕೆ ಶಿವಕುಮಾರ್

ಸುವರ್ಣ ಸೌಧ ಕಟ್ಟಿದ್ದು ಯಾಕೆ? ಬಿಜೆಪಿಗೆ ಜನರ ಬಗ್ಗೆ ಕಾಳಜಿ ಇಲ್ಲ: ಡಿ.ಕೆ ಶಿವಕುಮಾರ್

54
0

ಬೆಳಗಾವಿ:

ರಾಜ್ಯದಲ್ಲಿ ಬಿಜೆಪಿ ಸರಕಾರ ಬಂದ ಮೇಲೆ ಬೆಂಗಳೂರು,ಕೃಷ್ಣಾ,ವಿಧಾನಸೌಧ, ಕಚೇರಿ ಬಿಟ್ಟರೆ ಎಲ್ಲಿಯೂ ಬರಲಿಲ್ಲ.ಬೆಳಗಾವಿಯಲ್ಲಿ ಸುವರ್ಣ ವಿಧಾನಸೌಧ ಯಾವ ಉದ್ದೇಶಕ್ಕೆ ನಿರ್ಮಾಣ ಮಾಡಿದ್ದಾರೆ? ಕರ್ನಾಟಕದ ಜನರ ಬಗ್ಗೆ ಸರಕಾರಕ್ಕೆ ಕಳಕಳಿ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಭೀಕರ ಪ್ರವಾಹ ದಲ್ಲಿ ಮನೆ ಮುಳುಗಿ ಹೋಗಿವೆ.ಇಲ್ಲಿನ ಜನರಿಗೆ ಯಾವ ಸೂರು ಕೊಡಲು ಸರಕಾರಕ್ಕೆ ಆಗಲಿಲ್ಲ.ಸಂತ್ರಸ್ತರಿಗೆ ಪರಿಹಾರ ,ಮನೆ ಕೊಡಲು ಸಾಧ್ಯವಾಗಲಿಲ್ಲ.ಅಧಿವೇಶನದಲ್ಲಿ ಕರೆದು ನ್ಯಾಯ ಒದಗಿಸಿಕೊಡುವುದಾಗಿ ಹೇಳಿದರು.ಆದರೆ ಅವರಿಗೆ ಪರಿಹಾರ ಸಿಗಲಿಲ್ಲ.ಆಗ ಬೆಳಗಾವಿಯಲ್ಲಿ ಅಧಿವೇಶನದಲ್ಲಿ ನಿರ್ಣಯ ಮಾಡಲಾಗುವುದು ಎಂದಿದ್ದರು. ಆದರೆ ಬೆಳಗಾವಿಯಲ್ಲಿ ಅಧಿವೇಶನ ಕರೆಯುವ ಬದಲು ಬಿಜೆಪಿಯ ರಾಜ್ಯ ರಾಜಕಾರಣಿ ಸಭೆ ನಡೆಸುತ್ತಿದ್ದಾರೆ ಎಂದು ಅವರು ಆರೋಪಿಸಿದರು.

ಬಿಜೆಪಿ ಸರಕಾರದ ಮೂಲ ಜನರ ಸಮಸ್ಯೆ,ಅಭಿವೃದ್ಧಿ ಬಗ್ಗೆ ಅಲ್ಲ.ಅವರು ಬೆಳಗಾವಿಗೆ ಬಂದು ಎಷ್ಟು ಬೇಕಾದ ರೂ ಸಭೆ ನಡೆಸಲಿ.ಅದು ಅವರ ವಿಚಾರದ ಆದರೆ ವಿನಾಕಾರಣ ಬೆಳಗಾವಿಯಲ್ಲಿ ಸುವರ್ಣ ವಿಧಾನಸೌಧ ನಿರ್ಮಾಣ ಮಾಡಿದ್ದು ನಾವು ಎಂದು ಹೇಳಿಕೊಂಡು ತಿರುಗಾಡುವ ಬೆಳಗಾವಿ ನಾಯಕರು ಈಗ ಎಲ್ಲಿದ್ದಾರೆ? ಅವರು ಯಾಕೆ ಧ್ವನಿ ಎತ್ತುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರೈತರ ಬದುಕಿನಲ್ಲಿ ಯಾವುದೊಂದು ಸಮಾಜ ಗಮನದಲ್ಲಿಟ್ಟುಕೊಂಡು ‌ಸರಕಾರ ಗೋ ಹತ್ಯೆ ನಿಷೇಧ ಮಾಡ ಲು ಹೊರಟ್ಟಿದ್ದಾರೆ.ವಯಸ್ಸಾದ ಗೋವುಗಳನ್ನು ಯಾರು ಖರೀದಿ ಮಾಡುತ್ತಾರೆ.ಗೋ ಹತ್ಯೆ ನಿಷೇಧ ಕಾಯ್ದೆ ತರ ಲಿ ನೋಡಣ ಎಂದರು.ಮಾಜಿ ಸಿಎಂ ಕುಮಾರಸ್ವಾಮಿ ಆರೋಪ ಮಾಡಿರುವ ವಿಷಯಕ್ಕೆ ನಾನು ವೈಯಕ್ತಿಕ ಆರೋಪಕ್ಕೆ ನಾನು ಉತ್ತರ ಕೊಡುವುದಿಲ್ಲ ಎಂದರು.

ಬನಹಟ್ಟಿ ಹೆಲಿಪ್ಯಾಡ್ ನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು,ಈಗ ದೌರ್ಜನ್ಯಕ್ಕೆ ಒಳಗಾದವರ ಮೇ ಲೆ ಒತ್ತಡ ಹೇರಿ ಬೇರೆ ರೀತಿ ಹೇಳಿಕೆ ನೀಡುತ್ತಿದ್ದಾರೆ.ಅವರು ಗೌಪ್ಯವಾಗಿ ನಮ್ಮ ಬಳಿ ಹೇಳಿದ್ದಾರೆ.ಅದರ ಬಗ್ಗೆ ನಾ ನು ಬಹಿರಂಗವಾಗಿ ಮಾತನಾಡುವುದಿಲ್ಲ.ಅವರು ಏನೇ ಹೇಳಿರಲಿ,ಹೆಣ್ಣು ಮಕ್ಕಳ ಮೇಲೆ ಅವರು ದೌರ್ಜನ್ಯ ನಡೆಸಿರೋದು ನಿಜ ತಾನೇ.ಈ ಹಲ್ಲೆಯ ವಿಡಿಯೋ ಇದೆ ತಾನೇ,ಅದರ ಮೇಲೆ ಪ್ರಕರಣ ದಾಖಲಿಸಿ ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.

LEAVE A REPLY

Please enter your comment!
Please enter your name here