ಇಂದಿರಾನಗರ: ಆಚಾರ್ಯ ಶ್ರೀ ರಾಕುಂ ಅಂಧರ ಶಾಲೆ 24ನೇ ಸಂಸ್ಥಾಪನಾ ದಿನಾಚರಣೆ ಮತ್ತು ಅಂಧ ಮಕ್ಕಳಿಂದ ಸಾಂಸ್ಕೃತಿಕ ಸಂಭ್ರಮ.
ಬೆಂಗಳೂರು:
ಇಂದಿರಾನಗರದ ಆಚಾರ್ಯ ಶ್ರೀ ರಾಕುಂ ಅಂಧರ ಶಾಲೆ 24ನೇ ಸಂಸ್ಥಾಪನಾ ದಿನಾಚರಣೆ ಮತ್ತು ಅಂಧ ಮಕ್ಕಳಿಂದ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮವನ್ನು ಸಂಸ್ಥಾಪಕರಾದ ಸ್ವಾಮಿ ರಾಕುಂಜೀರವರು ಉದ್ಘಾಟನೆ ಮಾಡಿದರು.
ಸ್ವಾಮಿ ರಾಕುಂಜೀರವರು ಮಾತನಾಡಿ ಅಂಧ ಮಕ್ಕಳು ಪ್ರತಿಭಾವಂತ, ಚುರುಕಿನ ಮೆದುಳಿನ ಶಕ್ತಿವುಳ್ಳರಾಗಿರುತ್ತಾರೆ ಅವರಿಗೆ ಶಿಕ್ಷಣ, ಉದ್ಯೋಗ ಕ್ಷೇತ್ರದಲ್ಲಿ ಅವರಿಗೆ ಅವಕಾಶ ನೀಡಿದರೆ ಸಾಕು, ಅವರು ಸಾಮಾನ್ಯರಂತೆ ಸಾಧನೆ ಮಾಡಿ, ಅವರ ಕಾಲ ಮೇಲೆ ಸಾಮರ್ಥ್ಯ ಹೊಂದಿರುತ್ತಾರೆ ಎಂದರು.
“ಮೇರುನಟ ಡಾ. ರಾಜ್ ಕುಮಾರ್ ರವರು ಮತ್ತು ನೇತ್ರ ತಜ್ಞರಾದ ಡಾ. ಎಂ.ಸಿ.ಮೋದಿರವರು, ಕರ್ನಾಟಕ ರತ್ನ ಪುನೀತ್ ರಾಜ್ ಕುಮಾರ್ ರವರು ನೇತ್ರಾ ದಾನ ಮಹತ್ವ ಇಡಿ ವಿಶ್ವಕ್ಕೆ ಸಾರಿದರು. ಪ್ರತಿಯೊಬ್ಬ ನಾಗರಿಕರು ನೇತ್ರದಾನ ಮಾಡುವ ಸಂಕಲ್ಪ ಮಾಡಬೇಕು, ವ್ಯಕ್ತಿ ಸತ್ತ ಮೇಲು ಜೀವಂತವಾಗಿ ಇರಬೇಕು ಎಂದರೆ ನೇತ್ರದಾನ ಮಾಡಿ,” ಎಂದರು.

“ನೇತ್ರದಾನದಿಂದ ಕಣ್ಣು ಕಾಣದ ಲಕ್ಷಾಂತರ ಅಂಧರಿಗೆ ಜಗತ್ತು ನೋಡುವ ಅವಕಾಶ ಸಿಗಬಹುದು. ಅಂಧ ಮತ್ತು ಭಾಗಶಃ ಅಂಧ ಮಕ್ಕಳು ಶಿಕ್ಷಣದಲ್ಲಿ ತಮ್ಮ ಪ್ರತಿಭೆ ಸದುಪಯೋಗ ಪಡಿಸಿಕೊಳ್ಳಬೇಕು ಎಂದು 23 ವರ್ಷಗಳ ಹಿಂದೆ ಆಚಾರ್ಯ ಶ್ರೀ ರಾಕುಂ ಅಂಧರ ಉಚಿತ ವಸತಿ ಶಾಲೆ ಆರಂಭಿಸಲಾಯಿತು. 2ಮಕ್ಕಳಿಂದ ಆರಂಭವಾದ ಶಾಲೆ ಇಂದು ಸಾವಿರಾರು ಅಂಧ ಮಕ್ಕಳಿಗೆ ಉಚಿತ ಶಿಕ್ಷಣ ಒದಗಿಸಲಾಗಿದೆ. ಕರ್ನಾಟಕ,ಆಂಧ್ರ,ತೆಲಂಗಾಣ, ತಮಿಳುನಾಡು, ಉತ್ತರ ಭಾರತದಿಂದ ಸಾವಿರಾರು ಅಂಧ ಮಕ್ಕಳು ನಮ್ಮ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ್ದಾರೆ. ನಮ್ಮ ಶಾಲೆಯಲ್ಲಿ ನರ್ಸರಿಯಿಂದ ಮಾಸ್ಟರ್ ಪದವಿವರಗೆ ವಿದ್ಯಾಭ್ಯಾಸ ಮಾಡಲು ಅವಕಾಶ ನೀಡಲಾಗಿದೆ. ನಮ್ಮ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿ ಪೂರ್ಣಗೊಳಿಸಿದ 30ಹೆಚ್ಚು ಯುವಕ,ಯುವತಿಯರಿಗೆ ಶಾಲೆಯಲ್ಲಿ ಉದ್ಯೋಗ ನೀಡಲಾಗಿದೆ. ನೇತ್ರದಾನ ಮಹತ್ವ ಎಲ್ಲರು ಅರಿಯಬೇಕು, ನೇತ್ರದಾನದಿಂದ ಅಂಧರ ಬಾಳಿಗೆ ಬೆಳಕು ಮೂಡಲಿದೆ,” ಎಂದು ಹೇಳಿದರು.
ಇದೇ ವೇಳೆ ಅಂಧ ಮಕ್ಕಳಿಂದ ನಾಟಕ, ನೃತ್ಯರೂಪಕ ಮತ್ತು ಯಕ್ಷಗಾನ ಮತ್ತು ವಿವಿಧ ವೇಷಭೂಷಣ ಫ್ಯಾಶನ್ ಶೋ, ಚತ್ರಗೀತೆ ಸಂಗೀತ ಕಾರ್ಯಕ್ರಮ ಏರ್ಪಡಿಸಿದ್ದರು.

ಸಮಾರಂಭದಲ್ಲಿ ಅತಿಥಿಗಳಾಗಿ ಮಾಜಿ ವಿಧಾನಪರಿಷತ್ ಸದಸ್ಯರಾದ ಆರ್.ವಿ.ವೆಂಕಟೇಶ್, ಮಾಜಿ ಮಹಾಪೌರರಾದ ಸಂಪತ್ ರಾಜ್, ನಿವೃತ್ತ ಐ.ಎ.ಎಸ್.ಬಾಬುರಾವ್ ಮುಡಬಿ, ಮಾಜಿ ಶಾಸಕಿ ಪ್ರಮೀಳ ನೇಸರ್ಗಿ, ಡಾ. ಜಯಪ್ರಕಾಶ್ ಆಳ್ವ, ಐ.ಎನ್.ಟಿ.ಯು.ಸಿ.ಅಧ್ಯಕ್ಷರಾದ ಲಕ್ಷ್ಮೀವೆಂಕಟೇಶ್,ಸಂಜಯ್ ಗಾಬ, ರೆಸ್ಲಿಂಗ್ ಫೆಡರೇಷನ್ ಅಧ್ಯಕ್ಷರಾದ ಗುಣರಂಜನ್ ಶೆಟ್ಟಿ ರವರು ಪಾಲ್ಗೊಂಡಿದ್ದರು.
ಕಾರ್ಯಕ್ರಮದಲ್ಲಿ ಅಪೂರ್ವ ಆಸ್ಪತ್ರೆ ಮಾಲೀಕರಾದ ಡಾ. ಜಗದೀಶ್, ಟಾಪರ್ ಐ.ಎ.ಎಸ್.ಅಕಾಡೆಮಿಯ ಸೋಮಶೇಖರ್ ಹುಲಿಮನಿ, ಗ್ಲೊಬಲ್ ಐ.ಎ.ಎಸ್.ಅಕಾಡೆಮಿ ಡಾ. ಮಣಿ, ಎಸ್.ಸಿ.ಟಿ.ಕಾಲೇಜ್ ಪ್ರಾಂಶುಪಾಲರಾದ ಪ್ರೋಫೆಸರ್ ಹನುಮಂತರಾಜು, ಜೆಡಿಎಸ್ ರಾಜ್ಯ ಘಟಕ ರಾಜ್ಯಾಧ್ಯಕ್ಷರಾದ ಪ್ರಶಾಂತಿ, ಡಾ. ಹೆಡ್ತಿತ್ರಿ ಡಾ ಡಿಕೋಟ್ಟ್, ಸಮಾಜ ಸೇವಕರಾದ ವಿಠ್ಠಲ್ ಶೆಟ್ಟಿ ರವರು ಪಾಲ್ಗೊಂಡಿದ್ದರು.