Home ಬೆಂಗಳೂರು ನಗರ ಡಾ||ಬಿ. ಆರ್. ಅಂಬೇಡ್ಕರ್ ಕ್ರೀಡಾಂಗಣ ನವೀಕರಣ ಕಾಮಗಾರಿಗೆ ಶಂಕುಸ್ಥಾಪನೆ

ಡಾ||ಬಿ. ಆರ್. ಅಂಬೇಡ್ಕರ್ ಕ್ರೀಡಾಂಗಣ ನವೀಕರಣ ಕಾಮಗಾರಿಗೆ ಶಂಕುಸ್ಥಾಪನೆ

454
0

ಸಾರ್ವಜನಿಕರ ಅಭಿಪ್ರಾಯದಂತೆ ಕಾಮಗಾರಿ ಯೋಜನೆಗಳ ಅನುಷ್ಠಾನ — ಸಚಿವ ವಿ.ಸೋಮಣ್ಣ

ಬೆಂಗಳೂರು:

ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಡಾ||ರಾಜ್ ಕುಮಾರ್ ವಾರ್ಡ್ನನಲ್ಲಿರುವ ಡಾ||ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಮುಖ್ಯಮಂತ್ರಿಗಳ ನವನಗರೋತ್ಥನ ಯೋಜನೆಯಡಿ ಕ್ರೀಡಾಂಗಣ ನವೀಕರಣ ಕಾಮಗಾರಿ ಮತ್ತು ಈಜುಕೊಳ ಶಂಕುಸ್ಥಾಪನೆ ಹಾಗೂ ಬ್ಯಾಡ್ಮಿಂಟನ್ ಕೋರ್ಟ್, ಜಾಗಿಂಗ್ ಟ್ರಾಕ್, ಬ್ಯಾಸ್ಕೆಟ್ ಬಾಲ್ ಕೋರ್ಟ್ ಸ್ಕೇಟಿಂಗ್ ರಿಂಗ್ ಉನ್ನತಿಕರಣ ಕಾಮಗಾರಿಗಳ ಗುದ್ದಲಿಪೂಜೆಯನ್ನು ಸ್ಥಳೀಯ ಶಾಸಕರು, ವಸತಿ ಸಚಿವರಾದ ವಿ.ಸೋಮಣ್ಣ ರವರುಗುದ್ದಲಿ ಪೂಜೆ ಪರಿಶೀಲನೆ ಮಾಡಿದರು.

ಮಹಾನಗರ ಪಾಲಿಕೆ ಮಾಜಿ ಸದಸ್ಯರುಗಳಾದ ಕೆ. ಉಮೇಶ್ ಶೆಟ್ಟಿ, ಗಂಗಭರೈಯ್ಯ ಶಕುಂತಲ ಡೊಡ್ಡಲಕ್ಕಪ್ಪ, ಮೋಹನ್ ಕುಮಾರ್, ಜಯರತ್ನ , ರೂಪ ಲಿಂಗೇಶ್ವರ್ ವಾಗೀಶ್ ಮತ್ತು ಗೋವಿಂದರಾಜನಗರ ಬಿ.ಜೆ.ಪಿ.ಮಂಡಲದ ಅಧ್ಯಕ್ಷರಾದ ವಿಶ್ವನಾಥ ಗೌಡರು ಭಾಗವಹಿಸಿದ್ದರು.

Dr. B. R. Ambedkar Stadium Renovation in Basaveshwaranagar 2

ಬಿ.ಬಿ.ಎಂ.ಪಿ.ಇಂಜನಿಯರ್ ವಿಭಾಗ ಮತ್ತು ಬೆಸ್ಕಾಂ,ಜಲಮಂಡಳಿ ,ಸ್ಲಂ ಬೋರ್ಡ್ ಅಧಿಕಾರಿಗಳು ಪಾಲ್ಗೊಂಡಿದ್ದರು.

ಸಚಿವರಾದ ವಿ. ಸೋಮಣ್ಣ ರವರು ಮಾತನಾಡಿ ಸ್ಥಳೀಯ ವಾರ್ಡ್ ಜನರ ಮೂಲಭೂತ ಅವಶ್ಯಕತೆಗಳ ಮಾಹಿತಿ ಸಂಗ್ರಹಿಸಿ , ಯೋಜನೆಗಳನ್ನು ರೂಪಿಸಿ, ಸಾರ್ವಜನಿಕರ ಉಪಯೋಗಕ್ಕೆ ಬರುವಂತೆ ಯೋಜನೆಗಳನ್ನು ಜಾರಿಗೆ ತರುವುದು ನಮ್ಮ ಉದ್ದೇಶ. ಡಾ||ಅಂಬೇಡ್ಕರ್ ಕ್ರೀಡಾಂಗಣವನ್ನು ಹೈಟೆಕ್ ಕ್ರೀಡಾಂಗಣವಾಗಿ ರೂಪಿಸಲಾಗುವುದು.

ಕ್ರೀಡಾಪಟುಗಳಿಗೆ ಉತ್ತೇಜನ ನೀಡಲು 18ಕೋಟಿ ವೆಚ್ಚದಲ್ಲಿ ಮಾದರಿ ಕ್ರೀಡಾಂಗಣ ನಿರ್ಮಾಣ ಮಾಡಲಾಗುವುದು. ಅಗ್ರಹಾರ ದಾಸರಹಳ್ಳಿಯಲ್ಲಿ ಪ್ರಧಾನಿ ನರೇಂದ್ರಮೋದಿರವರು ಸಂದೇಶದಂತೆ ಬಡವರು ವೈದ್ಯಕೀಯ ಚಿಕಿತ್ಯೆ ಸಿಗದೇ ಪ್ರಾಣ ಕಳೆದುಕೊಳ್ಳಬಾರದು, ಪ್ರತಿಯೊಬ್ಬರಿಗೂ ಉತ್ತಮ ವೈದ್ಯಕೀಯ ಚಿಕಿತ್ಯೆ ಸಿಗಬೇಕು ಎಂಬ ವೇದವಾಕ್ಯವನ್ನು ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಅನುಷ್ಟಾನಕ್ಕೆ ತರಲಾಗಿದೆ.

ಅಗ್ರಹಾರ ದಾಸರಹಳ್ಳಿ ವಾರ್ಡ್ನನಲ್ಲಿ ಹೈಟಿಕ್ 200ಹಾಸಿಗೆ ಸಾಮರ್ಥವುಳ್ಳ ಆಸ್ಪತ್ರೆ ನಿರ್ಮಾಣ ಹಂತದಲ್ಲಿದೆ. ಮಾರುತಿ ಮಂದಿರ ವಾರ್ಡ್ನನಲ್ಲಿ ಕಿಡ್ನಿ ಸಮಸ್ಯೆ ಚಿಕಿತ್ಯೆಗೆ ಡಯಾಲಿಸಿಸ್ ಕೇಂದ್ರ ಅತ್ಯಂತ ಕಡಿಮೆ ವೆಚ್ಚದಲ್ಲಿ ಹಾಗೂ ಗೋವಿಂದರಾಜನಗರ ವಾರ್ಡ್ನನಲ್ಲಿ ರೆಫರಲ್ ಆಸ್ಪತ್ರೆ ಆರಂಭಿಸಲಾಗಿದೆ ಈಗಾಗಲೆ ಸಾವಿರಾರು ಶಿಶುಗಳ ಜನನ ರೆಫರಲ್ ಆಸ್ಪತ್ರೆಯಲ್ಲಿ ದಾಖಲಾಗಿದೆ.

ಗರ್ಭಿಣಿ ಸ್ತ್ರಿಯರ ವೈದ್ಯಕೀಯ ತಪಾಸಣೆ, ಹೆರಿಗೆ ಮತ್ತು ಶಿಶುಗಳ ಆರೋಗ್ಯ ಪರೀಕ್ಷೆ ಸ್ಯಾನಿಂಗ್ ಎಲ್ಲವು ಅತ್ಯಂತ ವೆಚ್ಚ ನಿಗದಿ ಪಡಿಸಲಾಗಿದೆ. ಇದೇ ಚಿಕಿತ್ಯೆಗೆ ಖಾಸಗಿ ಆಸ್ಪತ್ರೆಯಲ್ಲಿ 5ರಿಂದ8ಲಕ್ಷ ವೆಚ್ಚವಾಗುತ್ತದೆ . ಸಾಲ ಮಾಡಿ ವೈದ್ಯಕೀಯ ಚಿಕಿತ್ಯೆ ಪಡೆಯುವ ಸಮಸ್ಯೆ ನಿವಾರಣೆಯಾಗಬೇಕು. ಪ್ರತಿಯೊಬ್ಬರಿಗೂ ಉತ್ತಮ ವೈದ್ಯಕೀಯ ಸೇವೆ ಲಭಿಸಬೇಕು, ಎಂದು ಸಚಿವರು ಹೇಳಿದರು.

LEAVE A REPLY

Please enter your comment!
Please enter your name here