Home ಬೆಂಗಳೂರು ನಗರ ಡಾ ಬಿಎಂ ಹೆಗಡೆ ಸೇರಿದಂತೆ ಕರ್ನಾಟಕದ ಐವರಿಗೆ ಪದ್ಮ ಪ್ರಶಸ್ತಿ

ಡಾ ಬಿಎಂ ಹೆಗಡೆ ಸೇರಿದಂತೆ ಕರ್ನಾಟಕದ ಐವರಿಗೆ ಪದ್ಮ ಪ್ರಶಸ್ತಿ

81
0

ನವದೆಹಲಿ:

ಖ್ಯಾತ ವೈದ್ಯ ಡಾ.ಬಿ.ಎಂ.ಹೆಗ್ಡೆ (ಡಾ.ಬೆಳ್ಳೆ ಮೋನಪ್ಪ ಹೆಗ್ಡೆ) ಸೇರಿದಂತೆ ಕರ್ನಾಟಕದ ಐವರಿಗೆ 2021ನೇ ಸಾಲಿನ ಪದ್ಮ ಪ್ರಶಸ್ತಿ ಸಂದಿದೆ. 2021ನೇ ಸಾಲಿನ ಪದ್ಮ ಪ್ರಶಸ್ತಿಗಳಿಗೆ ಆಯ್ಕೆಯಾಗಿರುವವರ ಪಟ್ಟಿ ಸೋಮವಾರ ಪ್ರಕಟಿಸಲಾಗಿದೆ.

ವೈದ್ಯಕೀಯ ಕ್ಷೇತ್ರದಲ್ಲಿ ಡಾ. ಬಿಎಂ ಹೆಗ್ಡೆ ಅವರ ಸೇವೆಯನ್ನು ಗುರುತಿಸಿ ಪದ್ಮ ವಿಭೂಷಣ ಪ್ರಶಸ್ತಿ ಘೋಷಣೆ ಮಾಡಲಾಗಿದ್ದು, ಸಾಹಿತ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಸೇವೆಗಾಗಿ ಖ್ಯಾತ ಬರಹಗಾರ ಡಾ.ಚಂದ್ರಶೇಖರ ಕಂಬಾರ ಮತ್ತು ರಂಗಸಾಮಿ ಲಕ್ಷ್ಮೀನಾರಾಯಣ ಕಶ್ಯಪ್ ಅವರಿಗೆ ಪದ್ಮ ವಿಭೂಷಣ ಪ್ರಶಸ್ತಿ ಘೋಷಣೆ ಮಾಡಲಾಗಿದೆ.

ಅಂತೆಯೇ ಸಾಂಸ್ಕೃತಿಕ ಕ್ಷೇತ್ರದಲ್ಲಿನ ಸೇವೆಗಾಗಿ ಮಾತಾ ಬಿ ಮಂಜಮ್ಮ ಜೋಗತಿ ಅವರಿಗೆ ಪದ್ಮಶ್ರೀ ಪ್ರಶಸ್ತಿ ಘೋಷಣೆ ಮಾಡಲಾಗಿದೆ. ಅಂತೆಯೇ ಕ್ರೀಡಾ ಕ್ಷೇತ್ರದಲ್ಲಿ ಸೇವೆಗಾಗಿ ಕೆವೈ ವೆಂಕಟೇಶ್ ಅವರಿಗೆ ಪ್ರಶಸ್ತಿ ಘೋಷಣೆ ಮಾಡಲಾಗಿದೆ.

Screenshot 66
Screenshot 67
Screenshot 68
Screenshot 69
Screenshot 70

LEAVE A REPLY

Please enter your comment!
Please enter your name here