ಬೆಂಗಳೂರು:
ಕೋವಿಡ್-19 ಲಸಿಕೆ ಅಭಿಯಾನದ ಆರನೇ ದಿನವಾದ ಗುರುವಾರ ಜಯದೇವ ಹೃದ್ರೋಗ ವಿಜ್ಞಾನ ಸಂಸ್ಥೆಯ ಮುಖ್ಯಸ್ಥ ಡಾ.ಸಿ.ಎನ್.ಮಂಜುನಾಥ್ ಲಸಿಕೆ ಪಡೆದರು.
ನಂತರ ತಮ್ಮ ಹೇಳಿಕೆಯಲ್ಲಿ ಅವರು, ಸಾಂಕ್ರಾಮಿಕವನ್ನು ಅಂತ್ಯಗೊಳಿಸಲು ಲಸಿಕೆ ಸ್ವೀಕರಿಸುವುದೊಂದೇ ಮಾರ್ಗ. ನಾನು ಇಂದು ಸ್ವೀಕರಿಸಿದ್ದೇನೆ. ಆರೋಗ್ಯವಾಗಿದ್ದೇನೆ. ಇದು ಸುರಕ್ಷಿತವಾಗಿದೆ ಮತ್ತು ಯಾವುದೇ ಗಂಭೀರ ಅಡ್ಡಪರಿಣಾಮಗಳಿಲ್ಲ. ಆದ್ದರಿಂದ ಆರೋಗ್ಯ ಕಾರ್ಯಕರ್ತರು ಸ್ವಯಂಪ್ರೇರಿತವಾಗಿ ಈ ಲಸಿಕೆ ಸ್ವೀಕರಿಸಬೇಕು ಎಂದು ಕರೆ ನೀಡಿದರು.
ಸಣ್ಣ ಜ್ವರ, ಲಸಿಕೆ ಪಡೆದ ಭಾಗದ ನೋವು ಮತ್ತು ದೇಹದಲ್ಲಿ ಕಾಣಿಸಿಕೊಳ್ಳುವುದು ಲಸಿಕೆಯ ಪರಿಣಾಮವೇ ಹೊರತು ಅಡ್ಡಪರಿಣಾಮವಲ್ಲ. ಹೆಚ್ಚು ಜನರು ಲಸಿಕೆ ಪಡೆಯುವುದು ಜನರ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ ಮತ್ತು ನಿರೀಕ್ಷಿತ ಪ್ರಮಾಣದಲ್ಲಿ ಜನರಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದರು. UNI