Home ಬೆಂಗಳೂರು ನಗರ Cauvery: ಕಾವೇರಿ ವಿಚಾರವಾಗಿ ನಾಳೆ ತುರ್ತು ಸರ್ವಪಕ್ಷ ಸಭೆ, ದಿಲ್ಲಿಗೆ ತೆರಳಿ ಕೇಂದ್ರಕ್ಕೆ ಮನವಿ :...

Cauvery: ಕಾವೇರಿ ವಿಚಾರವಾಗಿ ನಾಳೆ ತುರ್ತು ಸರ್ವಪಕ್ಷ ಸಭೆ, ದಿಲ್ಲಿಗೆ ತೆರಳಿ ಕೇಂದ್ರಕ್ಕೆ ಮನವಿ : ಡಿಸಿಎಂ ಡಿ.ಕೆ. ಶಿವಕುಮಾರ್

6
0
Emergency all-party meeting on Cauvery issue tomorrow (September 13), Delegation to Delhi: DCM DK Shivakumar
Emergency all-party meeting on Cauvery issue tomorrow (September 13), Delegation to Delhi: DCM DK Shivakumar
Advertisement
bengaluru

ಬೆಂಗಳೂರು

“ಕಾವೇರಿ ನದಿ ನೀರು ವಿಚಾರವಾಗಿ ಚರ್ಚೆ ಮಾಡಲು ನಾಳೆ ತುರ್ತು ಸರ್ವಪಕ್ಷ ಸಭೆ ಕರೆಯಲಾಗಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.

ಸಿಎಂ ಸಿದ್ದರಾಮಯ್ಯ, ಸಚಿವರು, ಅಡ್ವೊಕೇಟ್ ಜನರಲ್ ಹಾಗೂ ಅಧಿಕಾರಿಗಳ ಜೊತೆ ಸಭೆ ಬಳಿಕ ಮಂಗಳವಾರ ರಾತ್ರಿ ಮಾಧ್ಯಮಗಳಿಗೆ ಈ ವಿಚಾರ ತಿಳಿಸಿದ ಶಿವಕುಮಾರ್ ಅವರು: “”ಕಾವೇರಿ ವಿಚಾರವಾಗಿ ಚರ್ಚೆ ಮಾಡಲು ಸರ್ವಪಕ್ಷ ಸಭೆ ಕರೆಯಲಾಗಿದೆ. ಹಿರಿಯ ನಾಯಕರು, ಸಂಸದರು, ಸಚಿವರನ್ನು ಸಭೆಗೆ ಆಹ್ವಾನಿಸಲಾಗಿದೆ.”

ನಾಳೆ ದೆಹಲಿಗೆ ತೆರಳುತ್ತಿದ್ದು, ಕೇಂದ್ರ ಸಚಿವರನ್ನು ಭೇಟಿ ಮಾಡಿ ರಾಜ್ಯದ ಸಂಕಷ್ಟ ಪರಿಸ್ಥಿತಿ ಬಗ್ಗೆ ಮನವಿ ಸಲ್ಲಿಸುತ್ತೇನೆ ಎಂದರು.

bengaluru bengaluru

ನಮ್ಮಲ್ಲಿ ನೀರಿದ್ದರೆ ಅದನ್ನು ಬಿಡಲು ಯಾವುದೇ ಅಭ್ಯಂತರವಿರಲಿಲ್ಲ. ಆದರೆ ನಮಗೆ ನೀರಿನ ಹೆಚ್ಚಿನ ತೊಂದರೆ ಎದುರಾಗಿದೆ. ನಮ್ಮಲ್ಲಿ ಮಳೆ ಕೊರತೆ ಎದುರಾಗಿದ್ದು, ನೀರು ಇಲ್ಲವಾಗಿದೆ. ಕುಡಿಯುವ ನೀರು ಶೇಖರಣೆ ನಮ್ಮ ಮೊದಲ ಆದ್ಯತೆಯಾಗಿದೆ. ನಮ್ಮ ಪರಿಸ್ಥಿತಿ ಕುರಿತಾಗಿ ಅಡ್ವೊಕೇಟ್ ಜನರಲ್ ಹಾಗೂ ಅಧಿಕಾರಿಗಳ ಜತೆ ಚರ್ಚೆ ಮಾಡಿದ್ದೇನೆ” ಎಂದು ತಿಳಿಸಿದರು.


bengaluru

LEAVE A REPLY

Please enter your comment!
Please enter your name here