Home ಬೆಂಗಳೂರು ನಗರ ರಸ್ತೆಗೆ ಪುನೀತ್ ಹೆಸರು ನಾಮಕರಣ: ಆದರೆ ಫ್ಲೆಕ್ಸ್ ನಲ್ಲಿ ಅಪ್ಪು ಫೋಟೋನೇ ಇಲ್ಲ

ರಸ್ತೆಗೆ ಪುನೀತ್ ಹೆಸರು ನಾಮಕರಣ: ಆದರೆ ಫ್ಲೆಕ್ಸ್ ನಲ್ಲಿ ಅಪ್ಪು ಫೋಟೋನೇ ಇಲ್ಲ

31
0
Fans angry with political leaders for not having Puneet's photo on flex!
bengaluru

ರಾಜಕೀಯ ನಾಯಕರ ವಿರುದ್ಧ ಫ್ಯಾನ್ಸ್ ಕಿಡಿ!

ಬೆಂಗಳೂರು:

ನಗರದ ಮೈಸೂರು ರಸ್ತೆಯಿಂದ ಬನ್ನೇರುಘಟ್ಟವರೆಗಿನ ರಸ್ತೆಗೆ ಪುನೀತ್ ಹೆಸರನ್ನು ಇಡಲಾಗುತ್ತಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಿದ್ದು, ಇದಕ್ಕಾಗಿ ಹಾಕಿದ ಫ್ಲೆಕ್ಸ್​​ನಲ್ಲಿ ರಾಜಕೀಯ ನಾಯಕರ ಫೋಟೋ ರಾರಾಜಿಸಿದೆ. ಆದರೆ, ಎಲ್ಲಿಯೂ ಪುನೀತ್ ರಾಜ್​ಕುಮಾರ್ ಫೋಟೋ ಇಲ್ಲ. ಇದಕ್ಕೆ ಅಭಿಮಾನಿಗಳ ವಲಯದಿಂದ ಟೀಕೆ ವ್ಯಕ್ತವಾಗುತ್ತಿದೆ.

ಉದ್ಘಾಟನಾ ಸಮಾರಂಭ ಎಂದು ದೊಡ್ಡದಾಗಿ ಫ್ಲೆಕ್ಸ್ ಹಾಕಿಸಲಾಗಿದೆ. ಇದರಲ್ಲಿ ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಂಸದ ತೇಜಸ್ವಿ ಸೂರ್ಯ ಹಾಗೂ ಕಂದಾಯ ಸಚಿವ ಆರ್. ಅಶೋಕ್ ಅವರ ಫೋಟೋಗಳು ಇವೆ. ಆದರೆ ಯಾರಿಗೋಸ್ಕರ ಈ ಕಾರ್ಯಕ್ರಮ ಮಾಡಲಾಗುತ್ತಿದೆಯೋ ಅವರ ಫೋಟೋವನ್ನು ಎಲ್ಲಿಯೂ ಹಾಕಿಲ್ಲ.

ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಪುನೀತ್ ಅವರ ಅಭಿಮಾನಿಗಳು, ಸಾಮಾಜಿಕ ಜಾಲತಾಣದಲ್ಲಿ ರಾಜಕೀಯ ನಾಯಕರನ್ನ ತರಾಟೆಗೆ ತೆಗೆದುಕೊಂಡಿದ್ದಾರೆ.  ‘ಪುನೀತ್ ರಾಜಕುಮಾರ್ ರಸ್ತೆ ನಾಮಕರಣ ಸಮಾರಂಭ ಅಂತೆ, ಆದರೆ ನಮ್ಮ ಅಪ್ಪು ಫೋಟೋ ಹಾಕಬೇಕು ಎಂಬ ಬುದ್ದಿ ಇಲ್ಲ, ಈ ರೀತಿ ರಾಜಕೀಯ ಕಾರ್ಯಕ್ರಮ ಮಾಡಿ ಪ್ರಚಾರ ಪಡೆಯುವ ನೀಚ ರಾಜಕೀಯ ಬಿಡಿ’ ಎಂದು ಪುನೀತ್ ಅಭಿಮಾನಿಯೊಬ್ಬರು ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ. 

LEAVE A REPLY

Please enter your comment!
Please enter your name here