Home Uncategorized FIFA World cup 2022: ಮೊರಾಕ್ಕೊ ವಿರುದ್ಧ ಗೆದ್ದು 3ನೇ ಸ್ಥಾನಕ್ಕೆ ತೃಪ್ತಿಪಟ್ಟ ಕ್ರೋವೇಶಿಯಾಗೆ 223...

FIFA World cup 2022: ಮೊರಾಕ್ಕೊ ವಿರುದ್ಧ ಗೆದ್ದು 3ನೇ ಸ್ಥಾನಕ್ಕೆ ತೃಪ್ತಿಪಟ್ಟ ಕ್ರೋವೇಶಿಯಾಗೆ 223 ಕೋಟಿ ರೂ. ಬಹುಮಾನ!

12
0

ಫಿಫಾ ವಿಶ್ವಕಪ್ ಟೂರ್ನಿಯ 3ನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಮೊರಕ್ಕೊ ತಂಡವನ್ನು ಕ್ರೋವೇಶಿಯಾ ಮಣಿಸಿದೆ. ಕ್ರೋವೇಶಿಯಾ 2-1 ಅಂತರದಲ್ಲಿ ಗೆಲುವು ಸಾಧಿಸುವ ಮೂಲಕ 3ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.

ಇದನ್ನೂ ಓದಿ: FIFA World Cup 2022: ಮೆಸ್ಸಿ ತಂಡ ಫಿಫಾ ವಿಶ್ವಕಪ್ ಗೆದ್ದರೆ ಈ 5 ದಾಖಲೆಗಳು ಸೃಷ್ಟಿಯಾಗಲಿವೆ..!

ಕ್ರೋವೇಶಿಯಾ ತಂಡ ಪಂದ್ಯ ಆರಂಭವಾದ 7ನೇ ನಿಮಿಷದಲ್ಲಿ ಜೋಸ್ಕೋ ಗಾರ್ಡಿಯಲ್ ಸಿಡಿಸಿದ ಗೋಲಿನೊಂದಿಗೆ ಆರಂಭಿಕ ಮುನ್ನಡೆ ಪಡೆಯಿತು. ಇದಾದ ಎರಡೇ ನಿಮಿಷಕ್ಕೆ ಮೊರಕ್ಕೊ ಒಂದು ಗೋಲು ಬಾರಿಸಿ ಸಮಬಲ ಸಾಧಿಸಿತು. ಬಳಿಕ ಎರಡೂ ತಂಡಗಳು ಗೋಲು ಸಿಡಿಸಲು ಭಾರೀ ಪ್ರಯತ್ನ ಮಾಡಿದವು ಆದರೂ ಸ್ವಲ್ಪ ಸಮಯದ ತನಕ ಅದು ಸಾಧ್ಯವಾಗಲಿಲ್ಲ.

42 ನೇ ನಿಮಿಷದಲ್ಲಿ ಮಿಸ್ಲಾವ್ ಒರ್ಸಿಕ್ ಸಿಡಿಸಿದ ಗೋಲು ಕ್ರೋವೇಶಿಯಾ ತಂಡಕ್ಕೆ 2-1 ಅಂತರದ ಮುನ್ನಡೆ ತಂದುಕೊಟ್ಟಿತು. ಮುನ್ನಡೆ ಬೆನ್ನಲ್ಲೇ ಮೊರಕ್ಕೊ ಗೋಲು ಸಿಡಿಸಿ ಸಮಬಲ ಸಾಧಿಸುವ ಪ್ರಯತ್ನ ನಡೆಸಿತು. ಆದರೆ ಇದಕ್ಕೆ ಕ್ರೋವೇಶಿಯಾ ಅವಕಾಶ ನೀಡಲಿಲ್ಲ. ಅಂತಿಮವಾಗಿ ಕ್ರೋವೇಶಿಯಾ 2-1 ಅಂತರದಲ್ಲಿ ಗೆಲುವಿನ ನಗೆ ಬೀರಿತು.

223 ಕೋಟಿ ರೂಪಾಯಿ ಬಹುಮಾನ

ಮೊರಕ್ಕೊ ಮಣಿಸಿ 3ನೇ ಸ್ಥಾನ ಅಲಂಕರಿಸಿದ ಕ್ರೋವೇಶಿಯಾ ತಂಡಕ್ಕೆ 223 ಕೋಟಿ ರೂಪಾಯಿ(27 ಮಿಲಿಯನ್‌ ಡಾಲರ್‌) ಬಹುಮಾನ ಲಭಿಸಿದೆ. ಇನ್ನು ಸೋಲು ಅನಭವಿಸುವ ಮೂಲಕ 4ನೇ ಸ್ಥಾನಕ್ಕೆ ತಪ್ತಿಪಟ್ಟುಕೊಂಡು ಮೊರಕ್ಕೊ ತಂಡಕ್ಕೆ 206 ಕೋಟಿ ರೂ (25 ಮಿಲಿಯನ್‌ ಡಾಲರ್‌) ಬಹುಮಾನ ಮೊತ್ತ ಪಡೆದುಕೊಂಡಿದೆ.

Special memories #FIFAWorldCup | #Qatar2022

— FIFA World Cup (@FIFAWorldCup) December 17, 2022

ಅರ್ಜೆಂಟೀನಾ ಹಾಗೂ ಫ್ರಾನ್ಸ್ ಟ್ರೋಫಿಗಾಗಿ ಸೆಣಸಾಟ

ಫಿಫಾ ವಿಶ್ವಕಪ್ ಟೂರ್ನಿ ಫೈನಲ್ ಪಂದ್ಯಕ್ಕಾಗಿ ಕೌಂಟ್‌ಡೌನ್ ಶುರುವಾಗಿದ್ದು, ಫೈನಲ್‌ನಲ್ಲಿ ಅರ್ಜೆಂಟೀನಾ ಹಾಗೂ ಹಾಲಿ ಚಾಂಪಿಯನ್ ಫ್ರಾನ್ಸ್ ಟ್ರೋಫಿಗಾಗಿ ಸೆಣಸಲಿವೆ. ಈ ಹಿನ್ನೆಲೆಯಲ್ಲಿ ಎಲ್ಲರ ಚಿತ್ತ ನಾಳೆ (ಡಿಸೆಂಬರ್ 18) ಅರ್ಜೆಂಟೀನಾ ಹಾಗೂ ಫ್ರಾನ್ಸ್ ನಡುವೆ ನಡೆಯಲಿರುವ ಪ್ರಶಸ್ತಿ ಸುತ್ತಿನ ಹೋರಾಟದತ್ತ ನೆಟ್ಟಿದೆ.

ವಿಶ್ವದಾದ್ಯಂತ ಲಕ್ಷಾಂತರ ಫುಟ್ಬಾಲ್ ಅಭಿಮಾನಿಗಳು ಈ ಫೈನಲ್‌ಗಾಗಿ ಕುತೂಹಲದಿಂದ ಕಾಯುತ್ತಿದ್ದಾರೆ. ಮೆಸ್ಸಿ ವಿಶ್ವಕಪ್ ಕನಸು ನನಸಾಗಲಿದೆಯೇ ಅಥವಾ ಹಾಲಿ ಚಾಂಪಿಯನ್ ಫ್ರಾನ್ಸ್ ಸತತ 2ನೇ ಬಾರಿ ಗೆಲುವು ಸಾಧಿಸಲಿದೆಯೇ ಎಂಬುದು ಕುತೂಹಲ ಮೂಡಿಸಿದೆ. ಇನ್ನು ಈ ಪಂದ್ಯದಲ್ಲಿ ಚಾಂಪಿಯನ್ ಆದ ತಂಡಕ್ಕೆ 347 ಕೋಟಿ ರೂ ಬಹುಮಾನ ಸಿಗಲಿದ್ದು, ರನರ್ ಅಪ್ ತಂಡಕ್ಕೆ 248 ಕೋಟಿ ರೂ. ದೊರೆಯಲಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

LEAVE A REPLY

Please enter your comment!
Please enter your name here