Home ಬೆಂಗಳೂರು ನಗರ ಗೃಹರಕ್ಷಕ ದಳದವರಿಗಾಗಿ ಚಿತ್ರಗ್ರಹಣ ಮತ್ತು ಕಿರುಚಿತ್ರ ಕಾರ್ಯಾಗಾರ

ಗೃಹರಕ್ಷಕ ದಳದವರಿಗಾಗಿ ಚಿತ್ರಗ್ರಹಣ ಮತ್ತು ಕಿರುಚಿತ್ರ ಕಾರ್ಯಾಗಾರ

60
0

ಬೆಂಗಳೂರು:

ಕರ್ನಾಟಕ ಮಾಧ್ಯಮ ಅಕಾಡೆಮಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಗೃಹರಕ್ಷಕ ದಳ ಹಾಗೂ ಪೌರರಕ್ಷಣಾ ಅಕಾಡೆಮಿ ಇವರ ಸಹಯೋಗದಲ್ಲಿ ಜನರಿ 11 ಮತ್ತು 12 ರಂದು “ಚಿತ್ರಗ್ರಹಣ ಮತ್ತು ಕಿರುಚಿತ್ರ” ಕಾರ್ಯಾಗಾರವನ್ನು ಗೃಹರಕ್ಷಕ ದಳ ಹಾಗೂ ಪೌರರಕ್ಷಣಾ ಅಕಾಡೆಮಿ, ಅಣ್ಣಾಸ್ವಾಮಿ ಮೊದಲಿಯಾರ್ ರಸ್ತೆ, ಬೆಂಗಳೂರು ಇಲ್ಲಿ ಹಮ್ಮಿಕೊಂಡಿದೆ.

WhatsApp Image 2021 01 11 at 12.48.24

ಕಾರ್ಯಾಗಾರದ ಉದ್ಘಾಟನೆಯನ್ನು ಇಂದು ಬೆಳಿಗ್ಗೆ 11.30 ಗಂಟೆಗೆ ಆರಕ್ಷಕ ಮಹಾ ನಿರ್ದೇಶಕರು, ಗೃಹರಕ್ಷಕ ದಳದ ಮಹಾ ಸಮಾದೇಷ್ಟರು, ಪೌರರಕ್ಷಣಾ ನಿರ್ದೇಶಕರು, ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಮಹಾ ನಿರ್ದೇಶಕರು ಹಾಗೂ ರಾಜ್ಯ ವಿಪತ್ತು ಸ್ಪಂದನ ಪಡೆ ಮಹಾ ನಿರ್ದೇಶಕರಾದ ಡಾ. ಅಮರ್ ಕುಮಾರ್ ಪಾಂಡೆ ಅವರು ನೆರವೇರಿಸಿದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರಾದ ಡಾ. ಪಿ.ಎಸ್. ಹರ್ಷ ಅವರು ಪ್ರಾಸ್ತಾವಿಕ ಮಾತಾನಾಡಿದರು. ವಿಜಯ ಕರ್ನಾಟಕ ಸಂಪಾದಕರಾದ ಹರಿಪ್ರಕಾಶ್ ಕೋಣೆಮನೆ ಅವರು ಆಶಯ ಭಾಷಣ ಮಾಡಿದರು.

ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕರಾದ ಸುನೀಲ್ ಅಗರ್ವಾಲ್ ಹಾಗೂ ಹಿರಿಯ ಪತ್ರಕರ್ತರಾದ ಕೆ.ಜಿ.ವಾಸುಕಿ ಅವರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here