ಬೆಂಗಳೂರು:
ರಾಜ್ಯದಲ್ಲಿ ಗುರುವಾರ ಹೊಸದಾಗಿ ಐದು ಓಮೈಕ್ರಾನ್ ಸೋಂಕು ಪ್ರಕರಣಗಳು ವರದಿಯಾಗಿವೆ ಎಂದು ಆರೋಗ್ಯ ಸಚಿವ ಡಾ. ಕೆ ಸುಧಾಕರ್ ತಿಳಿಸಿದ್ದಾರೆ.
Also Read: Karnataka reports five new Omicron cases, tally now 8
ವಿದೇಶದಿಂದ ವಾಪಸ್ ಆದ ಮೂವರು ಸೇರಿದಂತೆ ಒಟ್ಟು 5 ಮಂದಿಗೆ ಓಮೈಕ್ರಾನ್ ಸೋಂಕು ದೃಢಪಟ್ಟಿದೆ ಎಂದು ಸುಧಾಕರ್ ಟ್ವೀಟ್ ಮಾಡಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಓಮೈಕ್ರಾನ್ ಪ್ರಕರಣಗಳ ಒಟ್ಟು ಸಂಖ್ಯೆ 8ಕ್ಕೆ ಏರಿದೆ.
Five more cases of #Omicron have been detected in Karnataka today:
— Dr Sudhakar K (@mla_sudhakar) December 16, 2021
🔹19 yr male returning from UK
🔹36 yr male returning from Delhi
🔹70 yr female returning from Delhi
🔹52 yr male returning from Nigeria
🔹33 yr male returning from South Africa @BSBommai #Omicronindia
ಇಂಗ್ಲೆಂಡ್‌ನಿಂದ ಹಿಂತಿರುಗಿದ 19 ವರ್ಷದ ಯುವಕನಿಗೆ, ನೈಜೀರಿಯಾದಿಂದ ವಾಪಸ್ ಆದ 52 ವರ್ಷದ ವ್ಯಕ್ತಿಗೆ ಹಾಗೂ ದಕ್ಷಿಣ ಆಫ್ರಿಕಾದಿಂದ ಹಿಂತಿರುಗಿದ 33 ವರ್ಷದ ವ್ಯಕ್ತಿಗೆ ಓಮೈಕ್ರಾನ್ ತಗುಲಿದೆ. ದೆಹಲಿಯಿಂದ ಹಿಂತಿರುಗಿದ 36 ವರ್ಷದ ಪುರುಷ ಹಾಗೂ 76 ವರ್ಷದ ಮಹಿಳೆಗೆ ಓಮೈಕ್ರಾನ್ ದೃಢ ಪಟ್ಟಿದೆ ಎಂದು ಸುಧಾಕರ್ ಮಾಹಿತಿ ನೀಡಿದ್ದಾರೆ.