Home ಆರೋಗ್ಯ ಕರ್ನಾಟಕದಲ್ಲಿ ಮತ್ತೆ ಐದು ಓಮೈಕ್ರಾನ್‌ ಪ್ರಕರಣಗಳು ಪತ್ತೆ

ಕರ್ನಾಟಕದಲ್ಲಿ ಮತ್ತೆ ಐದು ಓಮೈಕ್ರಾನ್‌ ಪ್ರಕರಣಗಳು ಪತ್ತೆ

69
0
bengaluru

ಬೆಂಗಳೂರು:

ರಾಜ್ಯದಲ್ಲಿ ಗುರುವಾರ ಹೊಸದಾಗಿ ಐದು ಓಮೈಕ್ರಾನ್‌ ಸೋಂಕು ಪ್ರಕರಣಗಳು ವರದಿಯಾಗಿವೆ ಎಂದು ಆರೋಗ್ಯ ಸಚಿವ ಡಾ. ಕೆ ಸುಧಾಕರ್‌ ತಿಳಿಸಿದ್ದಾರೆ.

Also Read: Karnataka reports five new Omicron cases, tally now 8

ವಿದೇಶದಿಂದ ವಾಪಸ್‌ ಆದ ಮೂವರು ಸೇರಿದಂತೆ ಒಟ್ಟು 5 ಮಂದಿಗೆ ಓಮೈಕ್ರಾನ್‌ ಸೋಂಕು ದೃಢಪಟ್ಟಿದೆ ಎಂದು ಸುಧಾಕರ್‌ ಟ್ವೀಟ್‌ ಮಾಡಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಓಮೈಕ್ರಾನ್‌ ಪ್ರಕರಣಗಳ ಒಟ್ಟು ಸಂಖ್ಯೆ 8ಕ್ಕೆ ಏರಿದೆ.

bengaluru

ಇಂಗ್ಲೆಂಡ್‌ನಿಂದ ಹಿಂತಿರುಗಿದ 19 ವರ್ಷದ ಯುವಕನಿಗೆ, ನೈಜೀರಿಯಾದಿಂದ ವಾಪಸ್‌ ಆದ 52 ವರ್ಷದ ವ್ಯಕ್ತಿಗೆ ಹಾಗೂ ದಕ್ಷಿಣ ಆಫ್ರಿಕಾದಿಂದ ಹಿಂತಿರುಗಿದ 33 ವರ್ಷದ ವ್ಯಕ್ತಿಗೆ ಓಮೈಕ್ರಾನ್‌ ತಗುಲಿದೆ. ದೆಹಲಿಯಿಂದ ಹಿಂತಿರುಗಿದ 36 ವರ್ಷದ ಪುರುಷ ಹಾಗೂ 76 ವರ್ಷದ ಮಹಿಳೆಗೆ ಓಮೈಕ್ರಾನ್‌ ದೃಢ ಪಟ್ಟಿದೆ ಎಂದು ಸುಧಾಕರ್‌ ಮಾಹಿತಿ ನೀಡಿದ್ದಾರೆ.

bengaluru

LEAVE A REPLY

Please enter your comment!
Please enter your name here